ಸೇಡಂ: ಕೌಟುಂಬಿಕ ಕಲಹದ ಹಿಬ್ನಲೆಯಲ್ಲಿ ಪತ್ನಿಯನ್ನು ಕೊಡಲಿಯಿಂದ ಕೊಂದ ಪತಿ ಪೊಲೀಸರಿಗೆ ಶರಣಾದ ಘಟನೆ ತಾಲ್ಲೂಕಿನ ಬಟಗೇರಾ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು 42 ವರ್ಷದ ನಾಗಮ್ಮ ಎಂದು ಗುರುತಿಸಲಾಗಿದ್ದು, 45 ವರ್ಷದ ಶೇಖರ್ ಕೊಲೆ ಮಾಡಿದ ಆರೋಪಿ.
ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಇಬ್ಬರ ಮಧ್ಯೆ ಜಗಳವಾಗಿದ್ದರಿಂದ ಹೆಂಡತಿ ತವರು ಮನೆಗೆ ಹೋಗಿ. ಶನಿವಾರ ವಾಪಸ್ ಗಂಡನ ಮನೆಗೆ ಬಂದಿದ್ದಳಂತೆ. ಈ ವೇಳೆ ದಂಪತಿಗಳ ನಡುವೆ ಜಗಳ ನಡೆದಿದ್ದು, ರಾತ್ರಿ ಕೊಡಲಿಯಿಂದ ಹೆಂಡತಿ ಕತ್ತಿಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಹೆಂಡತಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಸ್ಥಳಕ್ಕೆ ಸಿಪಿಐ ಮಹಾದೇವ ದಿಡ್ಡಿಮನಿ, ಪಿಎಸ್‌ಐ ಮಂಜುನಾಥರೆಡ್ಡಿ ಭೇಟಿ ನೀಡಿದ್ದಾರೆ.
ಶೇಖರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೇಡಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.