ದೊಡ್ಡಬಳ್ಳಾಪುರ, (ನ.25): ಕೃಷಿ ಇಲಾಖೆ ಮತ್ತು ತಾಲ್ಲೂಕು ಕೃಷಿಕ ಸಮಾಜದ ಸಹಯೋಗದೊಂದಿಗೆ ಸಿರಧಾನ್ಯವನ್ನು ಸ್ವಾಗತಿಸಲು ಹಾಗೂ ಪ್ರೋತ್ಸಾಹಿಸುವ ಸಲುವಾಗಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ “ಸಿರಿಧಾನ್ಯಗಳ ಹಬ್ಬ-2022” ಕಾರ್ಯಕ್ರಮವನ್ನು ನವೆಂಬರ್ 26 ರಂದು ಬೆಳಗ್ಗೆ 06.00 ಗಂಟೆಗೆ ದೊಡ್ಡಬಳ್ಳಾಪುರದಲ್ಲಿರುವ ಪರಿವೀಕ್ಷಣಾ ಮಂದಿರದಿಂದ ಹಮ್ಮಿಕೊಳ್ಳಲಾಗಿದೆ.

ನವೆಂಬರ್ 26 ರಂದು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗಲಿರುವ ನಡಿಗೆಯ ಪಥ ದೊಡ್ಡಬ್ಳಾಪುರದ ಪರಿವೀಕ್ಷಣಾ ಮಂದಿರದಿಂದ ನಗರಸಭೆ, ಕೋರ್ಟ್ ರಸ್ತೆ, ತಾಲ್ಲೂಕು ಕಚೇರಿ ರಸ್ತೆ, ತಾಲ್ಲೂಕು ಪಂಚಾಯಿತಿ ರಸ್ತೆ ಮಾರ್ಗವಾಗಿ ಸಾಗಲಿದ್ದು, ನಂತರ ತುಮಕೂರು ರಸ್ತೆಯ ಮೂಲಕ ಸಾಗಿ ಕೆಎಂಎಫ್ ಮುಂಭಾಗದಿಂದ ಪರಿವೀಕ್ಷಣಾ ಮಂದಿರದ ಮುಂಭಾಗದಲ್ಲಿ ಕೊನೆಗೊಳ್ಳಲಿದೆ.

ನಡಿಗೆಗೆ ನೋಂದಾಯಿಸಿದ ರೈತರು ನವೆಂಬರ್ 26 ರಂದು ಬೆಳಿಗ್ಗೆ 5.30 ಗಂಟೆಗೆ ಪರಿವೀಕ್ಷಣಾ ಮಂದಿರದ ಆವರಣದಲ್ಲಿ ಹಾಜರಿರುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
