ಹೈದರಾಬಾದ್: Pushpa 2 ಸಿನಿಮಾ ಖ್ಯಾತ ನಟ ಅಲ್ಲು ಅರ್ಜುನ್ ಗೆ 14 ದಿನಗಳ ಕಾಲ ನ್ಯಾಯಬಂಧನ ವಿಧಿಸಿ ನಾಂಪಲ್ಲಿ ಕೋರ್ಟ್ ಆದೇಶ ಹೊರಡಿಸಿದ್ದ ಬೆನ್ನಲ್ಲೇ, ಇದೀಗ ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಡಿಸೆಂಬರ್ 4 ರಂದು Pushpa 2 ಸಿನಿಮಾ ಬಿಡುಗಡೆ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ನಟ ಅಲ್ಲು ಅರ್ಜುನ್ ಅವರು ಬಂಧಿಸಲಾಗಿತ್ತು.
ಬಳಿಕ ಪೊಲೀಸರು ಅವರನ್ನು ನಾಪಲ್ಲಿ ಕೋರ್ಟಿಗೆ ಹಾಜರುಪಡಿಸಿದ್ದರು ಈ ವೇಳೆ 14 ದಿನ ನ್ಯಾಯಾಂಗ ಬಂದನ ವಿಧಿಸಿ ನಾಮಪಲ್ಲಿ ಕೋರ್ಟ್ ಆದೇಶ ನೀಡಿತ್ತು.
ಇದರ ಬೆನ್ನಲ್ಲೇ ಇದೀಗ ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್ ಅವರಿಗೆ ಬಿಗ್ ರಿಲೀಫ್ ನೀಡಿದ್ದು, ಅಲ್ಲು ಅರ್ಜುನ್‌ಗೆ ಹೈಕೋರ್ಟ್ 4 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 50 ಸಾವಿರ ವೈಯಕ್ತಿಕ ಬಾಂಡ್ ಮೇಲೆ ಚಂಚಲಗುಡ ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದು ವರದಿಯಾಗಿದೆ.