ಬೆಂಗಳೂರು; ದಸರಾ ಕ್ರೀಡಾಕೂಟದ ಅಂಗವಾಗಿ ಇಂದು ನಡೆದ ಡಿವಿಷನ್ ವಿಭಾಗದ ಪಂದ್ಯಾವಳಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಂಡ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿವಮೊಗ್ಗದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಡಿವಿಷನ್ ವಿಭಾಗದ ಪಂದ್ಯಾವಳಿಯಲ್ಲಿ ಶಿವಮೊಗ್ಗ ತಂಡದ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಂಡ ವಿಜೇತರಾಗಿ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ದೊಡ್ಡಬಳ್ಳಾಪುರದ ಹಿಲ್ಸ್ ಸ್ಪೋರ್ಟ್ಸ್ ಅಕಾಡೆಮಿಯ ಆಕಾಶ್ ನೇತೃತ್ವದಲ್ಲಿ ರಜತ್, ಸತೀಶ್, ಚಂದನ್, ನವೀನ್ ಅವರ ತಂಡ ಈ ಸಾಧನೆಯನ್ನು ಮಾಡಿದೆ.
ರಾಜ್ಯಮಟ್ಟದ ಆಯ್ಕೆಯಾದ ಆಟಗಾರರನ್ನು ಹಿಲ್ಸ್ ಸ್ಪೋರ್ಟ್ಸ್ ಅಕಾಡೆಮಿಯ ಮುಖ್ಯಸ್ಥರಾದ ಚೇತನ್ ಅವರು ಅಭಿನಂದನೆ ಸಲ್ಲಿದ್ದಾರೆ.