ಚಿಕ್ಕಬಳ್ಳಾಪುರ: ಮಟ ಮಟ ಮದ್ಯಾಹ್ನದ ವೇಳೆ ಸಿನಿಮಾ ಶೈಲಿಯಲ್ಲಿ, ನೋಡ ನೋಡುತ್ತಿದ್ದಂತೆ ದುರುಳರು ಕಾರಿನ ಮೇಲೆ ದಾಳಿ ನಡೆಸಿ ಕಲ್ಲು ದೊಣ್ಣೆಗಳಿಂದ ಕಾರಿನ ಗಾಜುಗಳನ್ನ ಪುಡಿ ಪುಡಿ ಮಾಡಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ಘಟನೆ (crime news) ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಕೆಜಿಎನ್ ಬಡಾವಣೆಯಲ್ಲಿ ನಡೆದಿದೆ.
ಬಡಾವಣೆಯ ಸೈಯದ್ ತೌಫಿಕ್ ಎನ್ನುವವರಿಗೆ ನಾಲ್ಕು ವರ್ಷಗಳ ಹಿಂದ ಬೆಂಗಳೂರಿನ ಪ್ರೇಜರ್ ಟೌನ್ ನ ಸೈಯಿದಾ ಸೈಮಾ ಎನ್ನುವವರನ್ನ ಕೊಟ್ಟ ಮದುವೆ ಮಾಡಲಾಗಿತ್ತು.ಆದರೆ ಗಂಡ ಆಕೆಗೆ ಮಕ್ಕಳಾಗಲಿಲ್ಲ ಅಂತ ಬೇರೆ ಮದುವೆ ಮಾಡಿಕೊಂಡಿದ್ದನಂತೆ.
ಇದನ್ನ ಪ್ರಶ್ನಿಸಿದಕ್ಕೆ ಹೆಂಡಿತಿಯ ಮೇಲೆ ಹಲ್ಲೆ ನಡೆಸಿ ಆಕೆಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನಂತೆ, ಇದ್ರಿಂದ ಮನನೊಂದ ಸೈಯಿದಾ ಸೈಮಾ ಚಿಂತಾಮಣಿ ನಗರ ಠಾಣೆಯಲ್ಲಿ ದೂರು ನೀಡಿದ್ದರು.
ನ್ಯಾಯ ಪಂಚಾಯಿತಿಗೆ ಅಂತ ತನ್ನ ಅಣ್ಣ ಮಹ್ಮದ್ ಮುಜೀದ್ ಹಾಗೂ ಸಹೋದರಿಯರನ್ನ ಕರೆದುಕೊಂಡು ನೆನ್ನೆ ಮದ್ಯಾಹ್ನ ಚಿಂತಾಮಣಿ ನಗರದ ಕೆ.ಜಿ.ಎನ್. ಬಡಾವಣೆಯ ತನ್ನ ಗಂಡನ ಮನೆಗೆ ಕೆ.ಎ.03-ಎನ್.ಜಿ. 9697 ಸಂಖ್ಯೆಯ ಸ್ಯಾಂಟ್ರೋ ಕಾರಿನಲ್ಲಿ ಬರುತ್ತಿದ್ದಂತೆ, ಪತಿ ಸೈಯತ್ ತೌಫಿಕ್, ತೌಸಿಪ್, ತಹೀದ್ ಸೇರಿದಂತೆ ಹಲವದು ದೊಣ್ಣೆ ಕಲ್ಲುಗಳಿಂದ ದಾಳಿ ನಡೆಸಿದ್ದು, ಕಾರಿಗೆ ಸೈಜು ಕಲ್ಲುಗಳಿಂದ ಹೊಡೆದು ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ.
ಸಿನಿಮೀಯ ರೀತಿಯಲ್ಲಿ ದಾಳಿ..!#LatestUpdates #latestnewstoday #Latest pic.twitter.com/gl7s6ns0zQ
— Harithalekhani (@harithalekhani) October 30, 2024
ಈ ವೇಳೆ ಮಹ್ಮದ್ ಮುಜೀದ್ ಮೇಲೆ ದಾಳಿಗೆ ಮುಂದಾಗಿದ್ದು, ಆತ ಓಡಿಹೋಗಿ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾನೆ. ಘಟನೆಯಲ್ಲಿ ಕಾರು ಜಖಂ ಆಗಿದ್ದು, ಆರೋಪಿಗಳ ವಿರುದ್ದ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.