ಬೆಂಗಳೂರು, (ಜುಲೈ.20); ವಾಹನ ಚಾಲನೆ ತರಬೇತಿಗೆ ಬಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಕಾರ್ ಡ್ರೈವಿಂಗ್ ಕಲಿಸುವಾತನನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಡ್ರೈವಿಂಗ್ ಕಲಿಸುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಟ್ರೈನರ್ ಅಣ್ಣಪ್ಪಣ್ಣ ಬಂಧಿತ ಆರೋಪಿ
18 ವರ್ಷದ ಯುವತಿಗೆ ಕಿಕಾರ್ ಡ್ರೈವಿಂಗ್ ಕಲಿಯಲು ಡ್ರೈವಿಂಗ್ ಸ್ಕೂಲ್ ಒಂದರಲ್ಲಿ ತರಬೇತಿ ಪಡೆಯುತ್ತಿದ್ದಳು. ಈಕೆ ತರಬೇತಿಯನ್ನು ಮುಗಿಸಿದ ಬಳಿಕ ನಿಮ್ಮದೇ ಸ್ವಂತ ಕಾರಿನಲ್ಲಿ ವಿಶೇಷ ತರಬೇತಿ ನೀಡುವುದಾಗಿ ಅಣ್ಣಪ್ಪ ಹೇಳಿದ್ದ. ಇದಕ್ಕಾಗಿ 15 ದಿನಗಳಿಗೆ ಶುಲ್ಕವನ್ನೂ ಪಡೆದಿದ್ದ.
ಜುಲೈ 07 ರಂದು ಬೆಳಗ್ಗೆ ಯುವತಿಗೆ ತರಬೇತಿ ನೀಡುತ್ತಿದ್ದ ಆರೋಪಿ, ಕಾರ್ಡ್ ರೋಡ್ ಫೈಓವರ್ ಬಳಿ ಬಂದಾಗ ತನ್ನ ಮರ್ಮಾಂಗ ಪ್ರದರ್ಶಿಸಿ ಯುವತಿಗೆ ಕಿರುಕುಳ ನೀಡಿದ್ದಾನೆ. ದಿಕ್ಕು ತೋಚದಂತಾದ ಯುವತಿ ಕಾರಿಂದ ಇಳಿದು ಹೋಗಿದ್ದಾಳೆ.
ನಂತರ ಬಸವೇಶ್ವರ ನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….