ಲೋಪವಾಗದಂತೆ ಮತದಾರರ ಪಟ್ಟಿ ಪರಿಷ್ಕರಿಸಿ: ಮತದಾರ ಪಟ್ಟಿ ವೀಕ್ಷಕಿ ಬಿ.ಆರ್.ಮಮತಾ

ಬೆಂ.ಗ್ರಾ.ಜಿಲ್ಲೆ: (ಡಿ.07): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ  ನಾಗರಿಕರಿಗೂ ಮತದಾನದ ಹಕ್ಕು ಇದೆ. ಅರ್ಹ ವ್ಯಕ್ತಿಗಳಿಗೆ ಈ ಹಕ್ಕು ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ಬಹಳ ಮಹತ್ವದ್ದಾಗಿದ್ದು ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ನೋಂದಣಿ ಇಲಾಖೆಯ ಮಹಾ ನಿರೀಕ್ಷಕಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತದಾರರ ಪಟ್ಟಿ  ವೀಕ್ಷಕರಾಗಿರುವ ಬಿ.ಆರ್.ಮಮತಾ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಇಂದು ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು,

ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಉತ್ತಮ ರೀತಿಯಲ್ಲಿ ಸಾಗಿದೆ.ಮನೆ ಮನೆ ಭೇಟಿ ಸಂದರ್ಭದಲ್ಲಿ ಅರ್ಹ ಮತದಾರರು ಪಟ್ಟಿಯಲ್ಲಿ ಇರುವುದನ್ನು ನಿರಂತರವಾಗಿ ಮರು ಪರಿಶೀಲನೆ ಮಾಡುತ್ತಿರಬೇಕು‌. ಜಿಲ್ಲೆಯಲ್ಲಿ 7977 ವಿಕಲಚೇತನ ಮತದಾರರ ನೋಂದಣಿ ಮಾಡಿರುವುದು ಉತ್ತಮ ಪ್ರಗತಿಯಾಗಿದೆ. ಪಟ್ಟಿಯಲ್ಲಿ ಅವರನ್ನು ಗುರುತಿಸುವ  ಮಾರ್ಕಿಂಗ್ ಕಾರ್ಯವೂ ಆಗಬೇಕು.ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2022 ರ ನವೆಂಬರ್ 09 ಕ್ಕೆ ಒಟ್ಟು  8,38,219 ಮತದಾರರು ಇದ್ದಾರೆ.ನಾಳೆ ಡಿ‌ಸೆಂಬರ್ 8 ರವರೆಗೆ ಮತದಾರರ ಪಟ್ಟಿಯ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ.ಡಿ.26 ರೊಳಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ 2023ರ ಜನವರಿ 5 ರಂದು ಅಂತಿಮ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಜನ್ಮ ದಿನಾಂಕ ದಾಖಲೆಗಳನ್ನು ಪಡೆಯುವಾಗ  ಸಮರ್ಪಕವಾಗಿ ಪರಿಶೀಲಿಸಬೇಕು.   ಗಣ್ಯರು,ಅತಿ ಗಣ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

ಭಾರತ ಚುನಾವಣಾ ಆಯೋಗವು ಮತದಾನದ ಹಕ್ಕಿನಿಂದ ಯಾವುದೇ ಮತದಾರ ವಂಚಿತನಾಗಬಾರದು ಎಂಬ ಮಹತ್ವಾಕಾಂಕ್ಷೆಯಿಂದ ಮತದಾರರ ಪಟ್ಟಿಯ ಆರೋಗ್ಯಪೂರ್ಣ ಪರಿಷ್ಕರಣೆಗೆ ಹೆಚ್ಚು ಮಹತ್ವ ನೀಡಿದೆ. ಮತದಾನಕ್ಕೆ ಬಳಸುವ ಇವಿಎಂ, ವಿವಿಪ್ಯಾಟ್ ಯ‌ಂತ್ರಗಳ ಸ್ಥಿತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಶೀಲಿಸುವ ಕಾರ್ಯವನ್ನು ಸಾಕಷ್ಟು ಮುಂಚಿತವಾಗಿ ಕೈಗೊಳ್ಳಬೇಕು.ಮತದಾರರ ಜಾಗೃತಿಗಾಗಿ ಸ್ವೀಪ್ ಚಟುವಟಿಕೆಗಳನ್ನು ಮಹಿಳಾ,ಯುವ ,ವಿಕಲಚೇತನ ಮತದಾರರನ್ನು ಕೇಂದ್ರೀಕರಿಸಿ ರೂಪಿಸಿ ಜಾರಿಗೊಳಿಸಬೇಕು.1950 ಸಹಾಯವಾಣಿ ಸಂಖ್ಯೆಯನ್ನು ಹೆಚ್ಚು ವ್ಯಾಪಕ ಪ್ರಚಾರ ಮಾಡಬೇಕು.ರಾಜಕೀಯವಾಗಿ ತಟಸ್ಥ ನಿಲುವು ಹೊಂದಿರುವ ಜಿಲ್ಲೆಯ ಹೆಸರಾಂತ ವ್ಯಕ್ತಿಗಳನ್ನು ಚುನಾವಣಾ ಆಯೋಗದ ಅನುಮೋದನೆ ಪಡೆದು ಮತದಾರರ ಜಾಗೃತಿ ರಾಯಭಾರಿಗಳನ್ನಾಗಿ ನೇಮಿಸಿಕೊಳ್ಳಬೇಕು. ಮುಂಬರುವ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡು ಮತದಾರರನ್ನು  ಜಾಗೃತಿಗೊಳಿಸಬೇಕು. ಮತಗಟ್ಟೆಗಳಿಗೆ ಗುರುತಿಸಲಾಗಿರುವ ಕಟ್ಟಡಗಳಲ್ಲಿ ಮೂಲಸೌಕರ್ಯಗಳ ಬಗ್ಗೆ ಗಮನ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವಾಗ ನಿಯಮಾನುಸಾರ ಎಲ್ಲಾ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಖುದ್ದಾಗಿ ತಹಸೀಲ್ದಾರರೇ ಖಚಿತಪಡಿಸಿಕೊಳ್ಳಬೇಕು.ಸ್ವಯಂ ಪ್ರೇರಿತರಾಗಿ ಯಾವುದೇ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಬಾರದು.ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಾಸವಾಗಿರುವ ಹೆಸರಾಂತ ಕಲಾವಿದರು, ಸಾಹಿತಿಗಳು, ಸಾಧಕರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಬೇಕು. ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳು ಸಮರ್ಪವಾಗಿರುವುದನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಬೇಕು ಎಂದರು.

ಉಪವಿಭಾಗಾಧಿಕಾರಿ ತೇಜಸ್ ಕುಮಾರ ಮಾತನಾಡಿ,ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 1137 ಮತಗಟ್ಟೆಗಳಿವೆ,ಎಲ್ಲಾ ಕಡೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.114 ಬಿಎಲ್‌ಓ ಮೇಲ್ವಿಚಾರಕರನ್ನು ನೇಮಿಸಲಾಗಿದೆ.

2022 ರ ನವೆಂಬರ್ 09 ಕ್ಕೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 1,10,215 ಪುರುಷ,1,10,541 ಮಹಿಳೆಯರು ಹಾಗೂ ಇತರೆ ವರ್ಗದ 23 ಮತದಾರರು ಸೇರಿ ಒಟ್ಟು 2,20,779 ಮತದಾರರು ಹಾಗೂ 286 ಮತಗಟ್ಟೆಗಳಿವೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1,01,753 ಪುರುಷ,1,01,954 ಮಹಿಳೆಯರು ಹಾಗೂ ಇತರೆ ವರ್ಗದ 26 ಮತದಾರರು ಸೇರಿ ಒಟ್ಟು 2,03,733 ಮತದಾರರು ಹಾಗೂ 292 ಮತಗಟ್ಟೆಗಳಿವೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 1,02,311 ಪುರುಷ,1,02,184 ಮಹಿಳೆಯರು  ಹಾಗೂ ಇತರೆ ವರ್ಗದ ಓರ್ವ ಮತದಾರ ಸೇರಿ ಒಟ್ಟು 2,04,496 ಮತದಾರರು ಹಾಗೂ 276ಮತಗಟ್ಟೆಗಳಿವೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 1,04,226  ಪುರುಷ,1,04,913 ಮಹಿಳೆಯರು ಹಾಗೂ ಇತರೆ ವರ್ಗದ 72 ಸೇರಿ ಒಟ್ಟು 2,09,211 ಮತದಾರರು ಹಾಗೂ 276 ಮತಗಟ್ಟೆಗಳಿವೆ.

ಮತದಾರರ ಗುರುತಿನ ಚೀಟಿಗಳನ್ನು(ಎಪಿಕ್ ಕಾರ್ಡು) ನೋಂದಾಯಿತ ಅಂಚೆ ಮೂಲಕ ವಿಲೇವಾರಿಗೆ ಕ್ರಮವಹಿಸಲಾಗಿದೆ ಎಂದು ಸಭೆಗೆ ವಿವರಿಸಿದರು.

ಸಹಾಯವಾಣಿ ಕೇಂದ್ರಕ್ಕೆ ಭೇಟಿ: ಮತದಾರರ ಪಟ್ಟಿ ವೀಕ್ಷಕರಾದ ಬಿ.ಆರ್.ಮಮತಾ  ಹಾಗೂ ಜಿಲ್ಲಾಧಿಕಾರಿಗಳಾದ ಆರ್.ಲತಾ ಅವರು ಜಿಲ್ಲಾಡಳಿತ ಭವನದ ಚುನಾವಣಾ ವಿಭಾಗಕ್ಕೆ ಭೇಟಿ ನೀಡಿ, ಅಲ್ಲಿನ ವಿವಿಧ ಶಾಖೆಗಳು ಮತ್ತು 1950 ಸಹಾಯವಾಣಿಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.

ಅಪರ ಜಿಲ್ಲಾಧಿಕಾರಿ ವಿಜಯಾ ಈ.ರವಿಕುಮಾರ, ಜಿಪಂ ಉಪಕಾರ್ಯದರ್ಶಿ ಡಾ.ನಾಗರಾಜು, ಚುನಾವಣಾ ತಹಸೀಲ್ದಾರ ರಾಜೀವಲೋಚನ ಸೇರಿದಂತೆ ಜಿಲ್ಲೆಯ ಎಲ್ಲಾ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಕರ್ನಾಟಕ ಶಕ್ತಿ ಕೇಂದ್ರ ಸಮಿತಿ ಅಸ್ತಿತ್ವಕ್ಕೆ; ಜಿಲ್ಲಾಧ್ಯಕ್ಷರಾಗಿ ಆದಿತ್ಯನಾಗೇಶ್, ತಾಲೂಕು ಅಧ್ಯಕ್ಷರಾಗಿ ಆಂಜನಮೂರ್ತಿ ಆಯ್ಕೆ

ಕರ್ನಾಟಕ ಶಕ್ತಿ ಕೇಂದ್ರ ಸಮಿತಿ ಅಸ್ತಿತ್ವಕ್ಕೆ; ಜಿಲ್ಲಾಧ್ಯಕ್ಷರಾಗಿ ಆದಿತ್ಯನಾಗೇಶ್, ತಾಲೂಕು ಅಧ್ಯಕ್ಷರಾಗಿ ಆಂಜನಮೂರ್ತಿ

ಮಾದಿಗ ಜನಾಂಗದ ಏಳಿಗೆಗಾಗಿ, ರಾಜಕೀಯ ಶಕ್ತಿ, ನಾಯಕತ್ವದ ಶಕ್ತಿ, ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಕರ್ನಾಟಕ ಶಕ್ತಿ ಕೇಂದ್ರ ಸಮಿತಿಯನ್ನು (Karnataka Shakti Kendra Committee) ರಚಿಸಲಾಗಿದೆ.

[ccc_my_favorite_select_button post_id="121547"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ ಭೀತಿ.!| Video ನೋಡಿ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ

ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಪಂದ್ಯದ ವೇಳೆ ನಿಷೇಧಿತ 'ಇ-ಸಿಗರೇಟ್' (Vape) ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

[ccc_my_favorite_select_button post_id="121495"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]