ಹೈದರಾಬಾದ್; ATMಗೆ ಹಣ ತುಂಬಲು ತೆರಳುತ್ತಿದ್ದ ಇಬ್ಬರು ಸಿಬ್ಬಂದಿಗಳ ಕೊಂದು, ಹಣ ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ.
ನಿನ್ನೆ ರಾಜ್ಯವನ್ನೆ ಬೆಚ್ಚಿ ಬೀಳಿಸಿದ್ದ ಘಟನೆ ಬೆನ್ನಲ್ಲೇ 9 ತಂಡಗಳನ್ನು ರಚಿಸಿ, ಹಂತಕ ದರೋಡೆಕೋರರ ಬೆನ್ನತ್ತಿದ ಪೊಲೀಸರು ಹೈದರಾಬಾದ್ ವರೆಗೂ ಚೇಸ್ ಮಾಡಿದ್ದು, ಈ ವೇಳೆ ಪೊಲೀಸರ ಮೇಲೆ ಫೈರ್ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.
ಹಣ ದೋಚಿದ ಬಳಿಕ ಹೈದರಾಬಾದ್ ನ ಅಫ್ಜಲ್ ಗಂಜ್ ಪ್ರದೇಶದಲ್ಲಿನ ಟ್ರಾವೆಲ್ಸ್ ಏಜೆನ್ಸಿ ಗೆ ತೆರಳಿ ಟಿಕೆಟ್ ಬುಕ್ ಮಾಡುವ ವೇಳೆ, ಪೊಲೀಸರು ಬಂಧಿಸಲು ಮುಂದಾಗಿದ್ದಾರೆ..
A gang from Bidar, after stealing ₹1 crore from an ATM in their hometown, escaped to #Hyderabad. When Bidar police pursued them to Afzalgunj in Hyderabad to arrest them, the gang resorted to shooting at the officers in an attempt to avoid capture.#CrimeNews pic.twitter.com/gTM9zAnIhA
— Nawab Abrar (@nawababrar131) January 16, 2025
ಈ ಸಂದರ್ಭದಲ್ಲಿ ಪೊಲೀಸರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು. ಅದು ಮಿಸ್ಸಾಗಿ ಟ್ರಾವಲ್ಸ್ ಏಜೆನ್ಸಿಯ ಸಿಬ್ಬಂದಿಗೆ ತಾಗಿ, ಆತನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಪಿ ಬಾಲಸ್ವಾಮಿ, ಹೈದರಾಬಾದ್ ನಿಂದ ರಾಯ್‌ಪುರಕ್ಕೆ ಟಿಕೆಟ್ ಕಾಯ್ದಿರಿಸಲು ಇಬ್ಬರು ಅಪರಿಚಿತ ವ್ಯಕ್ತಿಗಳು ರೋಷನ್ ಟ್ರಾವೆಲ್ಸ್‌ಗೆ ಭೇಟಿ ನೀಡಿದ್ದರು.
ಸಾಮಾನು ಸರಂಜಾಮು ತಪಾಸಣೆಯ ಸಮಯದಲ್ಲಿ, ಕರೆನ್ಸಿ ಪತ್ತೆಯಾಗಿದೆ, ಇದನ್ನು ನೋಡಿದ ಪೊಲೀಸರು ಬಂಧಿಸಲು ಮುಂದಾದ ವೇಳೆ, ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದಿದ್ದಾರೆ.
Afzal Gunj Firing incident Update : Two unknown individuals visited Roshan Travels to book tickets to Raipur. During baggage inspection, currency was discovered, leading one of them to panic, fire a shot, and injure someone. #Hyderabad police have established four teams to… pic.twitter.com/cj5fl6l3qS
— Nawab Abrar (@nawababrar131) January 16, 2025
ನಿನ್ನೆ ಎಟಿಎಂಗೆ ತುಂಬಲು ಎಸ್‌ಬಿಐ (SBI) ಬ್ಯಾಂಕಿನಿಂದ ಹಣ ತೆಗೆದುಕೊಂಡು ಹೊರ ಬರುತಿದ್ದಾಗ ಎಟಿಎಂ ಭದ್ರತಾ ಏಜೆನ್ಸಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ಬೀದರ್‌ನ ಹೃದಯ ಭಾಗ ಶಿವಾಜಿ ಚೌಕ್ನಲ್ಲಿ ನಡೆದಿತ್ತು
ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ನ್ಯಾಯಾಲಯದ ಮಧ್ಯದಲ್ಲಿರುವ ಎಸ್‌ಬಿಐ ಬ್ಯಾಂಕ್ ಮುಂಭಾಗ ಈ ಘಟನೆ ಸಂಭವಿಸಿದೆ.
ಘಟನೆಯಲ್ಲಿ ಚಿದ್ರಿ ಗ್ರಾಮದ ನಿವಾಸಿಯಾದ ಗಿರೀಶ್ (32) ಹಾಗೂ ಶಿವಕುಮಾರ್ ಎನ್ನುವವರು ಗುಂಡೇಟಿನಿಂದ ಮೃತಪಟ್ಟಿದ್ದರು.