ಬೆಳಗಾವಿ, (Santosh lad): ವಿಧಾನಸಭೆಯ ಕಲಾಪದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಹಾಗೂ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಗಂಭೀರ ಚರ್ಚೆ ನಡೆಯಿತು.
ಚರ್ಚೆ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂಬಂತೆ ಉಲ್ಲೇಖಿಸಿದ್ದು ಇದರಿಂದ ಕೆರಳಿದ ಸಚಿವ ಸಂತೋಷ್ ಲಾಡ್ ವಾಗ್ದಾಳಿಗೆ, ಇಡೀ ಸದನ ಬೆರಗಾಗಿ ನೋಡಿತು.
ಯತ್ನಾಳ್ ಹೇಳಿಕೆಯನ್ನು ಕೂಡಲೇ ಕಡತದಿಂದ ತೆಗೆಯಬೇಕು ಎಂದು ಒತ್ತಾಯಿಸಿದ ಆಡಳಿತ ಪಕ್ಷದ ಸದನ ಸದಸ್ಯ ಸಂತೋಷ್ ಲಾಡ್, ಸಿಎಂ ಬಗ್ಗೆ ನಿಮ್ಮ ಹೇಳಿಕೆ ಸಲ್ಲದು, ಪಾಕಿಸ್ತಾನಕ್ಕೆ ಹೋಗಿ ಕೇಕ್ ತಿಂದು ಬಂದವರು ನೀವು ಮುಖ್ಯಮಂತ್ರಿನ ಹಿಂದೂ ವಿರೋಧಿ ಅಂತೀರಾ ಸಾಕ್ ಬಾಯಿ ಮುಚ್ಕೊಂಡ್ ಕೂತ್ಕೊಳ್ರೀ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಇದಕ್ಕೆ ದನಿ ಗೂಡಿಸಿದ ಇತರೆ ಸದಸ್ಯರಾದ ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ನರೇಂದ್ರ ಸ್ವಾಮಿ, ಶಿವಲಿಂಗೇಗೌಡ ಯತ್ನಾಳ್ ವಿರುದ್ಧ ಮುಗಿಬಿದ್ದರು.
ಸದನ ಗದ್ದಲದಿಂದ ಕೂಡಿದಾಗ ಸ್ಪೀಕರ್ ಮಧ್ಯೆ ಪ್ರವೇಶಿ ಕಡತ ಪರಿಶೀಲಿಸುವುದಾಗಿ ಭರವಸೆ ನೀಡಿ, ಶಾಂತರೀತಿಯಲ್ಲಿ ಕಲಾಪ ಸಾಗುವಂತೆ ಮನವಿ ಮಾಡಿದರು.
ಯತ್ನಾಳ್ ತಮ್ಮ ಚರ್ಚೆಯನ್ನು ಮುಂದುವರಿಸಿದರು.