ದೆಹಲಿ, (ಜುಲೈ.20): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ‘ಮನುಷ್ಯ ದೇವರಾಗಲು ಬಯಸುತ್ತಾನೆ’ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಹೇಳಿಕೆ ಪ್ರಧಾನಿ ಮೋದಿ ಗುರಿಯಾ ಗಿಸಿ ನೀಡಿದ ಹೇಳಿಕೆ ಎಂಬ ಚರ್ಚೆ ರಾಜ ಕೀಯ ವಲಯದಲ್ಲಿ ನಡೆಯುತ್ತಿದೆ. ಜಾರ್ಖಂಡ್‌ನ ಗುಮ್ಲಾದಲ್ಲಿ ವಿಕಾಸ ಭಾರತಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮೋಹನ್ ಭಾಗವತ್ ಮನುಷ್ಯನ ಬಯಕೆಗಳಿಗೆ ಕೊನೆು ಇಲ್ಲ ಎಂಬ ವಿಚಾರದ ಬಗ್ಗೆ ಮಾತನಾಡುವಾಗ, ‘ಸ್ವಯಂ ಅಭಿವೃದ್ಧಿಯ ಹಾದಿಯಲ್ಲಿ ಮನುಷ್ಯ ಸೂಪರ್ ಮ್ಯಾನ್ ಆಗಲು ಬಯಸುತ್ತಾನೆ, ಬಳಿಕ ದೇವರಾಗಲು ಬಯಸುತ್ತಾನೆ. ಆದರೆ ಮುಂದೇನು ಎಂಬ ಬಗ್ಗೆ ಯಾರಿಗೂ ಅರಿವಿಲ್ಲ.
ಆಂತರಿಕ ಹಾಗೂ ಬಾಹ್ಯ ಬೆಳವಣಿಗೆಗೆ ಕೊನೆಯೇ ಇಲ್ಲ, ಇದೊಂದು ನಿರಂತರ ಪ್ರಕ್ರಿಯೆ ಹೀಗಾಗಿ ಕಾರ್ಯಕರ್ತರು ಬಹಳಷ್ಟು ಕೆಲಸವಾಗಿದೆ, ಬಹಳಷ್ಟು ಕೆಲಸ ಉಳಿದಿದೆ ಎಂಬ ಮನೋಭಾವದಲ್ಲಿ ಇರಬೇಕು ಎಂದು’ ಎಂದು ಮೋಹನ್ ಭಾಗವತ್ ಹೇಳಿದ್ದರು.
ಮನುಷ್ಯ ದೇವನಾಗಲು ಬಯಸುತ್ತಾನೆ ಎಂಬ ಹೇಳಿಕೆ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿ ಹೇಳಿದ ಮಾತು ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್ ಮುಖಂಡ ಜೈ ರಾಮ್ ರಮೇಶ್ ಕೂಡ ಇದೇ ದೃಷ್ಟಿಕೋನದಲ್ಲೇ ಪೋಸ್ಟ್ ವೊಂದನ್ನು ಹಂಚಿ ಕೊಂಡಿದ್ದು ‘ಲೋಕ ಕಲ್ಯಾಣ್ ಮಾರ್ಗ ಗುರಿಯಾಗಿಸಿ ಜಾರ್ಖಂಡ್‌ನಿಂದ ಅಗ್ನಿ ಕ್ಷಿಪಣಿ ಹೊರಟಿದೆ, ಸ್ವಯಂ ಘೋಷಿತ ಜೈವಿಕವಲ್ಲದ ಪ್ರಧಾನಿಗೆ ಈ ಸುದ್ದಿ ಸಿಕ್ಕಿದೆ ಎಂದು ಭಾವಿಸುತ್ತೇನೆ’ ಎಂದು ಟೀಕಿಸಿದ್ದಾರೆ.
ಚುನಾವಣೆ ಸಮಯದಲ್ಲಿ ಮೋದಿ ಅವರ ‘ನನ್ನನ್ನು ಭಗವಂತನೇ ಕಳುಹಿಸಿದ್ದಾನೆ’ ಎಂಬ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದ್ದು ಮೋಹನ್ ಭಾಗವತ್ ಅವರ ಮಾತಿಗೆ ಈ ವಿಚಾರವನ್ನು ಹೋಲಿಸಿ ಅಣಕಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….