Vijayendra appeal to Withdraw Suspension Order of 18 Legislators

ಶಾಸಕರ ಅಮಾನತು.. ಸ್ಪೀಕರ್‌ ಅವರಿಂದ ಪ್ರಜಾಪ್ರಭುತ್ವ ವಿರೋಧಿ ನಡೆ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸುವ ಕುರಿತ ಗೌರವಾನ್ವಿತ ಸ್ಪೀಕರ್ ಅವರ ನಿರ್ಧಾರವು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y.Vijayendra) ಅವರು ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಆಡಳಿತ ಪಕ್ಷದ ಹಿರಿಯ ಸಚಿವರಾದ ರಾಜಣ್ಣ ಅವರು ಸದನದ ಒಳಗೆ ಬಂದು ಅಂಗಲಾಚಿದ್ದಾರೆ. ಹನಿಟ್ರ್ಯಾಪ್ ಗೆ ಒಳಗಾಗಿದ್ದೇನೆ, ರಾಜ್ಯ ಹಾಗೂ ದೇಶದ 48ಕ್ಕೂ ಹೆಚ್ಚು ರಾಜಕಾರಣಿಗಳು ಹನಿಟ್ರ್ಯಾಪ್‍ಗೆ ಒಳಗಾಗಿದ್ದಾರೆ ಎಂದು ಬಹಿರಂಗವಾಗಿ ಸದನದಲ್ಲಿ ತಿಳಿಸಿದ ಸಂದರ್ಭದಲ್ಲಿ ಆ ಸಚಿವರಿಗೆ ರಕ್ಷಣೆ ಕೊಡುವ ಕರ್ತವ್ಯ ಸಭಾನಾಯಕರಾದ ಮುಖ್ಯಮಂತ್ರಿಗಳದು; ಅದೇ ರೀತಿ ಮಾನ್ಯ ಸಭಾಪತಿಗಳದ್ದು ಎಂದರು.

ಸದನದ 224 ಶಾಸಕರ ಮೇಲೂ ಕಳಂಕ ಬಂದಿದೆ. ಈ 224 ಶಾಸಕರಿಗೆ ರಕ್ಷಣೆ ಕೊಡುವ ಸ್ಥಾನದಲ್ಲಿ ಸಭಾಧ್ಯಕ್ಷರು ಕುಳಿತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ವಿಪಕ್ಷವಾಗಿ ನಾವು ಸಚಿವರ ಪರವಾಗಿ ಹೋರಾಟ ಮಾಡಿದರೆ ನಮ್ಮನ್ನು ಕತ್ತು ಹಿಡಿದು ಹೊರದಬ್ಬುವ ಕೆಲಸ ಮಾಡಿದ್ದು ಇದು ಖಂಡಿತ ಸರಿಯಲ್ಲ ಎಂದು ಖಂಡಿಸಿದರು.

ಮುಖ್ಯಮಂತ್ರಿಗಳು ರಕ್ಷಣೆಯ ಹೊಣೆಗಾರಿಕೆ ವಹಿಸಬೇಕಿತ್ತು. ನೀವೇ ಸಚಿವರ ರಕ್ಷಣೆಗೆ ಬರಬೇಕಿತ್ತು. ರಕ್ಷಣೆ ವಿಚಾರಕ್ಕೆ ಪ್ರತಿಭಟನೆ ಮಾಡಿದರೆ ನಮ್ಮ ಶಾಸಕರನ್ನು ಎತ್ತಿ ಹಾಕುವ ಕೆಲಸ ಮಾಡಿದ್ದಾರೆ. ಇದು ಖಂಡಿತ ಸರಿಯಲ್ಲ ಎಂದು ಆಕ್ಷೇಪಿಸಿದರು.

ದೇಶದ ಮುಂದೆ ಶಾಸಕರ ಗೌರವ ಹರಾಜಾಗುವಂತಾಗಿದೆ. ಅಧಿಕಾರದ ಮದ ಎಲ್ಲಿಗೆ ಬಂದಿದೆ ಎಂದರೆ ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಇದರ ಪರಿಣಾಮವಾಗಿ ಸಚಿವರು, ಶಾಸಕರನ್ನು ಬೀದಿಗೆ ತರುವ ಕೆಲಸವನ್ನು ಆಡಳಿತ ಪಕ್ಷದವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದಲಿತ, ಪರಿಶಿಷ್ಟ ಪಂಗಡದ ಸೇರಿದ ಸಚಿವರ ಮಾನ ಹರಾಜಾಗುವ ಕೆಲಸ ನಡೆದಿದ್ದು, ಅವರ ರಕ್ಷಣೆಗೆ ಬರುವ ತಾಕತ್ತಿಲ್ಲವೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು. ಹಿಂದೆ ಇವರೇ ಮುಖ್ಯಮಂತ್ರಿ ಆಗಿದ್ದಾಗ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಗೆ ಮುಸ್ಲಿಂ ಪುಡಾರಿಗಳು ಬೆಂಕಿ ಹಚ್ಚಿದ್ದರು. ಆದರೆ, ಆ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ರಕ್ಷಣೆಗೆ ಅಂದಿನ ಮುಖ್ಯಮಂತ್ರಿಗಳು ಬಂದಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅದೇ ರೀತಿ ಮತ್ತೊಮ್ಮೆ ಪುನರಾವರ್ತನೆಯಾಗಿದೆ. ದಲಿತರ ಬಗ್ಗೆಯೂ ಕಾಳಜಿ ಇಲ್ಲ; ಪರಿಶಿಷ್ಟ ಪಂಗಡದವರ ಬಗ್ಗೆ ಕಾಳಜಿ ಇಲ್ಲ. ಕೇವಲ ಮುಸಲ್ಮಾನರ ಹಿಂದೆ ಹೊರಟ ಮುಖ್ಯಮಂತ್ರಿಗಳು ಸದನದಲ್ಲಿ ಶಾಸಕರು, ಸಚಿವರ ರಕ್ಷಣೆಗೆ ಬರುತ್ತಿಲ್ಲವೆಂದಾದರೆ ಇಂಥ ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಮುಂದುವರಿಯಬೇಕೇ ಎಂದು ಯೋಚಿಸಬೇಕು ಎಂದರು.

ನಿನ್ನೆ ದಿನ ಸದನ ನಡೆಯುವ ಸಂದರ್ಭದಲ್ಲಿ ಯಾರು ಚೀಟಿ ಕೊಟ್ಟರು? ಎಲ್ಲವೂ ತನಿಖೆ ಮಾಡಲಿ. ಬಿಜೆಪಿ- ಜೆಡಿಎಸ್ ಪಕ್ಷಗಳು ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸುತ್ತೇವೆ. ಅಲ್ಲದೆ ಗೌರವಾನ್ವಿತ ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ ಎಂದು ಪ್ರಕಟಿಸಿದರು.

ಆಡಳಿತ ಪಕ್ಷದ ಸಚಿವರ ರಕ್ಷಣೆಗೆ ಬಾರದ ಮುಖ್ಯಮಂತ್ರಿಗಳ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಮುಖ್ಯಮಂತ್ರಿಗಳ ನಡೆಯೂ ಪ್ರಶ್ನಾರ್ಹ ಎಂದು ಅವರು ತಿಳಿಸಿದರು. ಕರ್ನಾಟಕದ ಸಚಿವರ ಹನಿಟ್ರ್ಯಾಪ್ ಕುರಿತ ಹೇಳಿಕೆ ದೇಶವ್ಯಾಪಿ ಚರ್ಚೆಗೆ ಒಳಪಡುತ್ತಿದೆ ಎಂದು ವಿವರಿಸಿದರು.

ನಡೆದಿರುವುದು ಸತ್ಯ ಎಂದು ಸತೀಶ್ ಜಾರಕಿಹೊಳಿ ಅವರೂ ಹೇಳಿಕೆ ಕೊಟ್ಟಿದ್ದಾರೆ. ಹನಿಟ್ರ್ಯಾಪ್ ಮಾಡಿದ ಶಾಸಕರು, ಸಚಿವರ ಹೆಸರು ಬಹಿರಂಗಪಡಿಸಲು ಮುಖ್ಯಮಂತ್ರಿಗಳು ಸೂಚಿಸಬೇಕಿತ್ತು. ತನಿಖೆಗೆ ಆದೇಶಿಸುವುದಾಗಿ ಹೇಳುವ ಧೈರ್ಯ ತೋರಿಸಬೇಕಿತ್ತು ಎಂದು ಸವಾಲು ಹಾಕಿದರು. ಮುಖ್ಯಮಂತ್ರಿಗಳು ಆ ಧೈರ್ಯ ತೋರಿಲ್ಲ ಎಂದು ಟೀಕಿಸಿದರು.

ರಾಜ್ಯದ ಜನರ ಮುಂದೆ ಮುಖ್ಯಮಂತ್ರಿಗಳ ಬಂಡವಾಳ ಬಯಲಾಗಿದೆ. ಕಾಂಗ್ರೆಸ್ ಪಕ್ಷವು ರಾಜ್ಯದ ಜನರ ಮುಂದೆ ಬೆತ್ತಲಾಗಿದೆ ಎಂದು ತಿಳಿಸಿದರು. ರಾಜ್ಯದ ತೆರಿಗೆ ಹಣವನ್ನು ಒಂದು ಧರ್ಮಕ್ಕೆ ಸೀಮಿತವಾಗಿ ಹಂಚುವುದಾದರೆ ಇದನ್ನು ನೋಡಿಕೊಂಡು ಸುಮ್ಮನೆ ಕೂರಬೇಕೇ ಎಂದು ಕೇಳಿದರು.

ರಾಜಕೀಯ

ಪೊಲೀಸ್ ಅಧಿಕಾರಿ ಮೇಲೆ ಸಿಎಂ ಸಿದ್ದರಾಮಯ್ಯ ಕೈ ಎತ್ತಿದ್ದು ಗೂಂಡಾ ವರ್ತನೆಗೆ ಸಾಕ್ಷಿ; ಬಿವೈ ವಿಜಯೇಂದ್ರ ಕಿಡಿ

ಪೊಲೀಸ್ ಅಧಿಕಾರಿ ಮೇಲೆ ಸಿಎಂ ಸಿದ್ದರಾಮಯ್ಯ ಕೈ ಎತ್ತಿದ್ದು ಗೂಂಡಾ ವರ್ತನೆಗೆ ಸಾಕ್ಷಿ;

ಪೊಲೀಸ್‌ ವರಿಷ್ಠಾಧಿಕಾರಿಯನ್ನು ಏಕವಚನದಲ್ಲಿ ಸಂಬೋಧಿಸಿ, ಹತಾಶೆಯಿಂದ ಆರ್ಭಟಿಸಿ ಕೈ ಮಾಡಲು ಮುಂದಾಗಿರುವ ಸಿದ್ದರಾಮಯ್ಯ (Cmsiddaramaiah) ಅವರ ಕ್ರಮ ಮುಖ್ಯಮಂತ್ರಿ ಸ್ಥಾನದ ಘನತೆಗೆ ಧಕ್ಕೆ ತಂದ ಗೂಂಡಾ ವರ್ತನೆಯಾಗಿದೆ ಎಂದು ಬಿವೈ ವಿಜಯೇಂದ್ರ (BY Vijayendra)

[ccc_my_favorite_select_button post_id="105856"]
ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿಎಂ, ಡಿಸಿಎಂ ಆಗಮನ

ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಭೈರದೇನಹಳ್ಳಿ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ

[ccc_my_favorite_select_button post_id="105775"]
ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಡಾ.ಕೆ.ಕಸ್ತೂರಿ ರಂಗನ್ (Dr.K.Kasturirangan) ಅವರು ಶುಕ್ರವಾರ ನಿಧನರಾಗಿದ್ದಾರೆ.

[ccc_my_favorite_select_button post_id="105768"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಡೆಲ್ಲಿ ವಿರುದ್ಧ ಗೆಲುವು.. ಟೇಬಲ್ ಟಾಪಲ್ಲಿ RCB

ಡೆಲ್ಲಿ ವಿರುದ್ಧ ಗೆಲುವು.. ಟೇಬಲ್ ಟಾಪಲ್ಲಿ RCB

ಕೃಣಾಲ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಅವರ ಬಹು ಮುಖ್ಯ ಜತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭಾನುವಾರ ಎದುರಾಳಿ

[ccc_my_favorite_select_button post_id="105823"]
ಮಲಗಿದ್ದ ಪತಿಯ ಕತ್ತಿಗೆ ಚಾಕು ಹಾಕಿದ ಪತ್ನಿ..!Murder

ಮಲಗಿದ್ದ ಪತಿಯ ಕತ್ತಿಗೆ ಚಾಕು ಹಾಕಿದ ಪತ್ನಿ..!Murder

ಕ್ಷುಲ್ಲಕ ಕಾರಣಕ್ಕೆ ತನ್ನ ಪತಿಯನ್ನೇ ಕೊಲೆ (Murder) ಮಾಡಲು ಯತ್ನಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.

[ccc_my_favorite_select_button post_id="105815"]
ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಸಂಭವಿಸಿದ ಸರಣಿ ಅಪಘಾತಗಳು ಆತಂಕಕ್ಕೆ ಕಾರಣವಾಗಿದೆ. harithalekhani

[ccc_my_favorite_select_button post_id="105576"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!