ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ದ್ವಿತೀಯ ಜನವರಿ, 01, 2025 ಬುಧವಾರ ಮನೆಯಲ್ಲಿ ವಿಷ್ಣು ಸಹಸ್ರನಾಮವನ್ನು ಶ್ರದ್ಧಾ ಭಕ್ತಿಯಿಂದ ಕೇಳಿದರೆ ಬಹಳ ಅನುಕೂಲವಾಗುತ್ತದೆ. ಎಲ್ಲಾ ಕಾರ್ಯಗಳಲ್ಲೂ ಜಯ ಸಂಭವಿಸುತ್ತದೆ. Astrology
ಮೇಷ ರಾಶಿ: ಅತ್ಯಂತ ಶ್ರೇಷ್ಠವಾದ ಕಾರ್ಯಗಳು ಮನೆಯಲ್ಲಿ ನಡೆಯುತ್ತವೆ. ಸಂತೋಷ ಜೊತೆಗೆ ತೃಪ್ತಿ ಆರಾಮದಾಯಕವಾದ ಜೀವನ, ಸ್ವಲ್ಪ ಮಾನಸಿಕ ಕಿರಿಕಿರಿಯೊಂದಿಗೆ ಭಯ. ಧರ್ಮದಿಂದ ಅರ್ಜಿಸಿದ ಧನದಿಂದ ನೆಮ್ಮದಿ. (ಪರಿಹಾರಕ್ಕಾಗಿ ದತ್ತಾತ್ರೇಯರ ಅಥವಾ ಗುರುಗಳ ದೇವಸ್ಥಾನಕ್ಕೆ ಹೋಗಿ ಮೂರು ಪ್ರದಕ್ಷಣೆಯನ್ನು ಮಾಡಿ ನಮಸ್ಕಾರ ಮಾಡಿ ಬನ್ನಿ)
ವೃಷಭ ರಾಶಿ: ಶುಭ ದಿವಸ, ಆರೋಗ್ಯವು ಸಹ ನಿಶ್ಚಿತವಾದ ಅನುಕೂಲವನ್ನು ಮಾಡುತ್ತದೆ. ಸಣ್ಣಪುಟ್ಟ ವಿಷಯಗಳಿಗೆ ಉತ್ಸಾಹವನ್ನು ಕಳೆದುಕೊಳ್ಳಬೇಡಿ, ಸೋದರ ಸೋದರಿಯರ ಜೊತೆ ಸಂಬಂಧ ಸ್ವಲ್ಪ ಕಿರಿಕಿರಿ ಇರುತ್ತದೆ. (ಪರಿಹಾರಕ್ಕಾಗಿ ದುರ್ಗಾದೇವಿ ದೇವಸ್ಥಾನದಲ್ಲಿ ತುಪ್ಪದ ದೀಪಗಳನ್ನು ಹಚ್ಚಿ)
ಮಿಥುನ ರಾಶಿ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅನಾರೋಗ್ಯ ಸಮಸ್ಯೆ, ಧನಾರ್ಜನೆಗೆ ಸ್ವಲ್ಪ ತಡೆ, ಆರೋಗ್ಯದಲ್ಲಿ ಅನಾನುಕೂಲ, ಬುದ್ಧಿವಂತಿಕೆ ಸ್ವಲ್ಪ ಕಮ್ಮಿ, ವಾಹನದಿಂದ ಸಣ್ಣಪುಟ್ಟ ಗಾಯ ಸಾಧ್ಯತೆ. (ಪರಿಹಾರಕ್ಕಾಗಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಿ ಪೂಜೆ ಮಾಡಿ)
ಕಟಕ ರಾಶಿ: ಕೋಪಿಸಿಕೊಳ್ಳಬೇಡಿ, ಮನಸ್ತಾಪ ಬೇಡ. ವಿವೇಕ ಸಹಿತವಾಗಿ ಮಾತನಾಡಿ ಕಿರಿಚಾಟ ಕೂಗಾಟದಿಂದ ಆರೋಗ್ಯ ಹಾನಿ. ಶೀತ ಭಯ, ಕಣ್ಣಿನ ಬಗ್ಗೆ ಎಚ್ಚರ. (ಪರಿಹಾರಕ್ಕಾಗಿ ಮೃತ್ಯುಂಜಯ ಮೂಲ ಮಂತ್ರವನ್ನು ಜಪ ಮಾಡಿ)
ಸಿಂಹ ರಾಶಿ: ಸಾಧನೆಗೆ ತೀವ್ರವಾದ ಚಟುವಟಿಕೆ ಅಗತ್ಯ. ಧನಾಗಮವಾಗಬೇಕಾದರೆ ಬುದ್ಧಿಶಕ್ತಿಯ ಜೊತೆಗೆ ಸ್ವಾರ್ಥವನ್ನು ಬಿಟ್ಟು ಕೆಲಸ ಮಾಡಬೇಕು. ಎಚ್ಚರಿಕೆಯಿಂದ ಶ್ರಮವಹಿಸಿ ಕಾರ್ಯವನ್ನು ತೂಗಿಸಿ. (ಪರಿಹಾರಕ್ಕಾಗಿ ಅಮ್ಮನವರ ದೇವಸ್ಥಾನದಲ್ಲಿ ಅಮ್ಮನವರಿಗೆ ಕೆಂಪು ಹೂವಿನಿಂದ ಪೂಜೆ ಮಾಡಿ)
ಕನ್ಯಾ ರಾಶಿ: ಕೆಲವು ನಡುವಳಿಕೆಗಳಿಂದ ಜನರು ಶತ್ರುಗಳಾಗುತ್ತಾರೆ ಎಚ್ಚರಿಕೆಯಿಂದ ವರ್ತಿಸಿ. ಧನಕ್ಕಾಗಿ ಸ್ವಲ್ಪ ಕಿತ್ತಾಟ, ಕಿರಿಕಿರಿ ಇರುತ್ತದೆ, ಒತ್ತಡದಿಂದ ಆಯಾಸ, ದೇಹದ ಬಗ್ಗೆ ಆಲಸ್ಯ. (ಪರಿಹಾರಕ್ಕಾಗಿ ಗಣಪತಿ ಸ್ತೋತ್ರವನ್ನು ಹೇಳಿಕೊಳ್ಳಿ )
ತುಲಾ ರಾಶಿ: ಜೀವನದಿದ್ದಕ್ಕೂ ಸ್ವಲ್ಪ ಕಷ್ಟ ನಷ್ಟಗಳು ಇರುತ್ತವೆ, ಹಾಗೆಂದು ದೃಟಿಗೆಡಬಾರದು. ಎಚ್ಚರಿಕೆಯಿಂದ ಕಾರ್ಯಗಳನ್ನು ಮಾಡಬೇಕು, ಸ್ವಲ್ಪ ಅನಾರೋಗ್ಯದ ಸಂಬಂಧ ಸಮಸ್ಯೆ ಇದ್ದರೂ ಆಭಿಚಾರ ಪ್ರಯೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು. (ಪರಿಹಾರಕ್ಕಾಗಿ ಕಾಳಿಯ ದೇವಸ್ಥಾನದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಿ)
ವೃಶ್ಚಿಕ ರಾಶಿ: ವಿಪರೀತ ಚಂಚಲವಾದ ಮನಸ್ಸು, ವಿದ್ಯಾಭ್ಯಾಸಕ್ಕೆ ಸ್ವಲ್ಪ ದೃಢವಾಗಬೇಕು. ಧನಾಗಮಕ್ಕೆ ಸ್ವಲ್ಪ ಕಾರ್ಯಗಳು ಮತ್ತು ಮಾಡಬೇಕು ಎಲ್ಲ ಕಾರ್ಯದಲ್ಲೂ ಶ್ರದ್ಧೆ ಅಗತ್ಯ. (ಪರಿಹಾರಕ್ಕಾಗಿ ಆದಿತ್ಯ ಹೃದಯದ ಪಾರಾಯಣ ಮಾಡಿ)
ಧನಸ್ಸು ರಾಶಿ: ಶೀತದ ಪ್ರಕೃತಿ ಜೊತೆಗೆ ಮುನ್ನುಗ್ಗುವ ಧೈರ್ಯ ಸ್ಥೈರ್ಯ, ಜಾಗರೂಕತೆ ನಿಮ್ಮದಾಗಿರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಎಚ್ಚರ, ವಿದ್ಯೆ, ಧನ ಕನಕ ಅನುಕೂಲವಿಲ್ಲ. (ಪರಿಹಾರಕ್ಕಾಗಿ ಗುರುಗಳ ನಾಮ ಸ್ಮರಣೆ ಮಾಡಿ)
ಮಕರ ರಾಶಿ: ವಿಪರೀತ ಕೋಪ ಆರೋಗ್ಯಕ್ಕೆ ಹಾನಿಯನ್ನು ಮಾಡುತ್ತದೆ. ಅತ್ಯಂತ ಕಷ್ಟಕರವಾದ ಪರಿಸ್ಥಿತಿ ಎನಿಸಿದರು ಸುಲಭವಾಗಿ ಮೇಲೆ ಬರಬಹುದು, ಏನು ಸಮಸ್ಯೆ ಇಲ್ಲ ಎಂಬ ಭಾವನೆ ಇರಲಿ. (ಪರಿಹಾರಕ್ಕಾಗಿ ಶನೇಶ್ಚರ ದೇವಸ್ಥಾನದಲ್ಲಿ ಎಳ್ಳೆಣ್ಣೆ ಹನ್ನೊಂದು ಬತ್ತಿ ಯ ದೀಪವನ್ನು ಉಳಿಸಿ)
ಕುಂಭ ರಾಶಿ: ಯಾವಾಗಲೂ ಸಹ ಚಿಂತೆ ಒಳ್ಳೆಯದಲ್ಲ, ಕೋಪ ಮಾಡಿಕೊಂಡಷ್ಟು ಆರೋಗ್ಯ ಕೆಡುತ್ತದೆ. ಧನ ಆಗಮ ಸ್ವಲ್ಪ ತೊಂದರೆಯಾಗಿದೆ. ಆದರೆ ವಿಶ್ವಾಸಕ್ಕೇನು ಕೊರತೆ ಇಲ್ಲ, ಜೀವನ ಸುಭದ್ರವಾಗಿದೆ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ದ್ವಾದಶ ನಾಮ ಸ್ತೋತ್ರದ ಪಾರಾಯಣ ಮಾಡಿ)
ಮೀನ ರಾಶಿ: ನಾನಾ ಮಾರ್ಗಗಳಿಂದ ಮನಸ್ಸಿಗೆ ಕಿರಿಕಿರಿ ಬಂದು ಮಿತ್ರರಲ್ಲಿ ಒಡಕು, ಸೋದರ ಸೋದರಿಯ ಸಂಬಂಧ ಏಳಿಗೆ ಅತ್ಯಂತ ಆಹಾರದ ಕರವಾದ ದಿನ, ಏಕೋ ಕೋಪ ಕೋಪ. (ಪರಿಹಾರಕ್ಕಾಗಿ ನವ ನಾಗ ಸ್ತೋತ್ರದ ಪಾರಾಯಣ ಮಾಡಿ)
ರಾಹುಕಾಲ: 12-13PM ರಿಂದ 1-39PM
ಗುಳಿಕಕಾಲ: 10-30AM ರಿಂದ 12-00PM
ಯಮಗಂಡಕಾಲ: 7-30AMರಿಂದ 9-00AM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್‌ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572