ದೊಡ್ಡಬಳ್ಳಾಪುರ, (ಡಿ.17): ನ್ಯಾಯ ಗಣಪತಿ ಕೃಪಾಪೋಷಿತ ನಾಟಕ ಮಂಡಲಿ, ತಾಲ್ಲೂಕು ವಕೀಲರ ಸಂಘದ ಯುವ ಕಲಾವಿದರಿಂದ ನಗರದ ನ್ಯಾಯಾಲಯದ ಆವರಣದಲ್ಲಿ ಡಿಸೆಂಬರ್ 17 ರಂದು ಮಧ್ಯಾಹ್ನ 12.30ಕ್ಕೆ ಸೂತ ಪುತ್ರ ಕರ್ಣ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.
ನಾಟಕ ಪ್ರದರ್ಶನವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ವೆಂಕಟೇಶ್ ನಾಯಕ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಮಂಜುನಾಥ್ ವಹಿಸಲಿದ್ದಾರೆ ಎಂದು ವಕೀಲರಾದ ಎ.ಕೃಷ್ಣಮೂರ್ತಿ, ಎಂ.ಮುನಿರಾಜು ತಿಳಿಸಿದ್ದಾರೆ. (ತರಬೇತಿಯ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

