ದೊಡ್ಡಬಳ್ಳಾಪುರ, (ಜುಲೈ.28); ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ, ಸಹೋದರತೆ, ರಾಷ್ಟ್ರೀಯ ಭಾವೈಕ್ಯತೆ ಮುಂತಾದ ಗುಣಗಳನ್ನು ಬೆಳೆಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ಭಾರತ್ ಸೇವಾದಳದ ಜಿಲ್ಲಾ ಅಧ್ಯಕ್ಷ ಜಿ.ಲಕ್ಷ್ಮೀಪತಿ ಹೇಳಿದರು.
ಶನಿವಾರ ನಡೆದ ಒಂದು ದಿನದ ಸೇವಾದಳದ ಶಿಕ್ಷಕರ ಮಿಲಾಬ್ ಶಿಬಿರದಲ್ಲಿ ಮಾತನಾಡಿದ ಅವರು, ಭಾರತ ಸೇವಾದಳ ಶಿಕ್ಷಕರಿಗೆ ರಾಷ್ಟ್ರಧ್ವಜ ಕಟ್ಟುವುದು, ರಾಷ್ಟ್ರಗೀತೆ ಹಾಡುವುದು, ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ಬಗ್ಗೆ ರಾಷ್ಟ್ರ ಪ್ರೇಮ ಮುಂತಾದ ವಿಷಯಗಳ ಬಗ್ಗೆ ಶಿಕ್ಷಕರಿಗೆ ಈ ಒಂದು ದಿನದ ಪುನಶ್ವೇತನ ಕಾರ್ಯಕ್ರಮ ನಡೆಸಲಾಗುತ್ತಿದೆ. ಶಿಕ್ಷಕರು ತಮ್ಮ ಶಾಲೆಗಳಲ್ಲಿ ಇದನ್ನು ಅಳವಡಿಸಿಕೊಂಡು ಸೇವಾದಳದ ಆಶಯದಂತೆ ಮಕ್ಕಳನ್ನು ಶಿಸ್ತಿನ ಸಿಪಾಯಿಗಳನ್ನಾಗಿ ಬೇಕೆಂದು ಕರೆ ನೀಡಿದರು. ಮಾಡ
ತಾಲೂಕಿನ ಪ್ರತಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೇವಾದಳದ ಘಟಕವನ್ನ ಪ್ರಾರಂಭಿಸಲು ಪ್ರಯತ್ನಿಸುವುದಾಗಿ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಸೇವಾದಳದ ಸಮವಸ್ತ್ರವನ್ನ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ತಾಲೂಕಿನ ಸುಮಾರು 70 ಶಿಕ್ಷಕರಿಗೆ ತಾಲೂಕ್ ಸಂಘಟಿಕರಾದ ಸುರೇಶ್ ಹಾಗೂ ಜಿಲ್ಲಾ ಸಂಘಟಿಕರಾದ ರಾಜುರವರು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಮುನಿರಾಜು, ಗಂಗಾಧರ್, ತಾಲೂಕು ಪ್ರಭಾರಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಕೇಶವಮೂರ್ತಿ ತಾಲೂಕು ನಿರ್ದೇಶಕರಾದ ವಿಸಿ ಜ್ಯೋತಿ ಕುಮಾರ್, ಮಹೇಶ್, ಆನಂದ್, ಅಂಬರೀಶ್, ಮಮತಾ, ಸುಮಂಗಲ ವೆಂಕಟೇಶ್, ಕುಮಾರಿ ಸಹನಾ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

