ಗೌರಿಬಿದನೂರು: ಶಾಲಾ ವಾಹನ ಮತ್ತು ದ್ವಿಚಕ್ರ, ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ (Accident) ಇಬ್ಬರು ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹಿಂದೂಪುರ ಬೈಪಾಸ್ ರಸ್ತೆಯ ನರಿಂಗ್ ಕಾಲೇಜು ಮುಂಭಾಗದಲ್ಲಿ ಜರುಗಿದೆ.
ಮೃತನ ಬಳಿಯಿದ್ದ ಆಧಾರ್ ಕಾರ್ಡ್ ಮೂಲಕ ಪ್ರಕಾಶ್ ಮನಕಿ(20 ವರ್ಷ) ಎಂದು ತಿಳಿದುಬಂದಿದ್ದು, ಮತ್ತೊಬ್ಬ ಯುವಕ (25 ವರ್ಷ) ನ ಮಾಹಿತಿ ಲಭ್ಯವಾಗಿಲ್ಲ.
ಚಿಕ್ಕಬಳ್ಳಾಪುರದಿಂದ ನಾಗಾರ್ಜುನ ಕಾಲೇಜಿನ ಬಸ್ ಹಿಂದೂಪುರ ಬೈಪಾಸ್ ರಸ್ತೆಯ ಮೂಲಕ ತೆರಳುತ್ತಿದ್ದು ಹಿಂದೂಪುರ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರು ಮುಖಾಮುಖಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿ , ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ತಕ್ಷಣ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಶಾಲಾ ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.