ದೊಡ್ಡಬಳ್ಳಾಪುರ: ಅಪಘಾತಗಳ ಹಾಟ್ ಸ್ಪಾಟ್ ಎಂದೆ ಅಪಕೀರ್ತಿ ಪಡೆಯುತ್ತಿರುವ ಸಿದ್ದೇನಾಯಕನಹಳ್ಳಿ ಬಳಿ ಟ್ರಾಕ್ಟರ್ ಮೊಗಚಿ ಬಿದ್ದಿದೆ (Accident).
ನಗರದ ಹೊರವಲಯದಲ್ಲಿರುವ ಹಿಂದೂಪುರ- ಯಲಹಂಕ ನಡುವಣ ಸಿದ್ದೇನಾಯಕನಹಳ್ಳಿ ಸಮೀಪ ಟ್ರಾಕ್ಟರ್ ತಿರುವು ಪಡೆಯುವ ಸಂದರ್ಭದಲ್ಲಿ ಏಕಾಎಕಿ ಬಂದ ಕೆಎಸ್‌ಆರ್‌ಟಿಸಿ ಡಿಕ್ಕಿ ಹೊಡೆದು ಟ್ರಾಕ್ಟರ್ ಮೊಗಚಿ ಬಿದ್ದಿದೆ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡಮಟ್ಟದ ದುರಂತ ತಪ್ಪಿದ್ದು, ಟ್ರಾಕ್ಟರ್ ಚಾಲಕ ಮತ್ತೋರ್ವನಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಟ್ರಾಕ್ಟರ್ ನಡು ರಸ್ತೆಯಲ್ಲಿ ಮೊಗಚಿ ಬಿದ್ದಿರುವ ಕಾರಣ, ಈ ರಸ್ತೆಯಲ್ಲಿ ಸಂಚಾರ ಬಂದ್ ಆಗಿದ್ದು, ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಟ್ರಾಕ್ಟರ್ ತೆರವಿಗೆ ಶ್ರಮಿಸುತ್ತಿದ್ದಾರೆ.
ಇನ್ನೂ ಈ ರಸ್ತೆಯಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದ್ದರು.. ಪೊಲೀಸರು ಎಷ್ಟೇ ಸೂಚನೆ ನೀಡಿದರು, ಸಮಸ್ಯೆ ಬಗೆ ಹರಿಸಲು ಟೋಲ್ ಸಿಬ್ಬಂದಿಗಳು ಶಾಶ್ವತ ಕ್ರಮಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಟ್ರಾಕ್ಟರ್ ಮೊಗಚಿ ಬಿದ್ದು ಅದರಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗುತ್ತಿದೆ. ಅದೆ KSRTC ಬಸ್ ಮೊಗಚಿ ಬಿದ್ದಿದ್ದರೆ ಉಂಟಾಗಬಹುದಾಗಿದ್ದ ಪ್ರಮಾದವನ್ನು ಊಹಿಸಲು ಕೂಡ ಭಯವಾಗುತ್ತಿದೆ ಎಂದು ಸ್ಥಳದಲ್ಲಿದ್ದವರು ಆತಂಕ ವ್ಯಕ್ತಪಡಿಸಿದರು.