ಸಮಾಜಮುಖಿ ಆರೋಗ್ಯಕರ ಚಟುವಟಿಕೆಗಳಿಗೆ ನಿವೃತ್ತ ನೌಕರರು ಮಾದರಿ; ರಾಂ.ಕೆ.ಹನುಮಂತಯ್ಯ

ದೊಡ್ಡಬಳ್ಳಾಪುರ, (ಜುಲೈ.06); ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ದೊಡ್ಡಬಳ್ಳಾಪುರ ತಾಲೂಕು ಶಾಖೆ ವತಿಯಿಂದ ನಡೆಯುವ ಮಾಸಿಕ ಸಭೆಯಲ್ಲಿ ಕೈಗೊಳ್ಳುವ ಹಲವು ಸಮಾಜಮುಖಿ ಕಾರ್ಯಗಳು ಆರೋಗ್ಯಕರ ಚಟುವಟಿಕೆಗಳಿಗೆ ಮಾದರಿ ಎಂದು ಬೆಂಗಳೂರಿನ ಕನ್ನಡಿಗರ ಸ್ನೇಹ ಕೂಟದ ಸಂಸ್ಥಾಪಕ ಅಧ್ಯಕ್ಷ, ಸಾಹಿತಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಆರಕ್ಷಕ ರತ್ನ ರಾಂ.ಕೆ.ಹನುಮಂತಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಪ್ರತಿ ತಿಂಗಳು ಸಭೆ ಸೇರಿ ಹಿರಿಯ ಚೇತನಗಳಿಗೆ ಚೈತನ್ಯ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರುತ್ತಿರುವುದು ಶ್ಲಾಘನೀಯ ಎಂದರು.

ರಾಂ.ಕೆ ಅವರು 96 ವರ್ಷ ವಯೋಮಾನದ ನರಸಯ್ಯನ ಅಗ್ರಹಾರ ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ ಕೆ.ವೀರೇಗೌಡ,‌90 ವರ್ಷ ವಯೋಮಾನದ ಹಾದ್ರಿಪುರದ ನಿವೃತ್ತ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಹನುಮಂತರಾಯಪ್ಪ, 85 ವರ್ಷ ವಯೋಮಾನದ ರೋಜಿಪುರದ ನಿವೃತ್ತ ಶಿಕ್ಷಕಿ ಸರ್ವಮಂಗಳಮ್ಮ ,85 ವರ್ಷ ವಯೋಮಾನದ ಸೋಮೇಶ್ವರ ಬಡಾವಣೆ ನಿವೃತ್ತ ಮುಖ್ಯ ಶಿಕ್ಷಕ ಸಿ.ಬಸವರಾಜು ಮತ್ತು 80 ವಯೋಮಾನದ ಗುಂಡಪ್ಪ ನಾಯಕನಹಳ್ಳಿಯ ನಿವೃತ್ತ ಶಿಕ್ಷಕ ಉಗ್ರೇಗೌಡ ಇವರುಗಳಿಗೆ ಹೆಣ್ಣೂರು ಕನ್ನಡಿಗರ ಸ್ನೇಹ ಕೂಟ ಪರವಾಗಿ ಸನ್ಮಾನ ನೀಡುವ ಮೂಲಕ ಗೌರವಿಸಿದರು.

ಸಂಘದ ಬೆನ್ನೆಲುಬಾಗಿ ನಿಂತು ಸದಾ ಚೈತನ್ಯದ ಚಿಲುಮೆಯಂತೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ನಿವೃತ್ತ ಬಂಧು ಕದರಪ್ಪ ವಿಧಿವಶರಾಗಿದ್ದು ಅವರಿಗೆ ಸಭೆಯ ಮೂಲಕ ಮೌನ ಶ್ರದ್ಧಾಂಜಲಿ ಸಲ್ಲಿಸಿ ಅವರ ಪವಿತ್ರವಾದ ಆತ್ಮಕ್ಕೆ ಚಿರ ಶಾಂತಿಯನ್ನು ಕೋರಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಮಹಾಲಿಂಗಯ್ಯ ಮಾತನಾಡಿ, ಅರವತ್ತು ವರ್ಷ ಮೇಲ್ಪಟ್ಟವರ ಜೀವನ ಶೈಲಿ ಹೇಗಿರಬೇಕು? ಅನ್ನುವ ಅತ್ಯುತ್ತಮ ಮಾಹಿತಿಯನ್ನು ಓದಿ ಮನವರಿಕೆ ಮಾಡಿಕೊಟ್ಟರು. ಸಂಘದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಎಲ್ಲಾ ಇಲಾಖೆಗಳ ನಿವೃತ್ತ ನೌಕರರು ಅಧಿಕಾರ ಅಂತಸ್ತು ಮರೆತು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಕೋರಿದರು.

ಇದೇ ವೇಳೆ  ವಕೀಲರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಟಿ.ನಂಜಪ್ಪನವರು ಸಂಘದ ವರದಿಯನ್ನು ಆಧರಿಸಿ ಮಾತನಾಡಿ, ಸಂಘದ ಪ್ರಗತಿ ಪರ ಚಟುವಟಿಕೆಗಳನ್ನು ಪ್ರಶಂಸಿಸಿದರು.

ಬೆಂಗಳೂರು ಉತ್ತರ ತಾಲೂಕಿನ ನಿವೃತ್ತ ಉಪನ್ಯಾಸಕ ಶಿವರಾಜು ರವರು ಪೌರಾಣಿಕ ಭಕ್ತಿ ಗೀತೆಗಳನ್ನು ಹಾಡಿ ಹಿರಿಯ ಚೇತನಗಳನ್ನು ಭಾವ ಪರವಶರನ್ನಾಗಿ ಮಾಡಿದರು.

ನವೋದಯ ವಿದ್ಯಾಲಯದ ನಿವೃತ್ತ ಜಿ.ಎಸ್ ಹೆಗಡೆ ಅವರು ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಸಾಧ್ಯವಾದಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ನೆರವಾಗುವ ಅಂಶಗಳನ್ನು ತಿಳಿಸಿದರು.

 ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಟಿ.ಮುನಿರಾಜು ರವರು ಪ್ರತಿಯೊಬ್ಬ ನಿವೃತ್ತಿ ಹೊಂದಿದ ಸದಸ್ಯರು ಸಂಘದ ಸದಸ್ಯತ್ವ ಪಡೆದು ಕೈಗೊಳ್ಳುವಂತೆ ಸಲಹೆ ನೀಡಿದರು.ಪ್ರಸ್ತುತ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಎಲ್ಲರೂ ಜಾಗರೂಕರಾಗಿರಿ ಎಂದು ಕರೆ ನೀಡಿದರು.

ಸಭೆಯಲ್ಲಿ ವರದಿಯನ್ನು ಕಾರ್ಯದರ್ಶಿ ಕೆ.ಚನ್ನಪ್ಪ ಓದಿ ದಾಖಲಿಸಿದರು.ಸಂಘದ ಆಯವ್ಯಯವನ್ನು ಕೋಶಾಧ್ಯಕ್ಷ ರಂಗಸ್ವಾಮಯ್ಯ ಮಂಡಿಸಿ, ಅನುಮೋದನೆ ಪಡೆದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಅಬ್ದುಲ್ ಕರೀಂ, ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್ ಪ್ರಭಾಕರ್, ಉಪಾಧ್ಯಕ್ಷ ಕರಿಬಸವದೇವರು ,ಉಳಿದಂತೆ ಸಂಘದ ಹಿರಿಯರಾದ ತಿಪ್ಪೇಸ್ವಾಮಿ, ಶಿವರುದ್ರಯ್ಯ, ಪ್ರೊ.ಈಶ್ವರಾಚಾರ್, ಕೆ.ಎನ್ ಸರೋಜಮ್ಮ, ಗಂಗಾಂಬಿಕೆ, ಡಿ.ವಿ ಪದ್ಮಾವತಮ್ಮ, ರಾಧಾ ಲಕ್ಷ್ಮೀ, ಮಹಾದೇವಯ್ಯ, ಲಕ್ಷ್ಮೀಪತಿ, ಕೆ.ಜಿ.ಮುನಿರಾಜು, ನಜೀರ್, ರಾಮಕೃಷ್ಣಯ್ಯ, ನರಸಿಂಹಯ್ಯ, ಕಗ್ಗೇರಪ್ಪ ಮುಂತಾದವರು ಉಪಸ್ಥಿತರಿದ್ದರು.

ಹಾಡೋನಹಳ್ಳಿ ಜಾನಪದ ಕಲಾವಿದ ಗೋವಿಂದರಾಜು ಮತ್ತು ಜಯರಾಂ ಗೀತೆಗಳನ್ನು ಹಾಡಿ ರಂಜಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ಬೆಂಗಳೂರು: ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ರಣದೀಪ್ ಸುರ್ಜೇವಾಲ (Randeep Surjewala) ಅವರಿಗೆ ಅಭಿನಂದನೆಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="111193"]
ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಪ್ರಶ್ನಿಸಲು ಬಯಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ಅವರು ತಿಳಿಸಿದ್ದಾರೆ.

[ccc_my_favorite_select_button post_id="111198"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ..!

ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ..!

ಪೊಲೀಸ್ ಠಾಣೆ ಆವರಣದಲ್ಲಿರುವ ರೆಸ್ಟ್ ರೂಮ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ (Suicide) ಘಟನೆ

[ccc_my_favorite_select_button post_id="111207"]
FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನಪ್ಪಿರುವ (Dies) ಘಟನೆ ದೊಡ್ಡಬಳ್ಳಾಪುರ- ರಾಜಾನುಕುಂಟೆ ನಡುವಿನ ***

[ccc_my_favorite_select_button post_id="111089"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!