ನಮಗಿಲ್ಲಿ ಫುಲ್​ ಮೆಜಾರಿಟಿ ಇದೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುತ್ತಾ..? ಮೊದಲು ಕೇಳಿ: ಸಂತೋಷ್ ಲಾಡ್ ತಿರುಗೇಟು

ಹುಬ್ಬಳ್ಳಿ, (ಸೆ.10); ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡುವುದು ಅಪ್ರಸ್ತುತ. ಯಾರಾದ್ರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರೆ, ಅದು ಅವರ ವೈಯಕ್ತಿಕ. ನಮ್ಮ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲವೆಂದು ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿಗಳ ಬದಲಾವಣೆ ಕುರಿತಂತೆ ವೇಣುಗೋಪಾಲ ಹಾಗೂ ಸುರ್ಜೇವಾಲಾ ಸ್ಪಷ್ಟನೆ ಕೊಟ್ಟಿದ್ದಾರೆ. ಹೈಕಮಾಂಡ್​‌ನಿಂದ ಸಿದ್ದರಾಮಯ್ಯ ಅವರಿಗೆ ಬೆಂಬಲವಿದೆ ಎಂದು ಹೇಳಿದ್ದಾರೆ. ಆದರೆ ವೈಯಕ್ತಿಕ ಅಭಿಪ್ರಾಯಗಳು ನನಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು‌.

ಬಿಜೆಪಿಯವರಿಗೆ ಭವಿಷ್ಯ ಹೇಳುವುದೇ ಕಾಯಕವಾಗಿದೆ. ದೀಪಾವಳಿ ಒಳಗೆ ಸರ್ಕಾರ ಬೀಳುತ್ತದೆ ಎಂದು ಹೇಳಿದ್ದಾರೆ. ಒಂದು ವರ್ಷದಿಂದ ಇದನ್ನೇ ಹೇಳುತ್ತಿದ್ದಾರೆ. ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ. ನಮಗೆ 136 ಸೀಟುಗಳಿವೆ. ಯಾವುದೇ ಕಾರಣಕ್ಕೂ ಆ ರೀತಿ ಆಗುವುದಿಲ್ಲ. ಹಾಗೇನಾದರೂ ಆದರೆ ಕೇಂದ್ರದಲ್ಲಿ ಆಗಬಹುದು. ಯಾಕೆಂದರೆ ಅವರ ಹತ್ತಿರ ಫುಲ್​ ಮೆಜಾರಿಟಿ ಇಲ್ಲ. 

ನಾಳೆ ಜಮ್ಮು ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರ ಸೋಲುವ ಸಾಧ್ಯತೆ ಇದೆ. ಬಿಹಾರ ಕೂಡ ಸೋಲಬಹುದು. ಮುಂದೆ ನಾಲ್ಕು ರಾಜ್ಯಗಳ ಚುನಾವಣೆಯಾದ್ರೆ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಇರುತ್ತಾ ಎಂಬ ಪ್ರಶ್ನೆಯನ್ನು ಅವರನ್ನು ಕೇಳಬೇಕು. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಬೀಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಫೋಟೋಗಳು ವೈರಲ್ ಆಗಿರುವ ವಿಚಾರದಲ್ಲಿ ಆರೋಪ ಮಾಡುತ್ತಿರುವ ಪ್ರಹ್ಲಾದ್ ಜೋಶಿ ಅವರದ್ದೇ ಕೈವಾಡ ಇರಬಹುದು. ಇಷ್ಟು ನಿಖರವಾಗಿ ಫೋಟೋ ಬಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ ಅಂದ್ರೆ ಅವರಿಗೆ ಮಾಹಿತಿ ಇರಬೇಕು ಎಂದು ತಿರುಗೇಟು ನೀಡಿದರು.

ಮುಡಾ, ವಾಲ್ಮೀಕಿ ಹಗರಣ ಮರೆಮಾಚುವ ಪ್ರಶ್ನೆ ಇಲ್ಲ. ಈ ಪ್ರಕರಣ ಓಪನ್ ಇದೆ. ಮುಡಾ ಹಗರಣದ ಬಗ್ಗೆ ಜೋಶಿಯವರಿಗೆ ಪ್ರಶ್ನೆ ಮಾಡಿ ಆವಾಗ ಸತ್ಯ ಗೊತ್ತಾಗಲಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ಮೇಲೆ ಯಾಕೆ ಪ್ರಾಸಿಕ್ಯೂಷನ್ ಹಾಕಿದ್ದಾರೆ. ಇನ್ನು 127 ಸೈಟ್ ಪಡೆದವರ ಮೇಲೆ ಯಾಕೆ ಇಲ್ಲ ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ ತಕ್ಷಣ ಮಹಾದಾಯಿ ಕ್ಲಿಯರೆನ್ಸ್​ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಇಲ್ಲಿಯವರೆಗೂ ಯಾಕೆ ಆಗಿಲ್ಲ? ಮಹಾದಾಯಿ ಕ್ಲಿಯರೆನ್ಸ್​ ಯಾಕೆ ಕೊಡಲಾಗುತ್ತಿಲ್ಲ? ರಾಜ್ಯ ಸರ್ಕಾರಕ್ಕೆ ಕೇಂದ್ರ ಬರಹದಲ್ಲಿ ನೀಡಲಿ. ಎನ್ವಿರಾನ್​ಮೆಂಟ್​ ಕ್ಲಿಯರೆನ್ಸ್​ ನೀಡಲು ಇಷ್ಟು ಮರಗಳ ಕಡಿಯಬೇಕಾಗುತ್ತದೆ ಅಂತ ತಿಳಿಸಲಿ ಎಂದು ಸವಾಲು ಹಾಕಿದರು.

ಕೇಂದ್ರ ಸಚಿವರು ರಾಜ್ಯಕ್ಕೆ ಬಂದು ಸರ್ಕಾರಕ್ಕೆ ಬಯ್ಯುವುದೊಂದೇ ಕೆಲಸವಾಗಿದೆ. ಕೇಂದ್ರದಲ್ಲಿ ಬಿಜೆಪಿ ಬಂದಾಗಿನಿಂದ ಎಷ್ಟು ಉಗ್ರರ ದಾಳಿಯಾಗಿದೆ. ಅದರ ಬಗ್ಗೆ ಜೋಶಿಯವರು ಮಾತಾಡ್ತಾರಾ? ಈ ಹಿಂದೆ ಕರ್ನಾಟಕ, ಗೋವಾ, ಕೇಂದ್ರ, ಜತೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿಯವರದೇ ಸರ್ಕಾರಗಳಿದ್ದರೂ, ಅಂದು ಮಹಾದಾಯಿಗೆ ಯಾವುದೇ ಕ್ಲಿಯರೆನ್ಸ್​ ಕೊಡಲಿಲ್ಲ. ಇತ್ತೀಚೆಗೆ ಬೇರೆ ರಾಜ್ಯಕ್ಕೆ ಪವರ್ ಲೈನ್​ ಹೋಗಲು ಕ್ಲಿಯರೆನ್ಸ್ ನೀಡಿದ್ದಾರೆ.

ನಮ್ಮ ರಾಜ್ಯದ ಮಹಾದಾಯಿಗೆ ಕ್ಲಿಯರೆನ್ಸ್ ನೀಡಲು ಮಾತ್ರ ಬಿಜೆಪಿಗೆ ಯಾಕೆ ಆಗುತ್ತಿಲ್ಲ? ಜೋಶಿಯವರು ಮೊದಲು ಇದರ ಬಗ್ಗೆ ಮಾತಾಡಲಿ‌. ಈಗ ಮಹದಾಯಿ ವಿಚಾರವಾಗಿ ಸರ್ವಪಕ್ಷ ನಿಯೋಗ ಹೋಗುತ್ತಿದೆ. ಈ ಹಿಂದೆ ಇವರು ಐದು ವರ್ಷ ಅಧಿಕಾರದಲ್ಲಿದ್ದಾಗ ಏನ ಮಾಡಿದ್ರು? ಬಾಕಿಯಿರುವ ಕೆಲಸವನ್ನು ರಾತ್ರೋರಾತ್ರೀ ಮೋದಿಯವರು ಕ್ಲಿಯರ್​ ಮಾಡ್ತಾರಂತೆ. ಮಹಾದಾಯಿಗೊಂದು ಅನುಮೋದನೆ ನೀಡಲಿ ಎಂದರು.

ಪಡಿತರ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದ ಬಳಿ‌ ದುಡ್ಡಿಲ್ಲ ಎಂಬ ಬಿಜೆಪಿಗರ ಹೇಳಿಕೆ ವಿಚಾರಕ್ಕೆ ‌ಪ್ರತಿಕ್ರಿಯೇ‌ ನೀಡಿದ ಅವರು, ಆಹಾರ ಭದ್ರತೆ ಕಾಯ್ದೆ ತಂದವರು ನಾವು. ಮೋದಿ ಅಕ್ಕಿ ಮೋದಿ‌ ಅಕ್ಕಿ ಅಂತಿದ್ದಾರೆ. ಈಗ ಪಡಿತರ ಅಕ್ಕಿ ಕೊಡಲು ಸಿದ್ಧವಾಗಿರುವ ಕೇಂದ್ರ, ಈ ಹಿಂದೆ ಯಾಕೆ ನೀಡಲಿಲ್ಲ. 

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಹಿಂದೆ ಯಾಕೆ ಅಕ್ಕಿ ಕೊಡಲಿಲ್ಲ‌ ಹೇಳಲಿ. ಈಗ ಕೊಡುತ್ತೇವೆ ಅಂತಿದ್ದಾರೆ. ಈಗ ಯಾಕೆ ಕೊಡಲು ಒಪ್ಪಿಕೊಂಡರು ಎಂಬುದನ್ನು ರೈಟಿಂಗ್​ನಲ್ಲಿ ಜೋಶಿಯವರು ಉತ್ತರಿಸಲಿ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="110970"]
ಬೀದಿನಾಯಿಗಳಿಗೆ ಬಿರಿಯಾನಿ ಯೋಜನೆ ಲೂಟಿ ಮಾಡುವ ಉದ್ದೇಶ: ಆರ್‌.ಅಶೋಕ

ಬೀದಿನಾಯಿಗಳಿಗೆ ಬಿರಿಯಾನಿ ಯೋಜನೆ ಲೂಟಿ ಮಾಡುವ ಉದ್ದೇಶ: ಆರ್‌.ಅಶೋಕ

ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಸ್ಕೀಮ್‌: ಆರ್‌.ಅಶೋಕ (R. Ashoka)

[ccc_my_favorite_select_button post_id="111019"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ದೊಡ್ಡಬಳ್ಳಾಪುರ: ಅಕ್ರಮ ಗುಡಿಸಲು, ಶೆಡ್ ನಿರ್ಮಾಣದ ಆರೋಪ.. ನಗರಸಭೆಗೆ ದೂರು

ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ‌ನಿರ್ಮಾಣ ಮಾಡಲಾಗಿದೆ Municipal council

[ccc_my_favorite_select_button post_id="110824"]
ದೊಡ್ಡಬಳ್ಳಾಪುರ: ಲಾರಿಗೆ ಡಿಕ್ಕಿ.. ಬೊಲೆರೋ.. ವಾಹನ ಚಾಲಕ ಸಾವು..!

ದೊಡ್ಡಬಳ್ಳಾಪುರ: ಲಾರಿಗೆ ಡಿಕ್ಕಿ.. ಬೊಲೆರೋ.. ವಾಹನ ಚಾಲಕ ಸಾವು..!

ನಿಂತಿದ್ದ ಲಾರಿಗೆ ಹಿಂದಿನ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋ ಪಿಕಪ್ ವಾಹನ ಚಾಲಕ ಸಾವನಪ್ಪಿರುವ ಘಟನೆ (Accident)

[ccc_my_favorite_select_button post_id="111021"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!