ಬೆಂಗಳೂರು; ರಾಜ್ಯ BJPಯಲ್ಲಿನ ಒಡಕನ್ನು ಮುಚ್ಚಿಡಲು ಹಾಗೂ ರಾಜ್ಯ ಸರ್ಕಾರದ ಸಿಎಂ ಸ್ಥಾನದ ಕುರಿತು ಭಿನ್ನಾಭಿಪ್ರಾಯ ಸೃಷ್ಟಿಸಲು ಪ್ರಶ್ನೆ ಮಾಡುತ್ತಿದ್ದಾರೆಂದು ಕೆಲ ನ್ಯೂಸ್ ಚಾನಲ್ ಗುಂಪಿನ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿಯಲ್ಲಿನ ವೈಫಲ್ಯ ಮುಚ್ಚಿ ಹಾಕಲು, ಕೆಲ ನ್ಯೂಸ್ ಚಾನಲ್ ಗುಂಪಿನಿಂದ ಈ ವಿಚಾರವನ್ನು ಸೃಷ್ಟಿಸಲಾಗುತ್ತಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ 58 ಸಾವಿರ ಕೋಟಿ ರೂಗಳ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ಇವುಗಳ ಲಾಭ ಜನತೆಗೆ ಸಿಗುತ್ತಿದೆ. ಇವು ದೇಶದ ದೊಡ್ಡ ಯೋಜನೆಗಳೆನಿಸಿವೆ.
Bengaluru, Karnataka: On CM post change, Congress MP Randeep Singh Surjewala says, "A selected group of news channels, instead of questioning the dismembered BJP, are asking questions to a united party that is firmly executing direct benefits for every Kannadiga…" pic.twitter.com/maOsCgpO04
— IANS (@ians_india) January 13, 2025
ಕರ್ನಾಟಕ ಬಿಜೆಪಿಯಲ್ಲಿ ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಣ ಇದೆ. ಇನ್ನೊಂದೆಡೆ ಬಸನಗೌಡ ಪಾಟೀಲ್ ಯತ್ನಾಳರದ್ದು ಬಣ ಇದೆ. ಮತ್ತೊಂದೆಡೆ ಆರ್ ಅಶೋಕ್ ಅವರ ಬಣ ಇದೆ. ಮಗದೊಂದೆಡೆ ಅಶ್ವತ್ಥ ನಾರಾಯಣ ಅವರ ಬಣ ಇದೆ.
ವಿಜಯೇಂದ್ರ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸುತ್ತಿದ್ದಾರೆ. ಯತ್ನಾಳರಿಗೆ ರಮೇಶ್ ಜಾರಕಿಹೊಳಿ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಯ ಆಂತರಿಕ ಕಿತ್ತಾಟಕ್ಕೆ ಜೆಡಿಎಸ್ ಕೂಡ ಬೆಂಬಲ ನೀಡುತ್ತಿದೆ. ಈ ಎಲ್ಲಾ ಹತಾಶೆಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ವಿರುದ್ಧ ಬಿಜೆಪಿ ಇಲ್ಲದ ಆರೋಪ ಮಾಡುತ್ತಿದೆ ಎಂದು ರಣದೀಪ್ ಸುರ್ಜೆವಾಲ ಹೇಳಿದ್ದಾರೆ.
ಗ್ಯಾರಂಟಿ ಯೋಜನೆ ಯಶಸ್ಸಿನಿಂದ ಬಿಜೆಪಿ ಹತಾಶೆಗೊಂಡಿದೆ. ಇದನ್ನು ಮರೆಮಾಚಲು ಕಾಂಗ್ರೆಸ್ನಲ್ಲಿ ಇಲ್ಲದ ಒಡಕನ್ನು ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ.
ಕೆಲ ಸುದ್ದಿ ವಾಹಿನಿಗಳ ಗುಂಪು, ಒಡೆದಿರುವ ಬಿಜೆಪಿಯನ್ನು ಪ್ರಶ್ನಿಸುವ ಬದಲು, ಪ್ರತಿ ಕನ್ನಡಿಗನಿಗೆ ನೇರ ಲಾಭವನ್ನು ದೃಢವಾಗಿ ಜಾರಿಗೊಳಿಸುತ್ತಿರುವ ಒಗ್ಗಟ್ಟಿನ ಪಕ್ಷಕ್ಕೆ (ಕಾಂಗ್ರೆಸ್) ಪ್ರಶ್ನೆಗಳನ್ನು ಕೇಳುತ್ತಿವೆ ಎಂದು ರಣದೀಪ್ ಸುರ್ಜೆವಾಲ ಕುಟುಕಿದರು.