ದೊಡ್ಡಬಳ್ಳಾಪುರ JDS: ತಾಲೂಕಿನ ರಾಜಕೀಯ ಮುತ್ಸದ್ದಿ, ಹಿರಿಯ ನಾಯಕರು, ಸಹಕಾರಿ ಕ್ಷೇತ್ರದ ಧುರೀಣ, ಸದಾ ಜನಾನುರಾಗಿಯಾಗಿದ್ದ ಹೆಚ್.ಅಪ್ಪಯ್ಯಣ್ಣ ಅವರ ಅಗಲಿಕೆ ನೋವನ್ನು ತಂದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಎಸ್.ಅಶ್ವಥ್ ನಾರಾಯಣಕುಮಾರ್ ಹೇಳಿದ್ದಾರೆ.
ಅಪ್ಪಯ್ಯಣ್ಣ ಅವರ ಅಗಲಿಕೆ ಕುರಿತು ಸಂತಾಪ ಸೂಚಿಸಿ ಮಾತನಾಡಿದ ಅವರು, ಗ್ರಾಮೀಣ ಸೊಗಡಿನ ರಾಜಕಾರಣಿಯಾಗಿ ಅಪ್ಪಯ್ಯಣ್ಣ ಅವರು ತಾಲೂಕಿನಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ಛಾಪನ್ನು ಮೋಡಿಸಿ, ಅನೇಕ ಅಭಿಮಾನಿಗಳು ಹೊಂದಿದ್ದರು.
ಅವರ ಅಗಲಿಕೆ ನಮಗೆಲ್ಲರಿಗೆ ತುಂಬ ದುಃಖವನ್ನು ಉಂಟುಮಾಡಿದೆ. ಅವರ ಅಗಲಿಕೆಯಿಂದ ಕುಟುಂಬಕ್ಕೆ ಆಗಿರುವ ನೋವನ್ನು ತಡೆಯುವ ಶಕ್ತಿಯನ್ನು ನೀಡಿ, ಅಪ್ಪಯ್ಯಣ್ಣ ಅವರ ಆತ್ಮಕ್ಕೆ ಮೋಕ್ಷವನ್ನು ನೀಡಲೆಂದು ಅಶ್ವಥ್ ನಾರಾಯಣ ಕುಮಾರ್ ಪ್ರಾರ್ಥಿಸಿದ್ದಾರೆ.