
ದೊಡ್ಡಬಳ್ಳಾಪುರ, (ಡಿ.09): ತಾಲೂಕಿನ ಆರೂಢಿ ಗ್ರಾಮಪಂಚಾಯಿತಿ ಆವರಣದಲ್ಲಿ, ವ್ಯಕ್ತಿಗತ ಪೌಷ್ಟಿಕ ಕೈತೋಟ ಯೋಜನೆಯ ಫಲಾನುಭವಿಗಳಿಗೆ ವಿವಿಧ ರೀತಿಯ ಸಸಿಗಳನ್ನು ತಾಲೂಕು ಪಂಚಾಯಿತಿ ಇಒ ಶ್ರೀನಾಥ್ ಗೌಡ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರು ಕುಟುಂಬದ ಪೌಷ್ಟಿಕ ಭದ್ರತೆಗಾಗಿ, ಮನೆಯ ಹಿತ್ತಲಿನಲ್ಲಿಅಥವಾ ಹೊಲಗಳಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಲು ಈ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯಡಿಯಲ್ಲಿ ತೆಂಗು-2, ನಿಂಬೆ-3, ಸೀಬೆ-1, ಕರಿಬೇವು-1, ನೆಲ್ಲಿಕಾಯಿ-2, ಮಾವು-1, ನುಗ್ಗೆ-2, ಪಪ್ಪಾಯ-2 ಗಿಡಗಳನ್ನು ಒಂದು ಸಾವಿರ ರೈತರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಅಲ್ಲದೆ ಗಿಡ ಹಾಕಿಕೊಳ್ಳಲು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ಮೊತ್ತವಾಗಿ ರೂ.3190 ಗಳನ್ನು ಸಹ ನೀಡಲು ಕ್ರಮವಹಿಸಲಾಗಿದೆ.
ಈ ಸೌಲಭ್ಯ ಬಳಸಿಕೊಂಡು ಮಹಿಳೆಯರು ಕುಟುಂಬದ ಪೌಷ್ಟಿಕ ಅವಶ್ಯಕತೆ ಪೂರೈಸುವುದರ ಜತೆಗೆ ಹೆಚ್ಚಿನ ಹಣ್ಣು ಹಾಗೂ ತರಕಾರಿ ಮಾರಾಟ ಮಾಡಿ ಆದಾಯ ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ರಾಮಾಂಜನೇಯ, ಪಿಡಿಓ ಮಲ್ಲೇಶ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
