ದೊಡ್ಡಬಳ್ಳಾಪುರ, (ಡಿ.6): ರಾಜ್ಯದಲ್ಲಿ ಚಿರತೆ ಉಪಟಳದ ಆತಂಕದ ನಡುವೆಯೇ, ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಾಗುವ ರಸ್ತೆಯಲ್ಲಿ ಚಿರತೆ ಕಂಡುಬಂದಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ ಸಂಜೆ ಘಾಟಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮರುಳುತ್ತಿದ್ದ ಭಕ್ತರ ವಾಹನಗಳಿಗೆ ಲಘುಮೇನಹಳ್ಳಿ ಕ್ರಾಸ್ ಬಳಿ ಚಿರತೆ ಎದುರಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಲಘುಮೇನಹಳ್ಳಿ ಕ್ರಾಸ್ ಸಮೀಪ ಚಿರತೆ ರಸ್ತೆ ದಾಟಿ ತೋಟಕ್ಕೆ ನುಗ್ಗಿದ್ದು, ವಾಹನ ಸವಾರರು ಆತಂಕಕ್ಕೆ ಒಳಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಚನ್ನಾಪುರ ಗ್ರಾಮದ ಅಂಚಿನ ಕುರಿ ದೊಡ್ಡಿಗೆ ನುಗ್ಗಿದ್ದ ಚಿರತೆ ಕುರಿಯನ್ನು ತಿಂದು ಹೋಗಿತ್ತು. ಇದರಿಂದಾಗಿ ಗ್ರಾಮದಲ್ಲಿ ಸಂಜೆ ವೇಳೆ ಜನರು ಹೊರಗೆ ಬರಲು ಸಹ ಆತಂಕಪಡುವಂತಾಗಿತ್ತು.
ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ವತಿಯಿಂದ ಚನ್ನಾಪುರ ಸಮೀಪದ ನಂದಿಬೆಟ್ಟದ ತಪ್ಪಲಿನ ನೀಲಗಿರಿ ತೋಪಿನಲ್ಲಿ ಚಿರತೆ ಸೆರೆಹಿಡಿಯಲು ಬೋನು ಅಳವಡಿಸಲಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಪೊಟೋ ಕೃಪೆ: ಅಂತಾರಾಷ್ಟ್ರೀಯ ಛಾಯಾಗ್ರಾಹಕ ರಾಜು ಬಾಶೆಟ್ಟಿಹಳ್ಳಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

