ಚಿಕ್ಕಬಳ್ಳಾಪುರ, (ಸೆ.10): ತಾಲೂಕಿನ ಪೆರೇಸಂದ್ರ ಗ್ರಾಮದ ರಹಮತ್ತುಲ್ಲ ಎನ್ನುವ ಯುವಕ, ಬಾಗೇಪಲ್ಲಿ ತಾಲೂಕಿನ ಚೆಂಡೂರು ಗ್ರಾಮದ ಯುವತಿಯೊಬ್ಬಳ ಜತೆ ಹತ್ತು ವರ್ಷಗಳಿಂದ ಜೀವನ ನಡೆಸುತ್ತಿದ್ದ. ಆದರೆ ಮದುವೆಗೆ ನಿರಾಕರಿಸಿದ ಕಾರಣ ಯುವತಿ ಬೇರೆ ಮದುವೆ ಮಾಡಿಕೊಂಡಿದ್ದಳು.
ಆದರೂ ಬಿಡದ ಪಾಪಿ ರಹಮತ್, ಆಕೆಯ ಮನವೋಲಿಸಿ ಆಕೆಗೆ ಪತಿಯ ಜೊತೆ ಡೈವೊರ್ಸ್ ಕೊಡಿಸಿ ಮತ್ತೆ ಐದು ವರ್ಷ ಸಂಸಾರ ನಡೆಸಿದ್ದಾನೆ. ಆದರೆ, ಈಗ ಹುಟ್ಟಿದ ಮಗು ಹೆಣ್ಣೆಂಬ ಕಾರಣಕ್ಕೆ ಇಬ್ಬರನ್ನೂ ಬಿಟ್ಟು ಪರಾರಿಯಾಗಿದ್ದಾನೆ.
ಇದರಿಂದ ನೊಂದ ಮಹಿಳೆ ಪೆರೇಸಂದ್ರ ಪೊಲೀಸರಿಗೆ ದೂರು ನೀಡಿದ್ದಾಳೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsapp, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….</