ದೊಡ್ಡಬಳ್ಳಾಪುರ, (ಜೂ. 25): ನಗರದ ಪ್ರತಿಷ್ಠಿತ ಎಂ.ಎಸ್.ವಿ. ಪಬ್ಲಿಕ್ ಶಾಲೆಯಲ್ಲಿ “ಫಾದರ್ಸ್ ಡೇ”ಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ವಿಜಯಕುಮಾರ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, “ಅಪ್ಪ ಎಂದರೆ ಕರುಣೆ, ಪ್ರೀತಿ, ತ್ಯಾಗ ಎಲ್ಲವೂ ಅಡಗಿರುವ ತ್ಯಾಗಮೂರ್ತಿ. ಇಡೀ ಕುಟುಂಬದ ಕಣ್ಣಾಗಿ, ಹೆಗಲಾಗಿ, ಮಕ್ಕಳ ಬದುಕಿಗೆ ಬುನಾದಿಯಾಗಿ, ಮಾರ್ಗದರ್ಶಕರಾಗಿ, ಕನಸು ನನಸು ಮಾಡುವ ಸಾಕಾರ ಮೂರ್ತಿಯಾಗಿ ಜೀವನ ಸವೆಸುವ ದೈವ” ಎಂದರು.
ಸಂಸ್ಥೆಯ ಅಧ್ಯಕ್ಷರಾದ ಎ.ಸುಬ್ರಮಣ್ಯ ಮಾತನಾಡಿ, ಮಗುವನ್ನು ಹೆಗಲಮೇಲೆ ಕೂರಿಸಿ ವಿಶ್ವವನ್ನೇ ತೋರಿಸುವ ಜೀವ ಅಪ್ಪ. ಇಂತಹ ತಂದೆಗೆ ಶುಭಾಶಯ ತಿಳಿಸುವ ಸುದಿನ ಫಾದರ್ಸ್ ಡೇ ಎಂದು ತಿಳಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ನೃತ್ಯ, ಗಾಯನ, ಭಾಷಣ ಏರ್ಪಡಿಸಲಾಗಿತ್ತು. ಅಪ್ಪಂದಿರಿಗೆ ಮೋಜಿನ ಆಟಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ತಂದೆ-ಮಗುವಿನ ಜೋಡಿಗಳ ರ‍್ಯಾಂಪ್ ವಾಕ್ ನೋಡುಗರ ಮನಗೆದ್ದಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಎಸ್.ಸ್ವರೂಪ್, ಆಡಳಿತಾಧಿಕಾರಿ ನಯನಾ ಸ್ವರೂಪ್, ಪ್ರಾಂಶುಪಾಲರಾದ ರೆಮ್ಯ ಬಿ.ವಿ, ಉಪ-ಪ್ರಾಂಶುಪಾಲರಾದ ಪ್ರತಿಮಾ ಪೈ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….