ಹೈದರಾಬಾದ್: ಇಲ್ಲಿನ ಹಯಾತ್ ನಗರದಲ್ಲಿ 108 ambulance (ಆಂಬ್ಯುಲೆನ್ಸ್) ವಾಹನವನ್ನು ಕದ್ದು ವಿಜಯವಾಡ ಕಡೆಗೆ ಪರಾರಿಯಾಗುತ್ತಿದ್ದ ಕಳ್ಳನನ್ನು ಬೆನ್ನತ್ತಿದ ಪೊಲೀಸರು, ಸಿನಿಮಾ ಸ್ಟೈಲ್ ನಲ್ಲಿ ಆಂಬುಲೆನ್ಸ್ ಚೇಸ್ ಮಾಡಿ ಹಿಡಿದಿದ್ದಾರೆ.
ಹಯಾತ್ ನಗರದಿಂದ ಸೂರ್ಯಪೇಟ್ ವರೆಗೆ 108 ಆಂಬ್ಯುಲೆನ್ಸ್ ನೊಂದಿಗೆ ಕಳ್ಳ ಪರಾರಿಯಾಗಿದ್ದಾನೆ. ಈ ವೇಳೆ ತಡೆಯಲು ಮುಂದಾದ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ.
ಚಿತ್ಯಾಲದಲ್ಲಿ ಎಎಸ್‌ಐ ಜಾನ್‌ರೆಡ್ಡಿ ಅವರು ಬೆನ್ನತ್ತಿ ಹಿಡಿಯುವ ವೇಳೆಗೆ ಹಲ್ಲೆ ನಡೆಸಿದ್ದಾನೆ, ಘಟನೆಯಲ್ಲಿ ಎಎಸ್ಐ ಜಾನ್‌ರೆಡ್ಡಿ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಆಂಬ್ಯುಲೆನ್ಸ್ ಕಳವು ಮಾಡಿದಲ್ಲದೆ, ತಪ್ಪಿಸಿಕೊಳ್ಳಲು ಸೈರನ್‌ನೊಂದಿಗೆ ವೇಗವಾಗಿ ಓಡಿಸಿ ಯತ್ನಿಸಿದ್ದಾನೆ.
ಈ ವೇಳೆ ಕೇತೇಪಲ್ಲಿ(ಎಂ) ಕೊರ್ಲಪಹಾಡ್ ಟೋಲ್ ಗೇಟ್ ನಲ್ಲಿ ಗೇಟ್ ಡಿಕ್ಕಿ ಹೊಡೆದು ಕೂಡ ಪರಾರಿಯಾಗಿದ್ದಾನೆ. ಅಂತಿಮವಾಗಿ ಸೂರ್ಯಪೇಟೆಯ ಟೇಕುಮಟ್ಲಾದಲ್ಲಿ ಪೊಲೀಸರು ರಸ್ತೆಗೆ ಅಡ್ಡಲಾಗಿ ಲಾರಿಗಳನ್ನು ನಿಲ್ಲಿಸಿ ಕಳ್ಳನನ್ನು ಹಿಡಿದಿದ್ದಾರೆ.
హైదరాబాద్లో అంబులెన్స్ చోరీ.. సినిమా స్టైల్లో అంబులెన్స్ను చేజ్ చేసి పట్టుకున్న పోలీసులు
— Telugu Scribe (@TeluguScribe) December 7, 2024
హైదరాబాద్ – హయత్ నగర్లో 108 వాహనాన్ని చోరీ చేసి విజయవాడ వైపు పారిపోయిన దొంగ..
హయత్ నగర్ నుంచి సూర్యాపేట దాకా పోలీసులను ముప్పు తిప్పలు పెట్టిన దొంగ..
అంబులెన్స్ సైరన్తో అతి వేగంతో పరారైన… pic.twitter.com/tWHG6CGRx8
ಬಂಧಿತ ಆರೋಪಿ ಈ ಹಿಂದೆಯೂ ಹಲವು ಕಳ್ಳತನ ಮಾಡಿರುವುದು ಪೊಲೀಸರಿಗೆ ತಿಳಿದುಬಂದಿದೆ ಎಂದು ವರದಿಯಾಗಿದೆ.