ಬೆಂಗಳೂರು, (ಜುಲೈ.19); ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕುರಿತಂತೆ ನಾಲಿಗೆ ಹರಿಬಿಟ್ಟಿರುವ ಫೋನ್‌ಪೇ ಸಿಇಒ ಮತ್ತು ಸಹ-ಸಂಸ್ಥಾಪಕ ಸಮೀರ್ ನಿಗಮ್ ವಿರುದ್ಧ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ.
ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅನ್ಇನ್ಸ್ಟಾಲ್ ಫೋನ್ ಪೇ ಟ್ರೆಂಡ್ ಆಗಿದ್ದು ಕನ್ನಡಿಗರ ಶಕ್ತಿ ಪ್ರದರ್ಶನಕ್ಕೆ ಕರೆ ನೀಡಲಾಗಿದೆ.
ಖಾಸಗಿ ಕಂಪನಿಗಳಲ್ಲಿನ ಎಲ್ಲಾ ನಿರ್ವಹಣಾ ಹುದ್ದೆಗಳಲ್ಲಿ 50% ಮತ್ತು ಎಲ್ಲಾ ನಿರ್ವಹಣೇತರ ಹುದ್ದೆಗಳಲ್ಲಿ 70% ಸ್ಥಳೀಯ ನಿವಾಸಿಗಳಿಗೆ ಮೀಸಲಿಡಬೇಕು ಎಂಬ ಮಸೂದೆಯನ್ನು ಈ ರೀತಿಯ ಖಾಸಗಿ ಕಂಪನಿಗಳ ಬೆದರಿಕೆಗೆ ಮಣಿದು ಕರ್ನಾಟಕ ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿದಿದೆ.
ಆದರೆ ರಾಜ್ಯ ಸರ್ಕಾರ ಮಸೂದೆಯ ಅನುಷ್ಠಾನವನ್ನು ತಡೆಹಿಡಿಯುವ ನಿರ್ಧರಿಸುವುದಕ್ಕೂ ಮುನ್ನವೇ ಫೋನ್‌ಪೇ ನಿಗಮ್ ಅವರು ಈ ಮಸೂದೆಯನ್ನು ಟೀಕಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಆತ, “ನನಗೆ 46 ವರ್ಷ. 15 ಕ್ಕೂ ಹೆಚ್ಚು ವರ್ಷಗಳ ಕಾಲ ನಾನು ರಾಜ್ಯದಲ್ಲಿ ಎಂದಿಗೂ ವಾಸಿಸಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ದೇಶದಾದ್ಯಂತ ಕೆಲಸ ಮಾಡಿದ್ದಾರೆ. ಈಗ ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಕಂಪನಿಗಳನ್ನು ನಿರ್ಮಿಸುತ್ತೇನೆ. ಭಾರತದಾದ್ಯಂತ 25,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ! ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ಈ ವಿಚಾರ ನಾಚಿಕೆ ಎನಿಸಿದೆ” ಎಂದಿದ್ದಾರೆ.
ನಿಗಮ್ ಅವರ ಪೋಸ್ಟ್ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ಹಲವಾರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ನೀವು ಉದ್ಯೋಗಕ್ಕೆ ಅರ್ಹರಲ್ಲ ಎಂದು ಯಾರೂ ಹೇಳಿಲ್ಲ. ನೀವು ಮಾಡಬೇಕಾಗಿರುವುದು ಭಾಷೆಯನ್ನು ಕಲಿಯುವುದು ಮಾತ್ರ ಎಂದು ಒಬ್ಬರು ಬರೆದಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕು ಎಂಬುದು ಇಲ್ಲಿನ ಬೇಡಿಕೆ. ಅದನ್ನು ಪಡೆಯಿರಿ. ನಾನು ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು, ನಾನು ಬಯಸುವ ಯಾವುದೇ ಭಾಷೆಯನ್ನು ಕಲಿಯಬಹುದು. ಭಾರತದ ಸಂವಿಧಾನ ನನಗೆ ಈ ಹಕ್ಕುಗಳನ್ನು ನೀಡಿದೆ. ಇದು ನನ್ನ ಆಯ್ಕೆಯಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅನ್ ಇನ್ಸಾಲ್ ಫೋನ್ ಪೇ ಹಾಗೂ ಬಾಯ್ಕಾಟ್ ಫೋನ್ ಪೇ ಟ್ರೆಂಡ್ ಆಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….