ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಸಪ್ತಮಿ ಜವಬ್ದಾರಿ.21.2025 ಮಂಗಳವಾರ: ಚಿತ್ತಾ ನಕ್ಷತ್ರದಿಂದ ಸೇರಿರುವ ದಿನ ವಿಶೇಷವಾಗಿ ಅಮ್ಮನವರನ್ನು ಆರಾಧನೆ ಮಾಡಿದರೆ ದಿನವು ಶುಭವಾಗುತ್ತದೆ
ಮೇಷ ರಾಶಿ: ಅತ್ಯಂತ ಶುಭದಿನ ವಾಗಿರುತ್ತದೆ, ಮಾಡಿದ ಕಾರ್ಯದಲ್ಲಿ ಯಶಸ್ಸು ಲಭ್ಯವಾಗುತ್ತದೆ. ದೀರ್ಘವಾದ ಆಲೋಚನೆ ಬೇಡ, ಮುಂದಕ್ಕೆ ಹೋಗಿ ದೃಢವಾದ ನಿರ್ಧಾರ ತೆಗೆದುಕೊಳ್ಳಿ. (ಪರಿಹಾರಕ್ಕೆ ಶಿವನ ಮಂತ್ರವನ್ನು ಜಪ ಮಾಡಿ)
ವೃಷಭ ರಾಶಿ: ಭಯವನ್ನು ನಿಧಾನವಾಗಿ ಕಮ್ಮಿ ಮಾಡಿಕೊಳ್ಳಿ, ಅತಿಯಾಗಿ ಆತುರ ಬೇಡ.. ವಿಶ್ವಾಸದಿಂದ ಕಾರ್ಯವನ್ನು ನಡೆಸಿ ಧನಾಗಮವಾಗುತ್ತದೆ. ಯತ್ನ ಕಾರ್ಯಗಳಲ್ಲಿ ಜಯ ಶುಭವಾಗುತ್ತದೆ. (ಪರಿಹಾರಕ್ಕಾಗಿ ಆಂಜನೇಯ ಮಂತ್ರವನ್ನು ಜಪಿಸಿ)
ಮಿಥುನ ರಾಶಿ: ಅತಿಯಾದ ವಿಶ್ವಾಸ ಸ್ವಲ್ಪ ತೊಂದರೆಯನ್ನು ಕೊಡುತ್ತದೆ.. ಯೋಚಿಸಬೇಡಿ, ಎಲ್ಲ ಕಾರ್ಯದಲ್ಲೂ ಮುನ್ನುಗ್ಗಿ. ಆದರೆ ಸ್ವಲ್ಪ ಯೋಚಿಸಿ ನಡೆಯಿರಿ. ಚಿಂತ ಬೇಡ ವಿದ್ಯಾರ್ಥಿಗಳಿಗೆ ಶುಭ. (ಪರಿಹಾರಕ್ಕೆ ಗಣಪತಿ ಸ್ತೋತ್ರ ಪಾರಾಯಣ ಮಾಡಿ)
ಕಟಕ ರಾಶಿ: ಎಲ್ಲ ಕಾರ್ಯದಲ್ಲೂ ಮುನ್ನುಗ್ಗುವ ವಿಶ್ವಾಸ, ದೃಢವಾದ ನಿರ್ಧಾರ ಕೈಗೊಂಡಾಗ ಎಲ್ಲ ಕಾರ್ಯದಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ. ಮುಂದುವರೆಯಿರಿ ವಿದ್ಯಾರ್ಥಿಗಳಿಗೆ ಶುಭ, ಸಾಲದ ಹಣ ನಿಧಾನವಾಗಿ ವಾಪಸ್ ಆಗುತ್ತದೆ. ಚಿಂತೆ ಬೇಡ. (ಪರಿಹಾರಕ್ಕಾಗಿ ನಾರಾಯಣಿ ದೇವಸ್ಥಾನಕ್ಕೆ ಭೇಟಿ ಕೊಡಿ)
ಸಿಂಹ ರಾಶಿ: ಪೂರ್ವಜನ್ಮದ ಪಾಪಗಳಿಂದ ಸ್ವಲ್ಪ ದುಃಖ, ಮನಸ್ಸಿಗೆ ಸ್ವಲ್ಪ ಚಿಂತೆ ಯೋಚಿಸಬೇಡಿ ಸಹಜ. (ಪರಿಹಾರಕ್ಕಾಗಿ ರುದ್ರಾಭಿಷೇಕವನ್ನು ಮಾಡಿ)
ಕನ್ಯಾ ರಾಶಿ: ಆರೋಗ್ಯ ಉತ್ತಮವಾಗುತ್ತದೆ ಚಿಂತ ಬೇಡ.. ಶುಭವಾದ ದಿನಗಳು, ವಿದ್ಯಾರ್ಥಿಗಳಿಗೆ ಶುಭ, ಅನಾವಶ್ಯಕ ತಿರುಗಾಟವಿಲ್ಲದೆ ಕೆಲವು ಕೆಲಸಗಳು ಆಗುತ್ತವೆ. ಅಧಿಕವಾದ ಲಾಭ, ಯಶಸ್ಸು, ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ನಾಗರಾಧನೆ ಮಾಡಿ)
ತುಲಾ ರಾಶಿ: ಕೋಪ, ಅತಿಯಾದ ತಿರುಗಾಟ, ಸರ್ಕಾರಿ ಕಾರ್ಯಗಳು ಯಾವುದು ನಡೆಯುತ್ತಿಲ್ಲ ಎಂಬ ಭಯ.. ವಿಪರೀತವಾಗಿ ಆಲೋಚನೆ ಆಗಬೇಕಾದ ಕಾರ್ಯವು ನಡೆದೆ ತೀರುತ್ತದೆ ಚಿಂತೆ ಬೇಡ.
(ಪರಿಹಾರಕ್ಕಾಗಿ ಮಹಾವಿಷ್ಣುವಿನ ಪೂಜೆ ಜಪ ಅನುಷ್ಠಾನ ಮಾಡಿ)
ವೃಶ್ಚಿಕ ರಾಶಿ: ಆಲೋಚನೆಯಿಂದ ಶ್ರಮ, ಧನಾಗಮದಲ್ಲಿ ಸ್ವಲ್ಪ ವಿಳಂಬ, ಒಬ್ಬರೊಬ್ಬರು ಕೆಸರೆ ಚಾಟ, ವಿದ್ಯಾರ್ಜನೆ ಕುಂಠಿತ, ಭಯದ ವಾತಾವರಣ, ಸರ್ಪ ಭಯ, ಮುಖದಲ್ಲಿ ಪ್ರಸನ್ನತೆಯ ಕೊರತೆ. (ಪರಿಹಾರಕ್ಕಾಗಿ ಗಣಪತಿ ದೇವಾಲಯಕ್ಕೆ ಹೋಗಿ ನಮಸ್ಕರಿಸಿ ಬನ್ನಿ)
ಧನಸ್ಸು ರಾಶಿ: ಎಲ್ಲ ಕಾರ್ಯದಲ್ಲೂ ಬದಲಾವಣೆ, ಚಿಂತೆ ಬೇಡ ನಿರ್ಧಾರಕ್ಕೆ ಏನು ಕೊರತೆ ಇಲ್ಲ.. ಸಮಯವಿದೆ ಯೋಚಿಸಬೇಡಿ ಒಳ್ಳೆಯದಾಗುತ್ತದೆ, ಶಾಂತ ಸ್ವಭಾವ ಎಲ್ಲ ಕಾರ್ಯವನ್ನು ಪೂರ್ಣವಾಗಿಸುತ್ತದೆ. (ಪರಿಹಾರಕ್ಕಾಗಿ ಆಂಜನೇಯ ಸ್ತೋತ್ರವನ್ನು ಪಾರಾಯಣ ಮಾಡಿ)
ಮಕರ ರಾಶಿ: ಒಳ್ಳೆಯ ಸುದ್ದಿ, ಶತ್ರುಗಳು ಸಹ ಮಿತ್ರರಾಗುವ ದಿನ. ಬಹಳ ಆಲೋಚನೆಯಿಂದ ಸಂದಾನ ಕಾರ್ಯ ಮುಂದುವರೆಯಲಿ. ವಿದ್ಯಾರ್ಜನೆ ಲಾಭ, ಏಕಾಗ್ರತೆಯ ಕೊರತೆ. ಕಿಂಚಿತ್ ಆರೋಗ್ಯ ಸಮಸ್ಯೆ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಧನವಂತರಿ ಪೂಜೆ ಹೋಮ ಮಾಡಿಸಿಕೊಳ್ಳಿ)
ಕುಂಭ ರಾಶಿ: ಒಳ್ಳೆಯ ವಿದ್ಯಾರ್ಜನೆ, ಅನಾರೋಗ್ಯ, ಸರಸ ಸಲ್ಲಾಪಗಳಿಂದ ಮಾತುಕತೆ, ಜೀವನದ ಸಂತೃಪ್ತಿ, ಮನಸ್ಸಿಗೆ ಆರೋಗ್ಯದ ಚಿಂತೆ, ತಂದೆಯ ಮಾತಿನಲ್ಲಿ ಕೊಂಕು (ಪರಿಹಾರಕ್ಕಾಗಿ ದುರ್ಗಾ ಸ್ತೋತ್ರದ ಪಾರಾಯಣ ಮಾಡಿ)
ಮೀನ ರಾಶಿ: ಅನಾವಶ್ಯಕ ಚಿಂತೆ ಅಧಿಕ ತಿರುಗಾಟ, ಶತ್ರು ಕಾಟ, ಆನಂದದಿಂದ ನೆಮ್ಮದಿ, ಮನಸ್ಸಿಗೆ ಸ್ವಲ್ಪ ಕಿರಿಕಿರಿ,ಒಳ್ಳೆಯ ಭವಿಷ್ಯ, ಮಕ್ಕಳ ಆರೋಗ್ಯ ದೃಢ. (ಪರಿಹಾರಕ್ಕಾಗಿ ರಾಮರಕ್ಷಾ ಸ್ತೋತ್ರವನ್ನು ಓದಿಕೊಳ್ಳಿ)
ರಾಹುಕಾಲ: 3-00 PMರಿಂದ 4-30PM
ಗುಳಿಕಕಾಲ: 12-00 PM ರಿಂದ 1-30PM
ಯಮಗಂಡಕಾಲ: 9-00AMರಿಂದ 10-30AM
ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್‌ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572.