ದೊಡ್ಡಬಳ್ಳಾಪುರ, (ನ.27): ತಾಲೂಕಿನ ಕಾರನಾಳ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಒಂದು ಕೋಟಿ ಅನುದಾನದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಜಿಪಂ ಮಾಜಿ ಸದಸ್ಯ ಹೆಚ್.ಅಪ್ಪಯ್ಯಣ್ಣ ಚಾಲನೆ ನೀಡಿದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಅನುದಾನದಲ್ಲಿ ಎರಡು ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗುತ್ತಿದ್ದು, ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ವೇಳೆ ತೂಬಗೆರೆ ಗ್ರಾಮಪಂಚಾಯಿತಿ ಸದಸ್ಯ ಮಧುಕುಮಾರ್, ಜೆಡಿಎಸ್ ತಾಲೂಕು ಉಪಾಧ್ಯಕ್ಷ ದೇವರಾಜ್, ಹೋಬಳಿ ಅಧ್ಯಕ್ಷ ಜಗನಾಥ ಚಾರ್, ಜೆಡಿಎಸ್ ವಕ್ತಾರ ಕುಂಟನಹಳ್ಳಿ ಮಂಜುನಾಥ್, ಮುಖಂಡರಾದ ಗೌರೀಶ್, ಜೂಗಾನಹಳ್ಳಿ ಮಂಜುನಾಥ್, ಸುಣ್ಣಗಟ್ಟಹಳ್ಳಿ ಮಂಜುನಾಥ್, ರಾಮಣ್ಣ, ರಾಜ್ ಗೋಪಾಲ್ ಮತ್ತಿತರರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

