ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಕುರಿತು ಅವ್ಯಾಚ್ಯ ಪದ ಬಳಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನಪರಿಷತ್ ಸದಸ್ಯ ಸಿಟಿ ರವಿ (CT Ravi) ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಕಂಡುಬರುತ್ತಿದ್ದು, ಅಶ್ಲೀಲ ಪದ ಬಳಕೆ ಮಾಡಿರುವುದು ಖಚಿತ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು ಸಿಟಿ ರವಿ ಅವರ ವಾಯ್ಸ್ ಸ್ಯಾಂಪಲ್ ಪಡೆಯಲು ಮುಂದಾಗಿದ್ದರು ಆದರೆ, ಇದಕ್ಕೆ ಸಿ.ಟಿ.ರವಿ ನಿರಾಕರಿಸಿದ್ದರು.
ನಂತರ ಘಟನಾವಳಿಗಳ ಕುರಿತು ವೀಡಿಯೋ-ಅಡಿಯೋ ದಾಖಲೆ ನೀಡುವಂತೆ ಡಿಪಿಎಆರ್‌ಗೆ ಮನವಿ ಮಾಡಲಾಗಿತ್ತು.
ಅದರಂತೆ ಇದೀಗ ಡಿಪಿಎಆರ್‌ನಿಂದ ಅಸಲಿ ವೀಡಿಯೋವನ್ನು ಸಿಐಡಿ ವಶಕ್ಕೆ ಪಡೆದಿದ್ದು, ವಿಡಿಯೋ ಪರಿಶೀಲಿಸಿದ ಸಿಐಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಳರ್ ವಿರುದ್ಧ ಸಿಟಿ ರವಿ ಅವ್ಯಾಚ್ಯ ಪದ ಬಳಕೆ ಮಾಡಿರುವುದು ಖಚಿತ ಎನ್ನಲಾಗಿದೆ.