ಇಂದಿನಿಂದ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಲೆಕ್ಕಪರಿಶೀಲನೆ..!!

ಬೆಂ.ಗ್ರಾ.ಜಿಲ್ಲೆ, (ಏ.25): ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ 178-ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಲೆಕ್ಕ ಪತ್ರ/ದಾಖಲೆಗಳ ತಪಾಸಣೆಯ ವಿವಿಧ ಹಂತದ ದಿನಾಂಕ ಏಪ್ರಿಲ್ 26 ಹಾಗೂ ಏಪ್ರಿಲ್ 27 ರಂದು ನಿಗದಿಪಡಿಸಲಾಗಿದೆ ಎಂದು 178-ಹೊಸಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ.

ವಿಧಾನಸಭಾ ಚುನಾವಣಾ ಅಭ್ಯರ್ಥಿಯು, ತಾನು ನಾಮಪತ್ರ ಸಲ್ಲಿಸಿದ ದಿನಾಂಕ ಹಾಗೂ ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದ ನಡುವೆ (ಎರಡು ದಿನಾಂಕಗಳು ಸೇರಿದಂತೆ) ಅಭ್ಯರ್ಥಿಯಾಗಲೀ ಅಥವಾ ಅವರ ಏಜೆಂಟ್ ಯಾಗಲೀ ಸ್ಪರ್ಧಿಸಿದ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಚುನಾವಣಾ ಏಜೆಂಟನ್ನು ಭರಿಸಿದ ಅಥವಾ ಅಧಿಕೃತಗೊಳಿಸಿದ ಎಲ್ಲಾ ವೆಚ್ಚದ ಲೆಕ್ಕವನ್ನು ಪ್ರತ್ಯೇಕವಾಗಿ ಮತ್ತು ಸರಿಯಾಗಿ ಇಟ್ಟುಕೊಳ್ಳುವುದು ಅಗತ್ಯವಾಗಿದೆ.

ನಿರ್ವಹಿಸಲಾಗಿರುವ ಚುನಾವಣಾ ವೆಚ್ಚದ ಲೆಕ್ಕಪತ್ರ ಮತ್ತು ದಾಖಲೆಗಳ (ರಶೀದಿ/ ಬಿಲ್ಲುಗಳು) ತಪಾಸಣೆಯನ್ನು 3 ಭಾರಿ ಚುನಾವಣಾ ವೆಚ್ಚ ವೀಕ್ಷಕರಿಂದ ಅಧಿಕವಾಗಿ ನಿಯೋಜಿಸಿದ ಅಧಿಕಾರಿಯಿಂದ ತಪಾಸಣೆಯನ್ನು ಮಾಡಿಸಬೇಕಾಗಿರುತ್ತದೆ.

ಆದ್ದರಿಂದ 178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳ ವಿವಿಧ ಹಂತದ ಲೆಕ್ಕ ಪತ್ರ/ದಾಖಲೆಗಳ ತಪಾಸಣೆಗೆ ಏಪ್ರಿಲ್ 26 ಹಾಗೂ 27 ರಂದು ದಿನಾಂಕ ನಿಗದಿಪಡಿಸಲಾಗಿದೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿರುವ 23 ಅಭ್ಯರ್ಥಿಗಳಾದ 

ಎನ್.ನಾಗರಾಜು, ಪ್ರಶಾಂತ್ ಸುಬ್ರಮಣಿ, ಡಿ.ಎಂ.ಲಕ್ಷ್ಮೀನಾರಾಯಣ, ಶರತ್ ಕುಮಾರ್ ಬಚ್ಚೇಗೌಡ, ರಮೇಶ್ ಚಕ್ರವರ್ತಿ, ಶರತ್ ಬಚ್ಚೇಗೌಡ, ಎಂ.ಶ್ರೀಮತಿ, ಬಿ.ಸೊಣ್ಣಪ್ಪಗೌಡ, ಅಜಯ್ ಕುಮಾರ್ ರೆಡ್ಡಿ ಅಡಾಲ, ಪಿ.ಆರ್.ಅನುಷಾ, ಜೆ.ಅಶೋಕ. ಅಂಬುಜ ಅವರು ಏಪ್ರಿಲ್ 26 ರಂದು ಹಾಗೂ ಈರೇಗೌಡ (ಎಂಟಿಬಿ), ನವೀನ್ ಕುಮಾರ್, ಎನ್.ನಾಗರಾಜ್, ಟಿ.ನಾಗರಾಜು, ಕಪಾಲಿ ನಾರಾಯಣಸ್ವಾಮಿ.ಜಿ, ನಿತೀಶ್ ಟಿ.ಡಿ ಪುರುಷೋತ್ತಮ್, ವಿ.ನಿತೇಶ್ ಕುಮಾರ್, ಎಸ್.ಆರ್ ರಘುನಾಥ್, ಶರತ್ ಕುಮಾರ್.ಕೆ, ಹೆಚ್.ಟಿ ಶಶಿಕುಮಾರ್, ಸುರೇಶ್.ಕೆ ಅವರು ಏಪ್ರಿಲ್ 27 ರಂದು ನಿಗದಿಪಡಿಸಿರುವ ಸಮಯದಂದು ಚುನಾವಣಾ ಲೆಕ್ಕಗಳಿಗೆ ಸಂಬಂಧಿಸಿದಂತೆ ಲೆಕ್ಕ ಪತ್ರ ಮತ್ತು ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಚುನಾವಣಾ ಏಜೆಂಟರು ತಪ್ಪದೇ ಹಾಜರಾಗಿ ಲೆಕ್ಕ ತಪಾಸಣೆ ಮಾಡಿಸಿಕೊಳ್ಳುವುದು.

ತಪ್ಪಿದ್ದಲ್ಲಿ ಚುನಾವಣೆ ನಿಯಮಾನುಸಾರ ಹಾಗೂ ಭಾರತದ ದಂಡ ಸಂಹಿತೆ 1860 ರ ಕಲಂ,171-1ರಂತೆ ಕ್ರಮ ಕೈಗೊಳ್ಳಲಾಗುವುದೆಂದು 178-ಹೊಸಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಪ್ರಧಾನಿಯವರ ಮಾತಿನ ಮೇಲೆ ಭರವಸೆಯಿದೆ; ಬಿಜೆಪಿಯ ಕೆಲವು ಖಾಲಿ ಟ್ರಂಕುಗಳು ಶಬ್ದ ಮಾತ್ರ ಮಾಡುತ್ತವೆ: ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯ

ಪ್ರಧಾನಿಯವರ ಮಾತಿನ ಮೇಲೆ ಭರವಸೆಯಿದೆ; ಬಿಜೆಪಿಯ ಕೆಲವು ಖಾಲಿ ಟ್ರಂಕುಗಳು ಶಬ್ದ ಮಾತ್ರ

"ಬಿಜೆಪಿಯಲ್ಲಿ ಕೆಲವೊಂದಷ್ಟು ಖಾಲಿ ಟ್ರಂಕುಗಳಿವೆ. ಅವು ಕೇವಲ ಶಬ್ದ ಮಾತ್ರ ಮಾಡುತ್ತವೆ: ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar)

[ccc_my_favorite_select_button post_id="112432"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ಜು.25ರಿಂದ 28ರವರೆಗೆ ನಡೆಯಲಿರುವ ಪುರುಷರ ಸೀನಿಯರ್ -ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್‌ಶಿಪ್(Kabaddi Championship) ಪಂದ್ಯಾವಳಿ

[ccc_my_favorite_select_button post_id="111553"]
ದೊಡ್ಡಬಳ್ಳಾಪುರ: ರೈತರಿಗೆ ಕೇಬಲ್ ವೈರ್ ಕಳ್ಳರ ಹಾವಳಿ.. ಕದಿಯಲು ಬಂದವರು ವಾಹನ ಬಿಟ್ಟು ಪರಾರಿ

ದೊಡ್ಡಬಳ್ಳಾಪುರ: ರೈತರಿಗೆ ಕೇಬಲ್ ವೈರ್ ಕಳ್ಳರ ಹಾವಳಿ.. ಕದಿಯಲು ಬಂದವರು ವಾಹನ ಬಿಟ್ಟು

ಕೃಷಿ ಜಮೀನುಗಳಲ್ಲಿನ ಬೋರ್ವೆಲ್ ಗೆ ಅಳವಡಿಸಿದ್ದ ಕೇಬಲ್ ವೈರ್ ಗಳನ್ನು (Cable wire) ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು (Thieves) ಬೆನ್ನತ್ತಿದ ರೈತರು, ವಾಹನವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

[ccc_my_favorite_select_button post_id="112373"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!