ತುಮಕೂರು: ಮರಳೂರಿನ ಮಾದರಿ ಪಿಎಂ ಶ್ರೀ ಶಾಲೆಯಲ್ಲಿ ಸಂಕ್ರಾಂತಿ ಸುಗ್ಗಿ ಹಬ್ಬವನ್ನು (Sankranti 2025) ಶಾಲಾ ಮಕ್ಕಳು, ಶಿಕ್ಷಕರು ಸಂಭ್ರಮದಿಂದ ಆಚರಿಸಿದರು.
ಶಾಲೆಯ ಆವರಣದಲ್ಲಿ ಕಬ್ಬಿನ ಜಣವೆಗಳನ್ಮು ನಿಲ್ಲಿಸಿ, ರಂಗೋಲಿ ಬಿಡಿಸಿ, ಗೋವಿಗೆ ಪೂಜೆ ಸಲ್ಲಿಸಿದ ವಿದ್ಯಾರ್ಥಿಗಳು ಶಾಲಾ ಶಿಕ್ಷಕರೊಂದಿಗೆ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಸರ್ಕಾರಿ ಶಾಲೆಯಲ್ಲೂ ಸಹ ವಿನೂತನವಾಗಿ ಸಡಗರದಿಂದ ಸರಳವಾಗಿ ಹಬ್ಬಗಳನ್ನು ಆಚರಿಸಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಉದಾಹರಣೆಯಾಯಿತು.

ಅಲ್ಲದೆ ವಿದ್ಯಾರ್ಥಿಗಳಲ್ಲಿ ಪಠ್ಯ ಮತ್ತು ಸಹಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಹಾಗೂ ಭಾರತೀಯ ಸಂಸ್ಕೃತಿಯನ್ನು ಕಾಣುವಲ್ಲಿ ಈ ರೀತಿ ಆಚರಣೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ ಪ್ರವೀಣ್ ಕುಮಾರ್ ಎಂಬಿ, ಸಹಶಿಕ್ಷಕರಾದ
ವನಿತಾ ರಾಣಿ, ಆಶಾಲತಾ, ಚಂದ್ರಶೇಖರ್,
ಪಟೇಲ್ ಚನ್ನೇಗೌಡ, ರಮಾದೇವಿ, ಗಿರಿಜಮ್ಮ, ವಸಂತಕುಮಾರಿ, ಕಲ್ಪನಾ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಭಾಗಿಯಾಗಿದ್ದರು.
