ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಸಾಸಲು ಹೋಬಳಿಯ ಗುಂಡಮಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ (MPCS) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಗಿದೆ.
ತಾಪಂ ಮಾಜಿ ಅಧ್ಯಕ್ಷ ಹೆಚ್.ಎಸ್. ಅಶ್ವಥ್ ನಾರಾಯಣ ಕುಮಾರ್ ಹಾಗೂ ಸೊಣ್ಣೇನಹಳ್ಳಿ ವೆಂಕಟರಾಮರೆಡ್ಡಿ ನೇತೃತ್ವದ ಈ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ತಿಳಿದು ಬಂದಿದೆ.
ಗುಂಡಮಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ವಾಬಸಂದ್ರದ ಶಿವಣ್ಣ, ಉಪಾಧ್ಯಕ್ಷರಾಗಿ ಗುಂಡಮಗೆರೆ ಗಂಗರಾಜು ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ನರಸಿಂಹಮೂರ್ತಿ, ಹೊಸಹಳ್ಳಿ ಗ್ರಾಪಂ ಅಧ್ಯಕ್ಷ ನಾಗರತ್ನಮ್ಮ ಲಕ್ಷ್ಮೀನಾರಾಯಣ್, ಸದಸ್ಯರಾದ ರಮೇಶ್ ರೆಡ್ಡಿ, ಸಹನ ಸುಬ್ರಹ್ಮಣ್ಯ.
ಮುಖಂಡರಾದ ದನಪಾಲ ರೆಡ್ಡಿ, ಆನಂದ್, ಪ್ರಕಾಶ್ ರೆಡ್ಡಿ, ನಂಜೇಗೌಡ, ಗಂಗೇಗೌಡ, ನಂಜಪ್ಪ, ಮುನಿರಾಜು, ಅವಿನಾಶ್ ರೆಡ್ಡಿ, ವೆಂಕಟರಾಮು, ಸೆಂಟ್ರಿಗ್ ವೆಂಕಟರಮಣ, ಕಾರ್ಯದರ್ಶಿ ರಮಾನಂದ ರೆಡ್ಡಿ ಮತ್ತಿತರರಿದ್ದರು.