ದೊಡ್ಡಬಳ್ಳಾಪುರ: ಬಂಗಾಳ ಕೊಲ್ಲಿಯಲ್ಲಿ ರೂಪು ತಳೆದ ‘ಫೆಂಗಲ್’ ಚಂಡಮಾರುತ (Cyclone fengal) ಶನಿವಾರ ಸಂಜೆ 5.30ರ ವೇಳೆ ಗಂಟೆಗೆ 90 ಕಿಮೀ ವೇಗದಲ್ಲಿ ಚಲಿಸುತ್ತಾ ಪುದುಚೇರಿಕಡಲ ಕಿನಾರೆ ತಲುಪಿದೆ.
ಶನಿವಾರ ರಾತ್ರಿ 9.30ರ ವೇಳೆ ಪುದುಚೇರಿಕಡಲತಡಿಗೆ ಅಪ್ಪಳಿಸಿದೆ ಎಂದು ದೆಹಲಿ ವಲಯದ ವಿಶೇಷ ಸಾಮರ್ಥ್ಯದ ಹವಾಮಾನ ಅಧ್ಯಯನ ಕೇಂದ್ರ ತಿಳಿಸಿದೆ.
ಶನಿವಾರ ಮಧ್ಯಾಹ್ನ ಪುದುಚೆರಿಯತ್ತ ಫೆಂಗಲ್ ಚಂಡಮಾರುತ ಗಂಟೆಗೆ 70-80 ಕಿಮೀ ವೇಗದಲ್ಲಿ ಚಲಿಸುತ್ತಾ ಬಂದಿತು. ಪುದುಚೇರಿಕಡಲ ಕಿನಾರೆ ಯನ್ನು ಮುಟ್ಟುವ ವೇಳೆಗೆ 90 ಕಿಮೀ ವೇಗ ಪಡೆದುಕೊಂಡಿತು. ಚಂಡಮಾರುತ ಪುದುಚೇರಿಕಡಲತೀರವನ್ನು ತಲುಪುವ ಸಮಯದ ಬಗ್ಗೆ ದೆಹಲಿ ವಿಶೇಷ ಕೇಂದ್ರದ ಹವಾಮಾನ ತಜ್ಞ ಡಾ.ಬಾಲಚಂದ್ರನ್ ಶನಿವಾರ ಮಧ್ಯಾಹ್ನವೇ ಮುನ್ಸೂಚನೆ ನೀಡಿದ್ದರು.
ಬೃಹದಾಕಾರದ ಚಕ್ರದಂತೆ ಆಕಾಶದಲ್ಲಿ ವೇಗವಾಗಿ ಚಲಿಸುತ್ತಿರುವ ಫೆಂಗಲ್ ಚಂಡಮಾರುತ, ಪುದುಚೆರಿ, ತಮಿಳು ನಾಡು, ಆಂಧ್ರಪ್ರದೇಶದಲ್ಲಿ ಶನಿವಾರ ದೊಡ್ಡ ಮಟ್ಟದಲ್ಲಿ ಬಿರುಗಾಳಿ-ಮಳೆಯ ಅವಾಂತರವನ್ನೇ ಮಾಡಿದೆ.
‘ಫೆಂಗಲ್’ ಆರ್ಭಟದ ಪರಿಣಾಮ ತಮಿಳುನಾಡು, ಆಂಧ್ರ, ಪುದುಚೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬಿರುಗಾಳಿ ಕಾರಣ ನೂರಾರು ಮರಗಳು ನೆಲಕ್ಕುರುಳಿವೆ.
ವಾಯುಭಾರ ಕುಸಿತ ದೊಡ್ಡಬಳ್ಳಾಪುರದ ಹಲವೆಡೆ ಮಳೆ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಇಂದು ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿರುವೆ ಬೆನ್ನಲ್ಲೇ ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಭಾನುವಾರ ಬೆಳ್ಳಿ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿದ್ದು, ಜನ ಜೀವನ ಅಸ್ತಿತ್ವಕ್ಕೆ ಕಾರಣವಾಗಿದೆ.
ಭಾನುವಾರದ ರಜೆ, ಮೋಡ ಕವಿದ ವಾತಾವರಣ, ಮಳೆ ಹಿನ್ನೆಲೆಯಲ್ಲಿ ಸಮಯ 11ಗಂಟೆ ಆದರೂ ಜನರು ಮನೆ ಬಿಟ್ಟು ಹೊರಬಾರದೆ ರಸ್ತೆಯಲ್ಲಿ ಜನಸಂಖ್ಯೆ ವಿರಳವಾಗಿದ್ದು, ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದರೆ, ಸ್ವೆಟರ್, ಟೋಪಿ, ಮಫ್ಲರ್ ಹೊದ್ದಿರುವ ಬಿಸಿಬಿಸಿ ಸ್ಪೈಸಿ ಆಹಾರ ಸೇವನೆಗೆ ಮೊರೆ ಹೋಗಿದ್ದಾರೆ.
ಹವಾಮಾನ ಇಲಾಖೆ ಮಾಹಿತಿ ಅನ್ವಯ ಬೆಂಗಳೂರು ಸೇರಿ ರಾಜ್ಯದ ಐದು ಜಿಲ್ಲೆಗಳಲ್ಲಿ ಶನಿವಾರದಿಂದ 4 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.
ಡಿ.2ರಂದು ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಸೇರಿ 10 ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಡಿ.3 ರಂದು 12 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.