ಕೋಲಾರ, (ಆಗಸ್ಟ್.19); ಮುಳಬಾಗಿಲಿನ ಸುಂಕು ಬಡಾವಣೆಯ ಶಿಕ್ಷಕಿ 43 ವರ್ಷದ ದಿವ್ಯಶ್ರೀ ಕೊಲೆ ಪ್ರಕರಣದ ಆರು ಆರೋಪಿಗಳನ್ನು ಕೋಲಾರ ಪೊಲೀಸರು ತಿರುಪತಿಯಲ್ಲಿ ಬಂಧಿಸಿದ್ದಾರೆ.
ಕೊಲೆ ಮಾಡಿ ತಿರುಪತಿ ಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮೊಬೈಲ್ ಫೋನ್ ಟವರ್ ಆಧಾರ್ ಮೇಲೆ ಬಂಧಿಸಲಾಗಿದೆ.
ಆಸ್ತಿ ವಿವಾದ ಮತ್ತು ದ್ವೇಷದ ಹಿನ್ನೆಲೆ ಯಲ್ಲಿ ಸಂಬಂಧಿಕರೇ ಕೊಲೆಗೆ ಸುಫಾರಿ ನೀಡಿದ್ದು ಇದಕ್ಕಾಗಿ ಸ್ಥಳೀಯ ಯುವಕರನ್ನು ಬಳಸಿಕೊಳ್ಳಲಾಗಿತ್ತೆಂದು ತಿಳಿದು ಬಂದಿದೆ.
ಭಾನುವಾರ ಸಂಜೆ ಆರೋಪಿಗಳನ್ನು ತಿರುಪತಿಯಲ್ಲಿ ಬಂಧಿಸಿ ಕೋಲಾರಕ್ಕೆ ಕರೆತರಲಾಗಿದೆ. ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….