ಹೈದರಾಬಾದ್: Pushpa 2 ಸಿನಿಮಾ ಬಿಡುಗಡೆ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ನಟ ಅಲ್ಲು ಅರ್ಜುನ್ ಅವರನ್ನು ಹೈಕೋರ್ಟ್ ನೀಡಿದ ಜಾಮೀನಿನ ಮೇಲೆ ಇಂದು ಬಿಡುಗಡೆ ಮಾಡಲಾಯಿತು.
ಚಂಚಲಗೂಡ ಕಾರಾಗೃಹದಿಂದ ಬಿಡುಗಡೆಯಾದ ಅಲ್ಲು ಅರ್ಜುನ್ ಮಾತನಾಡಿ, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ನಾನು ಚೆನ್ನಾಗಿದ್ದೇನೆ. ನಾನು ಕಾನೂನನ್ನು ಗೌರವಿಸುತ್ತೇನೆ, ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.
ಇದೊಂದು ಆಕಸ್ಮಿಕ ಘಟನೆಯಾಗಿದ್ದು, ಮೃತ ರೇವತಿ ಅವರ ಕುಟುಂಬಕ್ಕೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ. ಘಟನೆ ದುರದೃಷ್ಟಕರ, ಇದೊಂದು ಆಕಸ್ಮಿಕ ಘಟನೆ. ನಾ ಒಳಗಡೆ ಸಿನಿಮಾ ನೋಡುವಾಗ ಹೊರಗಡೆ ಈ ದುರ್ಘಟನೆ ಸಂಭವಿಸಿದೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.
జైలు నుండి విడుదలైన అనంతరం మీడియాతో మాట్లాడిన అల్లు అర్జున్
— Telugu Scribe (@TeluguScribe) December 14, 2024
అభిమానులు ఆందోళన చెందాల్సిన పనిలేదు నేను బానే ఉన్నాను
నేను చట్టాన్ని గౌరవిస్తాను,
నాకు మద్దతు తెలిపిన అందరికి ధన్యవాదాలు
రేవతి గారి కుటుంబానికి నా సానుభూతి
జరిగిన ఘటన దురదృష్టకరం ఇది అనుకోకుండా జరిగిన ఘటన
కేసు… pic.twitter.com/6dmBrFgbSE
ಪ್ರಕರಣ ನ್ಯಾಯಾಲಯದ ವ್ಯಾಪ್ತಿಯಲ್ಲಿದೆ, ಹಾಗಾಗಿ ನ್ಯಾಯಾಲಯವನ್ನು ಗೌರವಿಸಿ ಈಗ ಏನೂ ಹೇಳಲಾರೆ ಎಂದು ಅಲ್ಲು ಅರ್ಜುನ್ ತಿಳಿಸಿದ್ದಾರೆ.
ನಟ ಅಲ್ಲು ಅರ್ಜುನ್ ಅವರನ್ನು ಭೇಟಿ ಆಗಲು ಅನೇಕ ಸೆಲಿಬ್ರಿಟಿಗಳು ಆಗಮಿಸುತ್ತಿದ್ದಾರೆ. ಅದೇ ರೀತಿ ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನಲ್ಲಿರುವ ನಟ ಅಲ್ಲು ಅರ್ಜುನ್ ಅವರ ನಿವಾಸಕ್ಕೆ ವಿಜಯ್ ದೇವರಕೊಂಡ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಈ ವೇಳೆ ವಿಜಯ್ ಅವರ ಕಿರಿಯ ಸಹೋದರ ಆನಂದ್ ದೇವರಕೊಂಡ ಇದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ.