ಬಾಗಲಕೋಟೆ, (ಜುಲೈ.20): ಅಚ್ಚರಿ ಎಂಬಂತೆ 25 ಬೆರಳುಗಳು ಇರುವ ಅಪರೂಪದ ಮಗುವೊಂದು ಬಾಗಲಕೋಟೆ ಜಿಲ್ಲೆಯಲ್ಲಿ ಜನಿಸಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವಿಗೆ 25 ಬೆರಳುಗಳಿವೆ.
ಭಾರತಿ ಕೊಣ್ಣೂರು (35) ಎಂಬವರ ಮಗು 12 ಕಾಲೆರಳುಗಳು ಹಾಗೂ 13 ಕೈ ಬೆರಳುಗಳೊಂದಿಗೆ ಜನಿಸಿದೆ.
ಇದನ್ನು ಕಂಡು ಒಮ್ಮೆ ವೈದ್ಯರೇ ಆಶ್ಚರ್ಯಗೊಂಡಿದ್ದಾರೆ. ಅಚ್ಚರಿಯ ಮಗು ಜನನದ ಹಿನ್ನೆಲೆ ಕುಟುಂಬದಲ್ಲಿ ಹರ್ಷ ಮನೆ ಮಾಡಿದೆ.
25 ಬೆರಳು ಇರುವುದು ಅತ್ಯಂತ ಅಪರೂಪ ಘಟನೆಗಳಲ್ಲೊಂದು. ಬಲಗೈಗೆ 6 ಬೆರಳು ಎಡಗೈಗೆ 7 ಬೆರಳು, ಎರಡು ಕಾಲಿನಲ್ಲಿ 6 ಬೆರಳುಗಳಿವೆ.
ಮಗುವಿನ ಆರೋಗ್ಯ ಸ್ಥಿರವಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ. (ಪೋಷಕರು ಮಾಧ್ಯಮಗಳಿಗೆ ನೀಡಿದ ಅನುಮತಿ ಮೇರೆಗೆ ಮಗುವಿನ ವಿಡಿಯೋ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….