ವೇದ ಜ್ಯೋತಿಷ್ಯದ ಆಧಾರದ ಮೇಲೆ ಧನಸ್ಸು ರಾಶಿಯ ಜಾತಕದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಫಲಿತಾಂಶಗಳು ಹೀಗಿದೆ.
ರಾಶಿ ಚಕ್ರದಲ್ಲಿ ಒಂಬತ್ತನೇ ಜ್ಯೋತಿಷ್ಯ ರಾಶಿಯಾಗಿದ್ದು, ಆಕಾಶ ರೇಖಾಂಶದ 240-270 ಡಿಗ್ರಿಗಳನ್ನು ವ್ಯಾಪಿಸಿದೆ.
ಧನಸ್ಸು ರಾಶಿ: ನಿಮಗೆ ಗುರು ಮತ್ತು ಶನಿಯು ಯಾವ ತೊಂದರೆಯನ್ನು ನೀಡದೆ, ಹೊಸ ಕೆಲಸದ ಬಗ್ಗೆ, ಕೆಲಸದಲ್ಲಿ ಬಡ್ತಿಯ ಬಗ್ಗೆ, ಅವಿವಾಹಿತರಿಗೆ ವಿವಾಹ ಯೋಗ, ಮನೆ ಕಟ್ಟುವುದು-ಕೊಳ್ಳುವುದು, ಇತರೆ ಆಸ್ತಿ ಖರೀದಿ, ಪ್ರವಾಸ , ವಿದೇಶ ಪ್ರಯಾಣ ಮೊದಲಾದ ಎಲ್ಲ ಸಂಗತಿಗಳೂ ಈಗ ನಡೆಯುತ್ತದೆ.
ಶನಿ ನಿಮಗೆ ಅಪಾರ ಶಕ್ತಿಯ ಜೊತೆಗೆ ಧನ ಲಾಭವನ್ನು ಕೊಡುತ್ತಾನೆ. ವೃತ್ತಿ ಸಂಬಂಧವಾಗಿ ಕೊಂಚ ಅಲೆದಾಟ ಇರುತ್ತದೆ. ಆಸ್ತಿ ಕೊಳ್ಳುವಾಗ ಯೋಚಿಸಿ ದಾಖಲೆಗಳನ್ನು ಪರಿಶೀಲಿಸಿ ಖರೀದಿ ಮಾಡಿಕೊಳ್ಳುವುದು ಸೂಕ್ತ. ರಾಹು ಕೊಂಚ ದಾರಿ ತಪ್ಪಿಸುತ್ತಾನೆ.
ತಾಯಿಯ ಆರೋಗ್ಯ ಜಾಗ್ರತೆ ಇರಲಿ. ರವಿ-ಕುಜ ಧನಸ್ಸು ರಾಶಿಗೆ ಪ್ರವೇಶವಾಗುವುದು ನಿಮಗೆ ಕೊಂಚ ಉಷ್ಣ ಪ್ರಕೋಪ ಹೆಚ್ಚಾಗುತ್ತದೆ. ಹಠ ಜಾಸ್ತಿಯಾಗುತ್ತದೆ. ಇದರಿಂದ ಯಾವುದೇ ಅನಾಹುತಗಳಾಗದಂತೆ ತಡೆಯುವುದು ನಿಮ್ಮ ಕೈಯಲ್ಲೇ ಇದೆ.
ಮಗನೊಂದಿಗೆ ಬಾಂಧವ್ಯ ಚೆನ್ನಾಗಿ ಇರುತ್ತದೆ. ಮಗನಿಂದ ಖುಷಿ, ಸಂತೋಷದ ಸಂಗತಿಗಳು ಇವೆ. ಲೋಹದ ವ್ಯಾಪಾರಿಗಳಿಗೆ ಈಗ ಬಹಳ ಒಳ್ಳೆಯ ಕಾಲ. ವಿದ್ವಾಂಸರಿಗೆ ಬರಹಗಾರರಿಗೆ ಅಧ್ಯಾಪಕ ವೃತ್ತಿಯವರಿಗೆ ಈಗ ಶುಭಕಾಲ.
ಧನಸ್ಸು ರಾಶಿ: ಮೂಲ (4 ಪಾದಗಳು), ಪೂರ್ವಾಷಾಡ ನಕ್ಷತ್ರ(4 ಪಾದಗಳು), ಉತ್ತರಾಷಾಡ ನಕ್ಷತ್ರ(1ನೇ ಪಾದ) ಧನಸ್ಸು ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಗುರು.
ಧನಸ್ಸು ರಾಶಿಗೆ ಸೂಚಿಸಲಾದ ಅಕ್ಷರಗಳು: ಯೊ, ಬ, ಬಿ, ಬು, ಧ, ಭ, ಬೆ.
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsapp, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….</