ಧರ್ಮವರಂ; ಮಹಿಳೆ ಬಳಿ ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನ ಹಿಡಿಯಲು ಹೋಗಿದ್ದ ಪೊಲೀಸರು ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆ ಆಂದ್ರಪ್ರದೇಶದ ಮಣೂರು ಬಳಿ ನಡೆದಿದೆ.
ಶನಿವಾರ ಕಳ್ಳನೊಬ್ಬ ಮಹಿಳೆಯೊಬ್ಬರ 70 ಗ್ರಾಂ ಚಿನ್ನ ಕದ್ದು ಪರಾರಿಯಾಗಿರುವ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಕಳ್ಳನನ್ನು ಹಿಡಿಯಲು ಹೊರಟ್ಟಿದ್ದ ಪೊಲೀಸರ ವಾಹನ ಅಪಘಾತಕ್ಕೀಡಾಗಿದ್ದು, ಮೂರು ಜನ ಗಂಭೀರ ಗಾಯಗೊಂಡಿದ್ದಾರೆ.
ಮಧುಗಿರಿ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿಗಳಾದ ಪ್ರಕಾಶ್, ಮುದ್ದರಾಜು ಹಾಗೂ ರಮೇಶ್ ಗಾಯಾಳುಗಳು ಎಂದು ಗುರುತಿಸಲಾಗಿದೆ. ಕಳ್ಳನ್ನ ಹಿಡಿಯುವ ಬರದಲ್ಲಿ ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದರು.
ಈ ವೇಳೆ ಕಾರಿನ ಸ್ಟೇರಿಂಗ್ ಲಾಕ್ ಅದ ಹಿನ್ನಲೆ ಕಾರು ಪಲ್ಟಿ ಹೊಡೆದಿದೆ. ಪರಿಣಾಮ ಪೊಲೀಸರ ಕಣ್ಣು ತಲೆ, ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.
ಗಾಯಗೊಂಡ ಪೊಲೀಸರನ್ನು ಆಂಧ್ರದ ಧರ್ಮವರಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಂಧ್ರಪ್ರದೇಶದ ಧರ್ಮವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.