ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Darshan) ಅವರ ಆತ್ಮ ರಕ್ಷಣೆಗೆ ನೀಡಲಾಗಿದ್ದ ಗನ್ ಲೈಸೆನ್ಸ್ ಅನ್ನು ಪೊಲೀಸರು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ತಮ್ಮ ಎರಡು ಗನ್ ಗಳನ್ನು ಆರ್.ಆರ್ ನಗರ ಪೊಲೀಸ್ ಸ್ಟೇಷನ್ ಗೆ ಸರೆಂಡರ್ ಮಾಡಿದ್ದಾರೆ.
ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಅವರ ಪ್ರಕರಣ ಇತ್ಯರ್ಥ ಆಗುವವರೆಗೆ ತಾತ್ಕಾಲಿಕವಾಗಿ ರದ್ದು ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಆದೇಶ ಮಾಡಿದ್ದಾರೆ.
ಈ ಹಿಂದೆ ಗನ್ ಲೈಸೆನ್ಸ್ ಅನ್ನು ರದ್ದು ಮಾಡುವ ಕುರಿತು ಪೊಲೀಸರು ದರ್ಶನ್ ಗೆ ನೋಟೀಸ್ ನೀಡಿದ್ದರು ಆದ್ರೆ ಆ ನಂತರ ದರ್ಶನ್ ಮನವೀಯ ಹೊರತಾಗಿಯೂ, ಅವರ ಗನ್ ಲೈಸೆನ್ಸ್ ರದ್ದಾಗಿದೆ. ಇದರ ಬೆನ್ನಲ್ಲೇ, ಎರಡು ಗನ್ ಗಳನ್ನು ಸರೆಂಡರ್ ಮಾಡಿದ್ದಾರೆ.
ಖ್ಯಾತ ನಟ ದರ್ಶನ್ ಅಪಾರ ಅಭಿಮಾನಿಗಳನ್ನು ರಾಜಕೀಯ ವಲಯದಲ್ಲಿ ಕೆಲ ಶತೃಗಳನ್ನು ಹೊಂದಿದ್ದಾರೆ. ಈ ನಡುವೆ ಅವರ ಆತ್ಮರಕ್ಷಣೆಗೆ ನೀಡಲಾಗಿರುವ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ರದ್ದು ಮಾಡಿ, ಹಿಂಪಡೆದಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.