ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ರಾಮ ಮಂದಿರದಲ್ಲಿ ಗೋ ಧ್ವಜಾರೋಹಣದಲ್ಲಿ ಭಾಗಿಯಾಗ ಬೇಕಾಗಿದ್ದ ಬದರಿ ಶಂಕರಾಚಾರ್ಯ ಜ್ಯೋತಿಪೀಠಾಧೀಶ್ವರ ಅವಿಮುಕ್ತಶ್ವರಾನಂದ ಸರಸ್ವತಿ ಸ್ವಾಮೀಜಿ, ಅಲ್ಲಿ ಸಾಯಿ ಬಾಬಾ ಮೂರ್ತಿಯಿದ್ದ ಕಾರಣ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.
`ಹಿಂದೂ ದೇವಸ್ಥಾನಗಳಲ್ಲಿ ಸಾಯಿ ಬಾಬಾರಿಗೆ ಜಾಗವಿಲ್ಲ. ಕೇವಲ ಹಣಗಳಿಕೆಗಾಗಿ ಅರ್ಚಕರು ಹಾಗೂ ಟ್ರಸ್ಟಿಗಳು ಅವರ ಮೂರ್ತಿಯನ್ನು ದೇವಸ್ಥಾನದಲ್ಲಿರಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಸ್ವಾಮಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.
ಹಿಂದು ಧರ್ಮದ ಪರ ಸದಾ ದ್ವನಿ ಎತ್ತುವ ಬದರಿ ಶಂಕರಾಚಾರ್ಯ ಜ್ಯೋತಿಪೀಠಾಧೀಶ್ವರ ಅವಿಮುಕ್ತಶ್ವರಾನಂದ ಸ್ವಾಮೀಜಿ ಅವರು ಲೋಕಸಭೆ ಚುನಾವಣೆ ನೆಪದಲ್ಲಿ ಪೂರ್ಣಗೊಳ್ಳದಿದ್ದರು ಉದ್ಘಾಟನೆ ಮಾಡಿದ್ದಾರೆ ಎಂಬ ಕಾರಣ ಅಯೋಧ್ಯೆ ರಾಮ ಮಂದಿರಕ್ಕೆ ತೆರಳಲು ನಿರಾಕರಿಸಿದ್ದರು.