ಗೌರಿಬಿದನೂರು: ಹೋಂಡಾ ಸ್ಪ್ಲೆಂಡರ್ ಹಾಗೂ ಡಿಯೋ ಸ್ಕೂಟಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ಇಬ್ಬರು ಯುವಕರು ಸಾವನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕಾಮಲಪುರ ಬಳಿ ಸಂಭವಿಸಿದೆ.
ಮಂಚೇನಹಳ್ಳಿ ಹಾಗೂ ನೆಲಮಂಗಲ ಮೂಲದವರು ಎರಡು ಬೈಕ್ ಗಳಲ್ಲಿ ತಲಾ ಮೂವರು.. ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರನ್ನು ಮಂಚೇನಹಳ್ಳಿ ಮೂಲದ ಸಂತೋಷ್ ಹಾಗೂ ಮನೋಜ್ ಎನ್ನಲಾಗುತ್ತಿದ್ದು, ನೆಲಮಂಗಲ ಮೂಲದ ಮತ್ತಿಬ್ಬರಾದ ಮರಿಯಣ್ಣ ಹಾಗೂ ಶಿವಶಂಕರ್ ಗಂಭೀರವಾಗಿ ಗಾಯಗೊಂಡು, ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಉಳಿದಿಬ್ಬರಾದ ನೆಲಮಂಗಲದ ಕಿರಣ್, ಮಂಚೇನಹಳ್ಳಿಯ ರೆಹಮಾನ್ ಅವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎನ್ನಲಾಗಿದೆ.
ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.