ದೊಡ್ಡಬಳ್ಳಾಪುರ, (ಡಿ.08): ವರ್ಗಾವಣೆ ರದ್ದು ಕೋರಿ ನ್ಯಾಯಲಯದ ಮೆಟ್ಟಿಲೇರಿದ್ದ ನೆಲಮಂಗಲ ಪುರಸಭೆ ಪೌರಾಯುಕ್ತ ಎಸ್.ಜಿ.ರಾಜಶೇಖರ್ ಅವರಿಗೆ ಯಥಾಸ್ಥಿತಿಯಲ್ಲಿ ಮುಂದುವರಿಯುವಂತೆ ನ್ಯಾಯಾಲಯ ಆದೇಶ ನೀಡಿದೆ.

ಈ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರದಿಂದ ನೆಲಮಂಗಲಕ್ಕೆ ವರ್ಗವಣೆಯಾಗಿದ್ದ ನಗರಸಭೆ ಪೌರಾಯುಕ್ತ ಕೆ.ಜೆ.ಶಿವಶಂಕರ್, ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತರಾಗಿ ಮುಂದುವರಿದಿದ್ದಾರೆ.

ನವೆಂಬರ್ 18ರಂದು ಕೆ.ಜೆ.ಶಿವಶಂಕರ್ ಅವರನ್ನು ನೆಲಮಂಗಲಕ್ಕೆ, ನೆಲಮಂಗಲದಲ್ಲಿ ಪೌರಾಯುಕ್ತರಾಗಿದ್ದ ಎಸ್.ಜಿ.ರಾಜಶೇಖರ್ ಅವರನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ನೆಲಮಂಗಲದಲ್ಲಿ ಪೌರಾಯುಕ್ತರಾಗಿರುವ ಎಸ್.ಜಿ.ರಾಜಶೇಖರ್ ನ್ಯಾಯಾಲಯದ ಮೊರೆಹೋಗಿದ್ದರು.
ಆದೇಶದ ಅನ್ವಯ ಜನವರಿ 04 ವರೆವಿಗೂ ಯಥಾಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದು ಉನ್ನತ ಮೂಲಗಳು ಹರಿತಲೇಖನಿಗೆ ಮಾಹಿತಿ ನೀಡಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
