ಬೆಂ.ಗ್ರಾ.ಜಿಲ್ಲೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಕ್ರೀಡಾಕೂಟಗಳನ್ನು (Women’s Games) ಆಯೋಜನೆ ಮಾಡಲಾಗಿದೆ.
ಆಸಕ್ತ ಮಹಿಳೆಯರು ಫೆಬ್ರವರಿ 28 ರಂದು ಬೆಳಿಗ್ಗೆ 9.00 ಗಂಟೆಗೆ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಂಡು, ನೊಂದಣಿ ಮಾಡಿಕೊಳ್ಳುವುದು. ಕ್ರೀಡಾ ಸ್ಪರ್ಧೆಗಳು ಬೆಳಿಗ್ಗೆ 10.30 ಗಂಟೆಗೆ ಪ್ರಾರಂಭವಾಗುತ್ತದೆ.
ಆಯೋಜನೆ ಮಾಡಿರುವ ಕ್ರೀಡೆಗಳು
- 19 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹಗ್ಗ ಜಗ್ಗಾಟ (ಗುಂಪು 06 ಜನ)
- 19-35 ವರ್ಷ ಒಳಪಟ್ಟ ಮಹಿಳೆರಿಗೆಮ್ಯೂಸಿಕಲ್ ಚೇರ್,ಮಡಿಕೆ ಹೊಡೆಯುವುದು, ಬಾಲ್‌ಇನ್ ದಿ ಬಕೆಟ್,50 ಮೀ ವಾಕ್‌ರೇಸ್, ಲೆಮನ್ ಅಂಡ್ ಸ್ಪೂನ್
- 35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮ್ಯೂಸಿಕಲ್ ಚೇರ್,ಮಡಿಕೆ ಹೊಡೆಯುವುದು, ಬಾಲ್‌ಇನ್ ದಿ ಬಕೆಟ್ 50 ಮೀ ವಾಕ್ ರೇಸ್, ಲೆಮೆನ್ ಅಂಡ್ ಸ್ಪೂನ್ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಕ್ರೀಡಾ ಸೂಚನೆಗಳು
- ಕ್ರೀಡಾ ಸ್ಪರ್ಧೆಗಳು ಬೆಳಿಗ್ಗೆ 10.30 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ನೊಂದಣಿ ಕಡ್ಡಾಯವಾಗಿರುತ್ತದೆ.
- ಆಧಾರ್ ಗುರುತಿನ ಚೀಟಿ ಕಡ್ಡಾಯ.
- ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
- ಭಾಗವಹಿಸುವ ಮಹಿಳಾ ಕ್ರೀಡಾಪಟುಗಳಿಗೆ ಮಧ್ಯಾಹ್ನದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ.
- ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
- ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಹಾಜರಾತಿ ಪ್ರಮಾಣ ಪತ್ರವನ್ನು ನೀಡಲಾಗುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9632778567 / 080-29787443 ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.