ದೊಡ್ಡಬಳ್ಳಾಪುರ: ಹೃದಯ ಸಂಬಂಧಿಸಿದ ರೋಗಗಳ ನಂತರ ಅತಿ ಹೆಚ್ಚು ನರಳುತ್ತಿರುವ ಹಾಗೂ ಸಾವಿಗೀಡಾಗುತ್ತಿರುವ ರೋಗಗಳಲ್ಲಿ ಪಾರ್ಶ್ವವಾಯು ಇರುವುದು ಆತಂಕಕಾರಿ. ಪಾರ್ಶ್ವವಾಯು ಲಕ್ಷಣಗಳು ಗೋಚರಿಸಿದ ಕ್ಷಣ ಸಕಾಲದಲ್ಲಿ ಚಿಕಿತ್ಸೆ ನೀಡಿದರೆ ರೋಗವನ್ನು ಗುಣಪಡಿಸಬಹುದಾಗಿದೆ ಎಂದು ಜಿ ಮಾನಸಿಕ ಆರೋಗ್ಯಕಾರ್ಯಕ್ರಮಾಧಿಕಾರಿ ಡಾ.ಡಿ.ಪಿ.ಗಿರೀಶ್ ಕುಮಾರ್ ತಿಳಿಸಿದರು.
ನಗರದ ಶ್ರೀರಾಮ ನರ್ಸಿಂಗ್ ಕಾಲೇಜು ಮತ್ತು ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿಯಲ್ಲಿ ಆಯೋಜಿಸಿದ ವಿಶ್ವ ಪಾರ್ಶ್ವವಾಯು ದಿನಾಚರಣೆ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.
ಪಾರ್ಶ್ವವಾಯುನಲ್ಲಿ ಹಲವಾರು ವಿಧಾನಗಳಿವೆ. ಮುಖ್ಯವಾಗಿ ಕೈ ಕಾಲು ಬಲಹೀನವಾಗುವುದು, ಮಾತು ತೊದಲುವುದು, ಆಹಾರ ಸೇವನೆಗೆ ತೊಡಕು, ದೃಷ್ಟಿ ದೋಷ, ಬಾಯಿ ಸೊಟ್ಟಗಾಗುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.
ರಕ್ತದೊತ್ತಡ, ಮಧುಮೇಹ, ಅಕ ಕೊಬ್ಬಿನಂಶ, ಸ್ಥೂಲಕಾಯ, ಇವುಳು ನಿಯಂತ್ರಣದಲ್ಲಿಲ್ಲದೇ ಇರುವುದು, ಮುಖ್ಯವಾಗಿ ಅಧಿಕ ರಕ್ತದೊತ್ತಡ, ಪಾರ್ಶ್ವವಾಯುಗೆ ಪ್ರಮುಖ ಕಾರಣ. ಇದಲ್ಲದೇ ಧೂಮಪಾನ, ಮದ್ಯಪಾನದಂತಹ ಚಟಗಳು ಸಹ ಕಾರಣವಾಗಿವೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದು ಇವುಗಳನ್ನು ನಿಯಂತ್ರಿಸದಿದ್ದರೆ ಅದು ಪಾರ್ಶ್ವವಾಯುಗೆ ತಿರುಗುವ ಲಕ್ಷಣಗಳಿವೆ.
ಅನಿಯಮಿತ ಹಾಗೂ ದೇಹಕ್ಕೆ ಪೂರಕವಲ್ಲದ ಆಹಾರ ಸೇವನೆ, ಅತಿಯಾದ ಉಪ್ಪು ಸೇವನೆಗಳಿಂದ ದೂರ ಇರಬೇಕು. ಪುಡಿ ಉಪ್ಪಿಗಿಂತ ಕಲ್ಲು ಉಪ್ಪು ಬಳಕೆ ಉತ್ತಮ. ಪಾರ್ಶ್ವವಾಯು ನರಮಂಡಲದ ಮೇಲೆ ಪ್ರಬಾವ ಬೀರುವ ರೋಗವಾಗಿದ್ದು, ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಅತಿಯಾದ ಒತ್ತಡದ ಜೀವನ ಹಾಗೂ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಿಕೆ ಸಹ ಪಾರ್ಶ್ವವಾಯು ಲಕ್ಷಣಗಳಲ್ಲಿ ಒಂದಾಗಿದ್ದು, ಇದಕ್ಕೆ ತಜ್ಞರೊಂದಿಗೆ ಸೂಕ್ತ ಸಮಾಲೋಚನೆ ನಡೆಸಬೇಕಾಗುತ್ತದೆ ಎಂದರು.
ಕಾರ್‍ಯಕ್ರಮ ಉದ್ಘಾಟಿಸಿದ ಜಿ ಮಾನಸಿಕ ಆರೋಗ್ಯಕಾರ್ಯಕ್ರಮಾಧಿಕಾರಿ ಡಾ.ಬಿ.ಎನ್.ಶಾಂತಲಾ ಮಾತನಾಡಿ, ವಿಶ್ವ ಪಾರ್ಶ್ವವಾಯು ಸಂಸ್ಥೆ ಪ್ರತಿ ವರ್ಷ ಅ.29ರಂದು ಪಾರ್ಶ್ವವಾಯು ದಿನಾಚರಣೆ ಆಚರಿಸುತ್ತಿದ್ದು, ಪಾರ್ಶ್ವವಾಯು ರೋಗದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದ್ದು, ಆರೋಗ್ಯ ಇಲಾಖೆಯಿಂದ ಪಾರ್ಶ್ವವಾಯು ಹಾಗೂ ಮಾನಸಿಕ ಆರೋಗ್ಯ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಯೋಗ ಗುರು ರಾಮಕೃಷ್ಣ ಮಾತನಾಡಿ, ಯೋಗದಿಂದ ಹಲವಾರು ಕಾಯಿಲೆಗಳನ್ನು ಗುಣಪಡಿಸಬಹುದಾಗಿದ್ದು,ಪಾರ್ಶ್ವವಾಯು ಪೀಡಿತರು ಯೋಗ ಥೆರಫಿಯಿಂದ ಗುಣವಾಗಿರುವ ನಿದರ್ಶನಗಳಿವೆ ಎಂದು ಯೋಗದ ಮಹತ್ವ ಕುರಿತು ಮಾಹಿತಿ ನೀಡಿದರು.
ಶ್ರೀ ಸೂರ್ಯ ಎಜುಕೇಷನ್ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದೊತ್ತಡ ಹಾಗೂ ಮಧುಮೇಹ ನಿಯಂತ್ರಣ, ನಿಯಮಿತ ವ್ಯಾಯಮ, ಆರೋಗ್ಯಕರ ಆಹಾರ ಪದ್ದತಿಗಳಿಂದ ಪಾರ್ಶ್ವವಾಯು ಬರದಂತೆ ತಡೆಗಟ್ಟಬಹುದು. ಪಾರ್ಶ್ವವಾಯು ಪೀಡಿತರಿಗೆ ಕಾಳಜಿ ಹಾಗೂ ಸಕಾರಾತ್ಮಕ ಸ್ಪಂಧನೆ ದೊರೆತರೆ ಬಹುಬೇಗ ಗುಣಮುರಾಗುತ್ತಾರೆ ಎಂದರು.
ಕಾರ್‍ಯಕ್ರಮದಲ್ಲಿ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಬ್ರೈನ್ ಹೆಲ್ತ ಸಂಯೋಜಕರಾದ ಅನುಷಾ, ಮೋನಿಕಾ, ಧೃತಿ ಮೊದಲಾದವರು ಭಾಗವಹಿಸಿದ್ದರು.