ದೊಡ್ಡಬಳ್ಳಾಪುರ: ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ (WWW India) ಸಂಸ್ಥೆಯ ವತಿಯಿಂದ ಬಾಶೆಟ್ಟಿಹಳ್ಳಿ ಕೆರೆಗೆ ಹೊಂದಿಕೊಂಡಿರುವ ಗೋಡೆಯ ಮೇಲೆ ಪರಿಸರ ಮಾಹಿತಿಯ ಚಿತ್ರಗಳನ್ನು ಬಿಡಿಸಲಾಯಿತು.
ಕೆರೆಗೆ ಬರುವವರಿಗೆ ಮತ್ತು ಹಾದು ಹೋಗುವವರಿಗೆ ಕೆರೆಯ ಸಂರಕ್ಷಣಾ ಮಹತ್ವ ತಿಳಿಸುವ ಉದ್ದೇಶದಿಂದ, ಕೆರೆಯ ಜೀವವೈವಿದ್ಯತೆ, ಕೆರೆಗಳ ಮಹತ್ವ, ಕೆರೆಗಳಿಗೆ ಇರುವ ತೊಂದರೆಗಳು ಮತ್ತು ಚಿಟ್ಟೆಗಳ ಬಗ್ಗೆ ಚಿತ್ರಗಳನ್ನು ಬಿಡಿಸಲಾಯಿತು.
ಸಂಸ್ಥೆಯವತಿಯಿಂದ ಇದೇ ಆವರಣದಲ್ಲಿ ಚಿಟ್ಟೆ ಉದ್ಯಾನವನ್ನು ಮಾಡಲಾಗುತ್ತಿದೆ.
ಅರ್ಥ್ ಸ್ಟುಡಿಯೋಸ್ನ (eARTh Studios) ಕಲಾವಿದರಾದ ಕೌಶಿಕ್ ಕೆ ಎಸ್, ಸಾಕ್ಷಿ ಕೆ, ಆಶಾ ಎಸ್ ಮಾರ್ಗದರ್ಶನದಲ್ಲಿ ಹೆಚ್ ಎಸ್ ಬಿ ಸಿ ಯ 50 ಉದ್ಯೋಗಿಗಳು ಚಿತ್ರಗಳನ್ನು ಬಿಡಿಸಿದರು.
ಈ ಸಂದರ್ಭದಲ್ಲಿ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯ ಲೋಹಿತ್ ವೈ ಟಿ, ಶಶಿಕಲಾ ಐಯ್ಯೇರ್, ಡಾ. ಶಾಂತನು ಗುಪ್ತ, ಕಾರ್ತಿಕ್ ಗೌಡ ನವೋದಯ ಚಾರಿಟೆಬಲ್ ಟ್ರಸ್ಟಿನ ಜನಾರ್ಧನ ಆರ್ ಇದ್ದರು.