ದೊಡ್ಡಬಳ್ಳಾಪುರ, (ಏ.26): ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾಸ್ಪತ್ರೆಯನ್ನು ದೊಡ್ಡಬಳ್ಳಾಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೇಂದ್ರ ಸಚಿವ ದೇವು ಸಿನ್ಹಾ ಚೌಹಾಣ್ ಹೇಳಿದರು.
ನಗರದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಸ ನಡೆಸಲಾಗಿದ್ದು, ಬಿಜೆಪಿ ಅಧಿಕಾರಕ್ಕೆ ತರಲು ತಾಲೂಕಿನ ಜನತೆ ತೀರ್ಮಾನಿಸಿರುವುದು ಕಂಡುಬಂದಿದೆ.
ಈ ಕ್ಷೇತ್ರದಲ್ಲಿ ಯುವ ಅಭ್ಯರ್ಥಿ ಧೀರಜ್ ಮುನಿರಾಜು ಸ್ಪರ್ಧೆ ಅವಕಾಶ ನೀಡಲಾಗಿದ್ದು, ಅವರು ಕಳೆದ ಹಲವು ವರ್ಷಗಳಿಂದ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತಮ ಆಳ್ವಿಕೆಯನ್ನು ನೀಡಲಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರದಿಂದಾಗಿ ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ಇಂಟರ್ನೆಟ್ ಮತ್ತಿತರ ಯೋಜನೆ ಮೂಲಕ ನವ ಕರ್ನಾಟಕದ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಉಂಟಾದ ದುರಸ್ತಿಯಿಂದ ರಾಜ್ಯವನ್ನು ಮೇಲೆತ್ತಿ ಜನಪರ ಯೋಜನೆ ನೀಡಲಾಗಿದೆ.
ನಮ್ಮ ಸರ್ಕಾರ ಧರ್ಮಪ್ರೇಮಿ ಸರ್ಕಾರವಾಗಿದ್ದು, ಧಾರ್ಮಿಕ ಕೇಂದ್ರಗಳ ಪ್ರವಾಸ ನೀಡಿದೆ. ಸಿದ್ದರಾಮಯ್ಯ ಸರ್ಕಾರ ಉಗ್ರಗಾಮಿ ಸಂಘಟನೆಗಳೊಂದಿಗೆ ಕೈಜೊಡಿಸಿರುವ PFI ಮತ್ತು SDPI ಓಟ್ ಬ್ಯಾಂಕ್ ರಾಜಕಾರಣಕ್ಕೆ ಪಾಲನೆ ಪೋಷಣೆ ಮಾಡಿದೆ. ಈ ಎಲ್ಲವನ್ನೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಮನ ಮಾಡಿದೆ.
ಜಲಜೀವನ್ ಯೋಜನೆ ಮೂಲಕ ಮನೆ ಮನೆಗೆ ಕೊಳಾಯಿ ಮೂಲಕ ನೀರು ಒದಗಿಸಲಾಗುತ್ತಿದೆ. ಜಲಜೀವನ್ ಯೋಜನೆಗೆ ಯಾವುದೇ ರಾಜ್ಯದಲ್ಲಿ ಮೀಟರ್ ಅಳವಡಿಸಿಲ್ಲ. ಅಂತೆಯೇ ಕರ್ನಾಟಕದಲ್ಲಿ ಮೀಟರ್ ಅಳವಡಿಸುವುದಿಲ್ಲ ಹಾಗೂ ಕುಟುಂಬದ ಜನಸಂಖ್ಯೆಗೆ ಅನುಗುಣವಾಗಿ ನೀರನ್ನು ನೀಡಲಾಗುತ್ತಿದೆ.
ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸಹಜ. ಬಿಜೆಪಿ ವಿಶ್ವದ ನಂಬರ್ ಒನ್ ಪಕ್ಷವಾಗಿದ್ದು, ಪಕ್ಷ ಬಿಟ್ಟು ಹೋದವರಿಂದ ಯಾವುದೇ ದಕ್ಕೆಯಾಗಲ್ಲ ಎಂದರು.
ರಾಜಸ್ಥಾನ ವಿಧಾನಸಭೆ ಶಾಸಕ ಡಾ.ಸತೀಶ್ ಸುಭಾಶ್ಚಂದ್ರ ಪುಣ್ಯ ಮಾತನಾಡಿ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಅಭಿವೃದ್ಧಿಯ ದಿಕ್ಕು ಬದಲಾಗಿದೆ. ಗಡಿ ಸಮಸ್ಯೆ, ಉಗ್ರಗಾಮಿಗಳ ಹಾವಳಿ, ಕೋವಿಡ್ ಸೋಂಕಿನ ನಿರ್ವಹಣೆಯನ್ನು ದೇಶದ ಜನತೆ ಮೆಚ್ಚಿದ್ದಾರೆ.
ಅಂತೆಯೇ ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರದ ಪರ ಜನರ ಒಲವು ಹೆಚ್ಚಾಗಿದ್ದು, ಕರ್ನಾಟಕ ವಿಧಾಸಭೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದರು.
ಬಿಜೆಪಿ ಮಾದ್ಯಮ ವಕ್ತಾರ ಪ್ರಶಂತ್ ಮಾತನಾಡಿ, ದೊಡ್ಡಬಳ್ಳಾಪುರದ ಅಭಿವೃದ್ಧಿ ವಿಚಾರದ ಕುರಿತು ಯಾವುದೇ ತಾರತಮ್ಯ ಮಾಡಿಲ್ಲ. ಕೇಂದ್ರ ಹಾಗೂ ರಾಜ್ಯದ ಎಲ್ಲಾ ಯೋಜನೆಗಳನ್ನು ಜನತೆಗೆ ತಲುಪಿಸಲಾಗುತ್ತಿದೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿಲ್ಲಿಸಿದರು, ಜಿಲ್ಲೆಯಲ್ಲಿ ವಕ್ಕಲಿಗರಿಗೆ ಟಿಕೆಟ್ ನೀಡಿಲ್ಲ ಎಂಬ ಕುರಿತು ಸಮುದಾಯದಲ್ಲಿ ಯಾವುದೇ ಬೇಸರವಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಎಲ್ಲಾ ಸಮುದಾಯಗಳಿಗೆ ಮಾನ್ಯತೆ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಆ.ದೇವೆಗೌಡ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….