ದೊಡ್ಡಬಳ್ಳಾಪುರ, (ನ.24): ಕಾರ್ತಿಕ ಮಾಸದ ಕಡೆಯ ಅಮಾವಾಸ್ಯೆ ಹಿನ್ನಲೆಯಲ್ಲಿ ಬುಧವಾರ ರಾತ್ರಿ, ತಾಲೂಕಿನ ಚಿಕ್ಕಮಧುರೆ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಶ್ರೀ ಶನಿಮಹಾತ್ಮ ದೇವರಿಗೆ ಹೂವಿನ ವಿಶೇಷ ಅಲಂಕಾರ, ಪೂಜೆ ಸಲ್ಲಿಸಲಾಯಿತು. ಬೆಳಿಗ್ಗಿನಿಂದಲೇ ಭಕ್ತರು ದೇವಾಲಯದ ಆವರಣದಲ್ಲಿ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.
ನೂರಾರು ಮಹಿಳೆಯರು, ಮಕ್ಕಳು ದೇವಾಲಯದ ಪ್ರಾಂಗಣದಲ್ಲಿ ಮಣ್ಣಿನ ಹಣತೆ ಹಚ್ಚಿ ದೇವರಿಗೆ ಹರಕೆ ತೀರಿಸಿ, ವಿಶೇಷ ಪೂಜೆ ಸಲ್ಲಿಸಿದರು. ಕೆಲವರು ತಮ್ಮ ಮಕ್ಕಳ ಹೆಸರಿನಲ್ಲಿ ದೀಪ ಹಚ್ಚಿದರು.
ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು.
ಸಾವಿರಾರು ಭಕ್ತರು ದೀಪೋತ್ಸವವನ್ನ ಕಣ್ತುಂಬಿಕೊಳ್ಳೋಕೆ ಶನಿಮಹಾತ್ಮ ಸನ್ನಿಧಿಯತ್ತ ಹೆಜ್ಜೆ ಹಾಕಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

