ಹರಿತಲೇಖನಿ ದಿನಕ್ಕೊಂದು ಕಥೆ: ಪ್ರೀತಿ ಮತ್ತು ಸಂಬಂಧ

ವೃದ್ಧೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಳು. ಚಿಕಿತ್ಸೆ ನೀಡಿದ ವೈದ್ಯರು ತಮ್ಮ ಕೈಯಿಂದಾದ ಪ್ರಯತ್ನ ಮಾಡಿ ಕೊನೆಗೆ ಕೈಚೆಲ್ಲಿ ‘ಈಗ ಯಾವುದೇ ಚಿಕಿತ್ಸೆ ನೀಡಿದರೂ ಅವರು ಸ್ಪಂದಿಸೋದಿಲ್ಲ. ಅವರ ಜೀವನದ ಕೆಲವೇ ದಿನಗಳು ಉಳಿದಿವೆ. ಮನೆಗೆ ಕರೆದುಕೊಂಡು ಹೋಗಿ‘ ಎಂದರು.

ಮಗ-ಸೊಸೆ ಆ ವೃದ್ಧೆಯನ್ನು ನೋಡಿಕೊಳ್ಳಲು ನರ್ಸ್​ನ್ನು ನೇಮಿಸಿ ಆಫೀಸಿನ ಜಂಜಾಟದಲ್ಲಿ ಮುಳುಗಿದರು. ಹಾಸ್ಟೇಲ್​ನಲ್ಲಿದ್ದ ಪುಟ್ಟ ಮೊಮ್ಮಗ ರಜೆಗೆಂದು ಮನೆಗೆ ಬಂದವನೇ ಅಜ್ಜಿ ಬಳಿ ಹೋಗಿ ಅವಳ ತಲೆ ಮೇಲೆ ಕೈಯಾಡಿಸಿ ‘ನಿಂಗೆ ಏನೂ ಆಗಿಲ್ಲ ಅಜ್ಜಿ, ಬೇಗ ಹುಷಾರಾಗ್ತಿ‘ ಎಂದು ತನ್ನ ಬಾಲಭಾಷೆಯಲ್ಲೇ ನುಡಿದ.

ನಗುವನ್ನೇ ಮರೆತಿದ್ದ ಆ ಅಜ್ಜಿಯ ಮೊಗದಲ್ಲಿ ಅಂದು ನಗು ಅರಳಿತು-ಇನ್ನೂ ಬದುಕಬೇಕು ಎಂಬ ಆಶಾವಾದವೂ ಚಿಗುರೊಡೆಯಿತು. ಸ್ವಲ್ಪ ಹೊತ್ತಲ್ಲೇ ಮತ್ತೆ ಅಜ್ಜಿ ಕೋಣೆಗೆ ಬಂದ ಮಗು ‘ನೀನು ತುಂಬ ಚೆನ್ನಾಗಿ ಅಡುಗೆ ಮಾಡ್ತಿಯಂತೆ, ನನಗಾಗಿ ಅಡುಗೆ ಮಾಡಿ ತುತ್ತು ತಿನಿಸೋದಿಲ್ವೆ?‘ ಎಂದು ಕೇಳಿತು.

ಇದನ್ನು ನೋಡಿ ಗದರಿದ ನರ್ಸ್ ‘ಅವರಿಗೆ ಹುಷಾರಿಲ್ಲ ಅಂತ ಗೊತ್ತಿಲ್ವ ನಿನಗೆ, ಆಚೆ ಹೋಗು. ತೊಂದರೆ ಕೊಡಬೇಡ‘ ಎಂದಳು. ಮಗುವನ್ನು ಗದರಿಸಬೇಡ ಎಂದು ಕಣ್ಸನ್ನೆಯಲ್ಲೇ ನರ್ಸ್​ಗೆ ಸೂಚಿಸಿದಳು ಅಜ್ಜಿ. 

ಮರುದಿನ ಒಂದಿಷ್ಟು ಚೈತನ್ಯ ಬಂತು. ನರ್ಸ್ ನೆರವಿನಿಂದ ಸ್ನಾನ ಮಾಡಿದ ಆಕೆ ‘ನನ್ನನ್ನು ಅಡುಗೆ ಮನೆಗೆ ಕರೆದು ಕೊಂಡು ಹೋಗು‘ ಎಂದಳು. ಅಡುಗೆ ಕೆಲಸದಲ್ಲೂ ನರ್ಸ್​ನಿಂದಲೇ ಸಣ್ಣಪುಟ್ಟ ಸಹಾಯ ಪಡೆದು ಊಟ ತಯಾರಿಸಿಯೇ ಬಿಟ್ಟಳು ಅಜ್ಜಿ.

ಮೊಮ್ಮಗನನ್ನು ನೆಲದ ಮೇಲೆ ಕೂರಿಸಿ, ಕೈತುತ್ತು ತಿನಿಸಿದಳು. ಅಷ್ಟರಲ್ಲೇ, ಆ ವೃದ್ಧೆಯ ಕಣ್ಣಂಚು ಒದ್ದೆಯಾದವು. ‘ಯಾಕೇ ಅಳ್ತಾ ಇದ್ದಿ’ ಎಂದು ಮಗು ಕೇಳಿದಾಗ ‘ಏನಿಲ್ಲ, ನಿನ್ನ ಅಪ್ಪನಿಗೂ ಹೀಗೆ ಕೈತುತ್ತು ಹಾಕಿದ್ದೆ. ಆಗೆಲ್ಲ ಖುಷಿಪಡ್ತಿದ್ದ. ಈಗ ಆತ ಬರೀ ದುಡ್ಡಲ್ಲೇ ಖುಷಿ ಪಡ್ತಾನೆ ಕಣಪ್ಪ, ಹುಷಾರಿಲ್ಲದ ಅಮ್ಮನನ್ನು ಮಾತನಾಡಿಸಲೂ ಆತನಿಗೆ ಪುರುಸೋತ್ತಿಲ್ಲ ನೋಡು’ ಅಂದಾಗ ಥಟ್ಟನೇ ಅಜ್ಜಿ ಕೈ ಹಿಡಿದುಕೊಂಡ ಮಗು ‘ನಾನು ಹಾಸ್ಟೇಲ್​ಗೆ ಹೋಗೋಲ್ಲ. ಇಲ್ಲೇ ಇದ್ದು ಚೆನ್ನಾಗಿ ಓದ್ತೇನೆ. ನಿನಗೆ ಔಷಧ ಕೊಟ್ಟು ಕಾಯಿಲೆ ವಾಸಿ ಮಾಡ್ತೇನೆ’ ಎಂದಿತು. 

ಈ ಪ್ರೀತಿಯ ಮಾತಿಗೆ, ಆಪ್ತತೆಯ ಸ್ಪರ್ಶಕ್ಕೆ ಅಜ್ಜಿ ಮತ್ತೆ ಗೆಲುವಾದಳು..!!

ಇದು ಒಂದು ಮನೆಯ ಕಥೆಯೇನಲ್ಲ, ಕಹಾನಿ ಘರ್ ಘರ್ ಕೀ ಎನ್ನಬಹುದೇನೋ. ಪ್ರೀತಿ ಮತ್ತು ಸಂಬಂಧಗಳಿಗೆ ಇರುವ ಶಕ್ತಿಯೇ ಅಸೀಮ ಮತ್ತು ಅದಮ್ಯವಾದದ್ದು. ಆಸರೆ, ಸಾಂತ್ವನದ ಒಂದು ಮಾತು, ಏನೇ ಆಗಲಿ ಕಷ್ಟವನ್ನು ಮೀರಿ ಬೆಳೆಯೋಣ ಎಂಬ ಭಾವ, ನಮ್ಮವರು ಎಂಬ ಕಳಕಳಿ, ಸಮಷ್ಟಿಯನ್ನು ಸಂವೇದನೆಯಿಂದ ಕಾಣುವ ದೃಷ್ಟಿಕೋನ… ಇದೆಲ್ಲವೂ ಅಸಾಧಾರಣ ಪರಿವರ್ತನೆಗೆ ನಾಂದಿ ಹಾಡಬಲ್ಲವು. ಕೊರಗುವುದನ್ನು ಬಿಟ್ಟು, ಬಾಳುವುದನ್ನು ಕಲಿತು, ಇತರರಿಗೂ ಖುಷಿ ಹಂಚುತ್ತ ಸಾಗುವುದೇ ನಿಜವಾದ ಜೀವನ.

ಕೃಪೆ: ರವೀಂದ್ರ ದೇಶ್ ಮುಖ್. ಸಂಗ್ರಹ: ನರಸಿಂಹಮೂರ್ತಿ ಬರಗೂರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ ಬಿ.ಮುನೇಗೌಡ ಬೆಂಬಲಿಗರ ಸಭೆ..!

ನಿಖಿಲ್ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ JDS ಕಾರ್ಯಕರ್ತರ ಆಕ್ರೋಶದ ಬಿಸಿ.?: ಹುಸ್ಕೂರು ಆನಂದ್ ನೇತೃತ್ವದಲ್ಲಿ

ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ (JDS) ಪಕ್ಷದಲ್ಲಿ ಆಕ್ರೋಶ ಸ್ಪೋಟವಾಗಿದ್ದು, ಬಿ.ಮುನೇಗೌಡ (B.Mine Gowda, ಹುಸ್ಕೂರು ಆನಂದ್ (Huskur Anand), ಬೆಂಬಲಿಗರು ಇಂದು ಸಾಸಲು ಹೋಬಳಿ ಹೊಸಹಳ್ಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸಭೆ ಸೇರಿ,

[ccc_my_favorite_select_button post_id="121521"]
ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು

[ccc_my_favorite_select_button post_id="121435"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ ಭೀತಿ.!| Video ನೋಡಿ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ

ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಪಂದ್ಯದ ವೇಳೆ ನಿಷೇಧಿತ 'ಇ-ಸಿಗರೇಟ್' (Vape) ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

[ccc_my_favorite_select_button post_id="121495"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]