ದೊಡ್ಡಬಳ್ಳಾಪುರ: ಬಗೆಹರಿಸಬೇಕಾದ ಸಮಸ್ಯೆಗಳ ಕುರಿತು ಜನರಿಗೆ ಭರವಸೆ ನೀಡಿ, ನಂತರ ಚುನಾವಣೆ ಎದುರಿಸಿ – ಅಭ್ಯರ್ಥಿಗಳಿಗೆ ಕರವೇ ಮನವಿ

ದೊಡ್ಡಬಳ್ಳಾಪುರ: (ಏ.26): ಮೇ 10ರಂದು ನಡೆಯಲಿರುವ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ವತಿಯಿಂದ ಯಾವುದೇ ಪಕ್ಷಕ್ಕೆ ನಮ್ಮ ಸಂಘಟನೆಯಿಂದ ಬೆಂಬಲವಿಲ್ಲ. ಆದರೆ ಈ ಚುನಾವಣೆಯಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಮತದಾರರಿಗೆ ಭರವಸೆ ನೀಡಿ ನಂತರ ಜನರ ಮುಂದೆ ಹೋಗಿ ಎಂದು ಚುನಾವಣೆಯ ಅಭ್ಯರ್ಥಿಗಳನ್ನು ಒತ್ತಾಯಿಸಲಾಗುತ್ತಿದೆ ಎಂದು ಕರವೇ ಕನ್ನಡಿಗರ ಬಣದ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಹೇಳಿದ್ದಾರೆ.

ಈ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿವಿಧ ಪಕ್ಷಗಳು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಆದರೆ ಸಂಘಟನೆಯ ಪದಾಧಿಕಾರಿಗಳು ಸಭೆ ಸೇರಿ ಯಾವ ಪಕ್ಷಕ್ಕೂ ಬೆಂಬಲ ನೀಡಬಾರದೆಂದು ನಿರ್ಧರಿಸಿದ್ದೇವೆ.

ತಾಲೂಕಿನಲ್ಲಿ ಸರ್ಕಾರದ ಮಟ್ಟದಲ್ಲಿ ಹಾಗೂ ಸ್ಥಳೀಯ ಮಟ್ಟದಲ್ಲಿ ಶಾಸಕರಾದವರು ಬಗೆಹರಿಸಬೇಕಾದ ನಾನಾ ಸಮಸ್ಯೆಗಳಿವೆ. ಜಿಲ್ಲಾ ಕೇಂದ್ರಕ್ಕಾಗಿ ಒತ್ತಾಯಿಸಿ ಹೋರಾಟಗಳನ್ನು ನಡೆಸಿದ್ದರೂ ಇನ್ನೂ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಿಲ್ಲ.

ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡಕ್ಕೆ ಜಾಗ ನೀಡಿಲ್ಲ. ಹೊಸ ಬಸ್ ನಿಲ್ದಾಣ ಪಾಳು ಬಿದ್ದಿದ್ದು, ಇದನ್ನು ಅಭಿವೃದ್ದಿ ಪಡಿಸಿ ಅಂತರಾಜ್ಯ ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯಕ್ಕೆ ಮನ್ನಣೆಯಿಲ್ಲ.

ನಗರದಲ್ಲಿನ ಜಿಲ್ಲಾ ಮಟ್ಟದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾದರೂ ಇನ್ನೂ ಇಲ್ಲಿ ನಿರ್ಮಾಣವಾಗಿಲ್ಲ. ಜಿಲ್ಲಾಸ್ಪತ್ರೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ನಗರದಲ್ಲಿ ರಸ್ತೆ ಅಗಲೀಕರಣ ಆಗಿಲ್ಲ.

ಉದ್ಯೋಗಸ್ಥ ಮಹಿಳೆಯರಿಗೆ ಸರ್ಕಾರದಿಂದ ವಸತಿ ಕಲ್ಪಿಸಬೇಕಿದೆ. ಗಾರ್ಮೆಂಟ್ಸ್ ಹಾಗೂ ಆಟೋ ಚಾಲಕರನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಬೇಕಿದೆ.

ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ಜಿಮ್ ಸ್ಥಾಪಿಸಬೇಕಿದೆ. ಗ್ರಾಮೀಣರಿಗೆ ಕಂಟಕವಾಗಿರುವ ಎಂಎಸ್‍ಜಿಪಿ ಘಟಕ ಮುಚ್ಚಿಸಬೇಕು. ಇದರಲ್ಲಿ ಹಲವಾರು ಸಮಸ್ಯೆಗಳು ಸ್ಥಳೀಯ ಶಾಸಕರಾದವರು ಬಗೆ ಹರಿಸಬಹುದಾಗಿದೆ.

ತಾಲೂಕಿಗೆ ಸಿಇಟಿ ಕೇಂದ್ರ, ಉಪವಿಭಾಗಾಧಿಕಾರಿಗಳ ಕಚೇರಿ ಬರಲು ಕರವೇ ಹೋರಾಟವೂ ಕಾರಣವಾಗಿದೆ. ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ ಚುನಾವಣೆಗೆ ತೆರಳಬೇಕೆಂದು ಕರವೇ ಒತ್ತಾಯಿಸುತ್ತದೆ ಎಂದರು.

ಸುದ್ಧಿಗೋಷ್ಟಿಯಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ತಾಲೂಕು ಯುವ ಘಟಕ ಅಧ್ಯಕ್ಷ ತ.ನ.ರಂಜಿತ್ ಗೌಡ, ಕಾರ್ಯಾಧ್ಯಕ್ಷ ಎಸ್.ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕಾರ್ತಿಕ್.ಆರ್., ಸಂಚಾಲಕ ಬಸವರಾಜು, ತಾಲೂಕು ಮಹಿಳಾ ಅಧ್ಯಕ್ಷೆ ಕೆ.ವಿ. ರಾಧಾಮಣಿ, ಉಪಾಧ್ಯಕ್ಷೆ  ಎಚ್.ಕಮಲಾಕ್ಷಿ, ತಾಲೂಕು ಆಟೋ ಘಟಕದ ಅಧ್ಯಕ್ಷ ತನ್ವೀರ್, ಪದಾಧಿಕಾರಿಗಳಾದ ಸೈಯದ್ ಇರ್ಫಾನ್ , ರಾಜಶೇಖರ್, ವೀರಭದ್ರ, ಚಾಂದ್ ಪಾಷಾ,  ನರೇಂದ್ರ, ವಾಸು, ದೊಡ್ಡೇಗೌಡ, ಅಸ್ಲಾಂ ಹಾಜರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ನಮ್ಮ ಮೆಟ್ರೋ ಜನರದ್ದು – ಯಾವ ಪಕ್ಷದ ಸ್ವತ್ತು ಅಲ್ಲ; ಅಂಕಿಅಂಶಗಳ ಸಹಿತ ಬಿಜೆಪಿಗೆ ಕುಟುಕಿದ ಸಚಿವ ರಾಮಲಿಂಗಾ ರೆಡ್ಡಿ

ನಮ್ಮ ಮೆಟ್ರೋ ಜನರದ್ದು – ಯಾವ ಪಕ್ಷದ ಸ್ವತ್ತು ಅಲ್ಲ; ಅಂಕಿಅಂಶಗಳ ಸಹಿತ

ರಾಜ್ಯ ಬಿಜೆಪಿಯ ಪ್ರಮುಖ‌ ಮುಖಂಡರುಗಳಿಗೆ ಸ್ವಲ್ಪವೂ ನಾಚಿಕೆಯಿಲ್ಲದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಮ್ಮ ಮೆಟ್ರೋ ಶ್ರೇಯಸ್ಸು ಕೊಡುತ್ತಿದ್ದಾರೆ: ಸಚಿವ ರಾಮಲಿಂಗಾ ರೆಡ್ಡಿ (Ramalinga Reddy)

[ccc_my_favorite_select_button post_id="112368"]
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ಸಂಪೂರ್ಣವಾಗಿ ಕರ್ನಾಟಕದಿಂದ ಕಿತ್ತೆಸೆಯುತ್ತಾರೆ: ನಿಖಿಲ್ ಕುಮಾರಸ್ವಾಮಿ

ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ಸಂಪೂರ್ಣವಾಗಿ ಕರ್ನಾಟಕದಿಂದ ಕಿತ್ತೆಸೆಯುತ್ತಾರೆ: ನಿಖಿಲ್ ಕುಮಾರಸ್ವಾಮಿ

ಅಧಿಕಾರಿಗಳ ಮೇಲೆ ಕಾಂಗ್ರೆಸ್‌ ಶಾಸಕರ ದೌರ್ಜನ್ಯ, ದಬ್ಬಾಳಿಕೆ ಮಿತಿ ಮೀರಿದೆ. ಕಾಂಗ್ರೆಸ್‌ ಸರ್ಕಾರ 1800 ಕೋಟಿ ರೂ. ಲೂಟಿಗೆ ನೆಲಮಂಗಲ ಕೆರೆ ಕಟ್ಟೆಗಳಿಗೆ ಕೊಳಚೆ ನೀರನ್ನು ಹರಿಸಲು ಹೊರಟಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ

[ccc_my_favorite_select_button post_id="112187"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ಜು.25ರಿಂದ 28ರವರೆಗೆ ನಡೆಯಲಿರುವ ಪುರುಷರ ಸೀನಿಯರ್ -ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್‌ಶಿಪ್(Kabaddi Championship) ಪಂದ್ಯಾವಳಿ

[ccc_my_favorite_select_button post_id="111553"]
ಸಂಸದ ಡಾ.ಕೆ. ಸುಧಾಕರ್ ಹೆಸರು ಬರೆದಿಟ್ಟು ಕಾರು ಚಾಲಕ ಆತ್ಮಹತ್ಯೆ..!

ಸಂಸದ ಡಾ.ಕೆ. ಸುಧಾಕರ್ ಹೆಸರು ಬರೆದಿಟ್ಟು ಕಾರು ಚಾಲಕ ಆತ್ಮಹತ್ಯೆ..!

ನನ್ನ ಸಾವಿಗೆ ಸಂಸದ ಡಾ.ಕೆ. ಸುಧಾಕರ್ (Dr.K. Sudhakar) ಕಾರಣ ಅಂತ ಡೆತ್ ನೋಟ್ ಬರೆದು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಅವರ ಕಾರು ಚಾಲಕ

[ccc_my_favorite_select_button post_id="112252"]
ಎರಡು ಬಸ್ಸುಗಳ ನಡುವೆ ಸಿಲುಕಿದ ಆಟೋ ನುಜ್ಜುಗುಜ್ಜು..!| Video ನೋಡಿ

ಎರಡು ಬಸ್ಸುಗಳ ನಡುವೆ ಸಿಲುಕಿದ ಆಟೋ ನುಜ್ಜುಗುಜ್ಜು..!| Video ನೋಡಿ

ಚಲಿಸುತ್ತಿದ್ದ ಎರಡು ಬಸ್ಸುಗಳ ನಡುವೆ ಸಿಲುಕಿದ ಆಟೋ ನುಜ್ಜುಗುಜ್ಜಾಗಿದ್ದು (Auto crushed), ಹಲವರಿಗೆ ಪೆಟ್ಟಾಗಿರುವ ಗಾಯವಾದ ಘಟನೆ

[ccc_my_favorite_select_button post_id="112134"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!