ಬೆಂಗಳೂರು: ರಾಜ್ಯಮಟ್ಟದ ಕಬಡ್ಡಿ ಆಟಗಾರನೊಬ್ಬ ಪಂದ್ಯದ ನಂತರ ಹೃದಯಾಘಾತದಿಂದ ( Heart attack) ಹಠಾತ್ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ಉಡುಪಿಯ ಮುಟ್ಟುಪಾಡಿ, ನಡುಮನೆ ನಿವಾಸಿ 26 ವರ್ಷದ ಪ್ರೀತಂ ಶೆಟ್ಟಿ ಕಬಡ್ಡಿ ಆಡುವಾಗ ಮೃತಪಟ್ಟಿರುವ ದುರ್ದೈವಿ.
ಮಂಡ್ಯ ಜಿಲ್ಲೆಯ ನಾಗಮಂಗಲದ ಸುಖಧರೆ ಗ್ರಾಮದಲ್ಲಿ ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಬಡ್ಡಿ ಸ್ಪರ್ಧೆಯ ವೇಳೆ ಯುವಕನಿಗೆ ಹೃದಯಾಘಾತವಾಗಿದೆ.
ನಿನ್ನೆ (ಶುಕ್ರವಾರ) ರಾತ್ರಿ ಕಬಡ್ಡಿ ಆಟ ಕಬ್ಬಡಿ ಆಡಿದ ನಂತರ ಎದೆ ನೋವು ಕಾಣಿಸಿಕೊಂಡಿದ್ದು ಕುಸಿದು ಮೃತಪಟ್ಟಿದ್ದಾನೆ.
ಪ್ರತಿಭಾನ್ವಿತ ಯುವಕ ಪ್ರೀತಂ ಶಿಕ್ಷಣದ ಜತೆಗೆ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದ ಹಂತಹಂತವಾಗಿ ಶ್ರಮವಹಿಸಿ ಕಬಡ್ಡಿ ಆಟಗಾರನಾಗಿ ಖ್ಯಾತಿ ಪಡೆದಿದ್ದ
ಪ್ರೀತಂ ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾನೆ. ಆತನ ಮೃತದೇಹವನ್ನು ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ.